Home ಜಿಲ್ಲೆ ಮಲ್ಲಪ್ಪನ ಮಟ್ಟಿಯಲ್ಲಿ ಎರ್ರಿತಾತನ ಶಿಲಾ ಮಂಟಪದ ಉದ್ಘಾಟನೆ ಸಮಾರಂಭ ಆ 16 ರಿಂದ

ಮಲ್ಲಪ್ಪನ ಮಟ್ಟಿಯಲ್ಲಿ ಎರ್ರಿತಾತನ ಶಿಲಾ ಮಂಟಪದ ಉದ್ಘಾಟನೆ ಸಮಾರಂಭ ಆ 16 ರಿಂದ

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಆ.14:  ತಾಲೂಕಿನ ಸುಕ್ಷೇತ್ರ ಚೇಳ್ಳಗುರ್ಕಿಯಲ್ಲಿ ಜೀವ ಸಮಾಧಿಯಾಗಿರುವ ಅವಧೂತ ಎರ್ರಿತಾತಾ ಚೇಳ್ಳಗುರ್ಕಿಗೆ ಬರುವ ಮುನ್ನ  ಈ ಗ್ರಾಮದ ಗಡಿ ಭಾಗದಲ್ಲಿನ ಆಂದ್ರ ಪ್ರದೇಶಕ್ಕೆ ಸೇರಿರುವ ಮಲ್ಲಪ್ಪನ ಮಟ್ಟಿಯಲ್ಲಿ ಬಂದು ನೆಲಸಿದ್ದ ಸ್ಥಳದಲ್ಲಿ ಈಗ ಶ್ವೇತವರ್ಣದ ಶಿಲಾ ಮಂಟಪ ಹಾಗು ಗರ್ಭಗುಡಿಯನ್ನು ನಿರ್ಮಾಣ ಮಾಡಿದ್ದು. ಇದರ ಉದ್ಘಾಟನಾ ಸಮಾರಂಭ ಆಗಷ್ಟ್ 16 ಮತ್ತು 17 ರಂದು ಹಮ್ಮಿಕೊಂಡಿದೆ.

ಚೇಳ್ಳಗುರ್ಕಿಗೆ ಹೋಗಿ ಎರ್ರಿತಾತಾನ ದರ್ಶನ ಪಡೆಯುವ. ಕರ್ನಾಟಕ ಮತ್ತು ಆಂದ್ರಪ್ರದೇಶದ ಬಹುತೇಖ ಭಕ್ತರು ತಾತಾ ಪಾದಾರ್ಪಣೆ ಮಾಡಿದ್ದ ಈ ಮಲ್ಲಪ್ಪನಮಟ್ಟೆಯ ದರ್ಶನ ಸಹ ಪಡೆಯುತ್ತಿದ್ದರು.

ಮಟ್ಟಿ ಮೇಲೆ ಇರುವ ಈ ಸ್ಥಳ  ಸುಂದರ ಪ್ರಕೃತಿ, ಶಾಂತ ವಾತಾವರಣದಿಂದ ಭಕ್ತರ ಮೆಚ್ಚುಗೆಯ ತಾಣವೂ ಆಗಿತ್ತು.  ಬುಹೇತಕ ವರ್ಷಗಳಿಂದ ಇಲ್ಲಿ ಒಂದು ಚಿಕ್ಕ ಮಂಟಪ ಮಾತ್ರ ಇತ್ತು.

ಇಲ್ಲಿ ಚೇಳ್ಳಗುರ್ಕಿಯ  ಶ್ರೀ ಎರ್ರಿಸ್ವಾಮಿ ಜೀವ ಸಮಾಧಿ ಟ್ರಸ್ಟ್ ಹಾಗು ಶ್ರೀ ಎರ್ರಿಸ್ವಾಮಿ ದಾಸೋಹ ಸೇವಾ ಸಂಘ ಈ ನಾಲ್ಕು ಎಕರೆ ಪ್ರದೇಶವನ್ನು ಆಂದ್ರ ಪ್ರದೇಶದ ಸರ್ಕಾರದಿಂದ ಪಡೆದು ದಾನಿಗಳ ನೆರವಿನಿಂದ 4.5 ಕೋಟಿ ರೂ ವೆಚ್ಚದಲ್ಲಿ ಗರ್ಭಗುಡಿ ಮತ್ತು ಸುತ್ತಲೂ ಶಿಲಾ ಮಂಟಪ ನಿರ್ಮಿಸಲಾಗಿದೆ.

