
ಮಲ್ಪೆ: ಮಲ್ಪೆ ಬಂದರು ಪ್ರದೇಶದಲ್ಲಿ ಬೆಳಿಗ್ಗೆ ೭.೪೫ ಗಂಟೆಗೆ ಮೀನು ಏಲಂ ವೃತ್ತಿ ಮಾಡಿಕೊಂಡಿರುವ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿರುವ ಕುರಿತು ಪ್ರಕರಣ ದಾಖಲಾಗಿದೆ.
ಹಲ್ಲೆಗೊಳಗಾದವರು ಶೇಖ್ ಅಯ್ಯೂಬ್ (೫೨) ಎಂದು ಗುತುತಿಸಲಾಗಿದೆ. ಅವರು ಬೆಳಿಗ್ಗಿನ ಸಮಯ ಮೀನು ಏಲಂ ಮಾಡುತ್ತಿರುವ ಸಂದರ್ಭದಲ್ಲಿ ಆರೋಪಿ ಮಿಥುನ್ ಕರ್ಕೇರ ಅವರು ಹಲ್ಲೆ ನಡೆಸಿರುವ ಕುರಿತು ಪ್ರಕರಣ ದಾಖಲಾಗಿದೆ.
ಘಟನೆಯ ವಿವರ: ದೂರುದಾರರು ಬಂದರಿನಲ್ಲಿ ಮೀನು ಏಲಂ ಮಾಡುವ ಕೆಲಸ ಮಾಡಿಕೊಂಡಿದ್ದು ದಿನಾಂಕ ೨೬-೦೨-೨೦೨೬ ರಂದು ಪಿರ್ಯಾದಿದಾರ ಶೇಖ್ ಅಯ್ಯುಬ್ ಅವರಿಗೆ ಒಬ್ಬ ಹುಡುಗ ಮೀನು ಏಲಂ ಮಾಡಲು ಕೊಟ್ಟು ಅದರಂತೆ ಏಲಂ ಮಾಡಲು ನೆಲದಲಲ್ಲಿ, ಇಟ್ಟಾಗ ಬೆಳಿಗ್ಗೆ. ೦೭:೪೫ ಗಂಟೆಗೆ ಆರೋಪಿ ಮಿಥುನ್ ಕರ್ಕೇರಾ ಎಂಬುವವರು ಬಂದು ನೀನು ಏಕೆ ಏಲಂ ಮಾಡುತ್ತೀಯಾ? ನೀನು ಯಾಕೆ ಮೀನು ತಂದೀ? ಎಂದು ಹೇಳಿ ಏಕಾಏಕಿ ತಡೆದು ಮುಷ್ಠಿಯಿಂದ ಕೆನ್ನೆಗೆ ಕಣ್ಣಿನ ಬಲಭಾಗಕ್ಕೆ ಹೊಟ್ಟೆಯ ಬಲಬದಿಗೆ, ತಲೆಗೆ ಹೊಡೆದು ಕಾಲಿನ ಮೊಣಗಂಟಿಗೆ ತುಳಿದು ಅವಾಚ್ಯ ಶಬ್ಬದಿಂದ ಬೈದಿದರೆಂದು ದೂರಿನಲ್ಲಿ ಆರೋಪಿಸಲಾಗಿದೆ.






