ಈ ಕಾರ್ಯ 2018 ರಿಂದಲೇ ಆರಂಭಗೊಂಡಿತಾದರೂ ರ್ಕೊವಿಡ್ ನಿಂದಾಗಿ ವಿಳಂಬವಾಯ್ತು. ಈಗ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.

ಈ ತಿಂಗಳ 16 ಮತ್ತು 17 ರಂದು ಉದ್ಘಾಟನಾ ಸಮಾರಂಭ ನಡೆಯುತ್ತಿದೆ. 16 ರಂದು ಬೆಳಿಗ್ಗೆ 4.30 ಕ್ಕೆ ಆಲಯ ಪ್ರವೇಶ, ನಂತರ ಕುಂಬ ತರುವುದು,  ಅಭಿಷೇಕ, ಪಂಚ ಕಳಸ ಪ್ರತಿಷ್ಠಾಪನೆ, ನವಗ್ರಹ ಶಾಂತಿ, ಹೋಮ, ಸೇರಿದಂತೆ  ಪೂಜಾ ವಿಧಿ ವಿಧಾನಗಳು ಪಾಲ್ತೂರಿನ ಚನ್ನವೀರ ಶಿವಾಚಾರ್ಯರ ಸಾನಿಧ್ಯದಲ್ಲಿ ನಡೆಯಲಿದೆ.

ಆ.17  ರಂದು ಬೆಳಗಿನ ಜಾವ ಎರ್ರಿತಾತಾನ ನೂತನ ವಿಗ್ರಹ ಪ್ರಾಣ ಪ್ರತಿಷ್ಟಾಪನೆ, ಹಾಗು ಕಳಶಾರೋಹಣ ನಡೆಯಲಿದೆ. ಜಂಗಮರ ಹೊಸಳ್ಳಿಯ ಪುರವರ್ಗ ಮಠದ ಅಜಾತ ಶಂಭುಲಿಂಗ ಶಿವಾಚಾರ್ಯರು ಹಾಗು ಉರವಕೊಂಡ ಗವಿಮಠದ ಡಾ.ಕರಿಬಸವರಾಜೇಂದ್ರ ಸ್ವಾಮಿಗಳ ಸಾನಿಧ್ಯದಲ್ಲಿ ನಡೆಯಲಿದೆ.

ನಂತರ ಬೆಳಿಗ್ಗೆ 10 ಕ್ಕೆ ಕಪ್ಪತಗುಡ್ಡದದ ಶಿವಕುಮಾರಸ್ವಾಮಿಗಳಿಂದ ಮಹಾದ್ವಾರದ ಉದ್ಘಾಟನೆ ನಡೆಯಲಿದೆ. ಮಧ್ಯಾಹ್ನ 12 ಕ್ಕೆ ಸಂಡೂರಿನ ವಿರಕ್ತ ಮಠದ ಪ್ರಭುಸ್ವಾಮಿ ಮತ್ತು ವಿವಿಧ ಮಠಾಧೀಶರ ಸಾನಿಧ್ಯದಲ್ಲಿ ಧರ್ಮಸಭೆ, ಪರಿಸರ ಜೀವ ವೈವಿಧ್ಯತೆ ಕಾಪಾಡುವುದು, ಜಲಾನಯನ ಅಭಿವೃದ್ದಿಯ ಸವಾಲಯಗಳು, ದಾಸೋಹ ಹಾಗು ಆಡಳಿತ ನಿರ್ವಹಣೆ ಬಗ್ಗೆ ಪ್ರವಚನ,  ನಡೆಯಲಿದೆ.

ಹಂಪಿ ಹೇಮಕೂಟದ ಶ್ರೀಗಳಿಂದ ಸ್ಮರಣ ಸಂಚಿಕೆ ಬಿಡುಗಡೆ. ಕಲ್ಯಾಣ ಸ್ವಾಮಿಗಳಿಂದ ದಾನಿಗಳಿಗೆ ಸನ್ಮಾನ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.