Home ಜಿಲ್ಲೆ ಮೈಸೂರು ಮಲೆ ಮಹದೇಶ್ವರ ಬೆಟ್ಟಕ್ಕೆ ಲಕ್ಷಾಂತರ ಭಕ್ತಾದಿಗಳ ಆಗಮನ

ಮಲೆ ಮಹದೇಶ್ವರ ಬೆಟ್ಟಕ್ಕೆ ಲಕ್ಷಾಂತರ ಭಕ್ತಾದಿಗಳ ಆಗಮನ

ಸಂಜೆವಾಣಿ ವಾರ್ತೆ
ಹನೂರು.ಫೆ.13:-
ಶ್ರೀ ಮಲೈ ಮಹದೇಶ್ವರ ಬೆಟ್ಟದಲ್ಲಿ ಫೆ .14 ರಿಂದ 5 ದಿನಗಳ ಕಾಲ ಜರುಗುವ ಮಹಾಶಿವರಾತ್ರಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಈಗಾಗಲೆ ಲಕ್ಷಾಂತರ ಭಕ್ತಾದಿಗಳು ಆಗಮಿಸುತ್ತಿದ್ದು ಶ್ರೀ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಸಿದ್ದತೆ ಮಾಡಿಕೊಂಡಿದೆ.


ಮಹದೇಶ್ವರ ಬೆಟ್ಟದ ಬೇಡಗಂಪಣ ಅರ್ಚಕರು ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ರಥ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡು ಈಗಾಗಲೇ ಮಹಾ ಶಿವರಾತ್ರಿ ಜಾತ್ರೆಗೆ ಸಿದ್ಧಗೊಂಡಿದೆ. ಇದನ್ನು ಬಿದುರು ಹಾಗೂ ಉರಿಯ ಹಗ್ಗಗಳಿಂದ ರಥವನ್ನು ನಿರ್ಮಾಣ ಮಾಡಲಾಗಿದ್ದು, ವಸ್ತ್ರ ಧಾರಣೆ ಸಹ ಆಗಿದ್ದು ಆಕರ್ಷಣೆಯಾಗಿ ತೇರನ್ನು ಕಂಗೊಳಿಸುವಂತೆ ಮಾಡಿದ್ದಾರೆ.
ಐದು ದಿನಗಳ ಕಾಲ ವಿಬೃಂಜಣೆಯಿಂದ ಮಹಾಶಿವರಾತ್ರಿ ಜಾತ್ರೆ ಜರುಗಲಿದ್ದು, ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ವಿಶೇಷ ದಾಸೋಹ ವ್ಯವಸ್ಥೆ ಸೇರಿದಂತೆ ರಾಜಗೋಪುರದ ಮುಂಭಾಗ ಹಾಗೂ ಕ್ಯೂ ಲೇನ್, ನೆರಳಿನ ವ್ಯವಸ್ಥೆ ಮಾಡಲಾಗಿದೆ. ದರ್ಶನ ಮಾಡುವ ವೇಳೆ ಭಕ್ತರ ನೂಕ ನುಗ್ಗಲು ತಡೆಗಟ್ಟಲು ಸರತಿ ಸಾಲು ನಿರ್ಮಾಣ ಮಾಡಲಾಗಿದ್ದು, ಹೆಚ್ಚುವರಿ ಲಾಡು ಕೌಂಟರ್ ತೆರೆಯಲಾಗಿದೆ.


ವಿವಿಧ ಕಡೆಗಳಲ್ಲಿ ಕುಡಿಯುವ ನೀರು, ಶೌಚಗೃಹ ಮತ್ತು ಇನ್ನಿತರ ಅಗತ್ಯ ಸೌಕರ್ಯ ಒದಗಿಸಿ ಜಾತ್ರೆಗೆ ಸಜ್ಜಾಗಿದ್ದಾರೆ.
ವಿಶೇಷವಾಗಿ 500 ಬಸ್ ಸಂಚಾರ ಮಾಡಲಿದ್ದು, ಫೆಬ್ರವರಿ 14 ರಿಂದ ರಿಂದ 18 ರವರೆಗೆ ಶಿವರಾತ್ರಿ ಜಾತ್ರಾ ಜರುಗಲಿದೆ. ಹೀಗಾಗಿ ಮಹದೇಶ್ವರ ಬೆಟ್ಟಕ್ಕೆ ತೆರಳುವ ದ್ವಿ-ಚಕ್ರ ವಾಹನಗಳನ್ನು ತಾತ್ಕಲಿಕ ನಿರ್ಬಂಧ ವಿಧಿಸಿದ್ದು, ಕೌದಳ್ಳಿ ಗ್ರಾಮದ ಬಳಿ ದ್ವಿಚಕ್ರ ವಾಹನ ನಿಲುಗಡೆ ಸೌಲಭ್ಯ ಕಲ್ಪಿಸಲಾಗಿದೆ.
3 ಲಕ್ಷ ಲಾಡು ಸಂಗ್ರಹವಾಗಿದ್ದು, ಅಗತ್ಯ ತಕ್ಕಂತೆ ಲಾಡು ಸಿದ್ದವಾಗಲಿದೆ. ದೇವಾಲಯ ಹಾಗೂ ಸುತ್ತಮುತ್ತ ಕಣ್ಮನಸೆಳೆಯುವ ವಿದ್ಯುತ್ ದೀಪಾಲಂಕ ಮಾಡಲಾಗಿದ್ದು ಪೆÇೀಲೀಸ್ ಬಂದೋಬಸ್ತ್ ಸಹ ಕೈಗೊಳ್ಳಲಾಗಿದೆ. ಈಗಾಗಲೆ ಜಾತ್ರೆ ಪ್ರಯುಕ್ತ ಕಾಲ್ನಡಿಗೆ ಹಾಗೂ ವಾಹನಗಳ ಮೂಲಕ ಆಗಮಿಸಿದ ಲಕ್ಷಾಂತರ ಭಕ್ತರು ಪ್ರಾರಂಗಣ, ಶ್ರೀ ಸಾಲೂರು ಬೃಹನ್ಮಠ ಹಾಗೂ ಇನ್ನಿತರ ಖಾಲಿ ಜಾಗಗಳಲ್ಲಿ ಬಿಡಾರ ಹೂಡಿದ್ದಾರೆ.
ಪ್ರಸಿದ್ದ ಧಾರ್ಮಿಕ ಯಾತ್ರಾ ಸ್ಥಳವಾದ ಮಲೆ ಮಹದೆಶ್ವರ ಬೆಟ್ಟಕ್ಕೆ ಜಾತ್ರಾ ಪ್ರಾರಂಭವಾಗುವುದಕ್ಕೂ ಮುನ್ನವೇ ಪಾದಯಾತ್ರಿಕರು ದೇವಾಲಯಕ್ಕೆ ಲಕ್ಷಾಂತರ ಭಕ್ತಾದಿಗಳು ಬಂದಿಳಿದಿದ್ದಾರೆ. ಗುರುವಾರ ಮದ್ಯಾಹ್ನದ ವೇಳೆಗೆ ತಂಬಡಿಗೇರಿ ಮಾರ್ಗವಾಗಿ ದೇವಾಲಯವನ್ನು ಪ್ರವೇಶಿಸಿದ ಭಕ್ತರಿಗೆ ರಾಜಗೋಪುರದ ಮುಂಭಾಗವಿರುವ ಅರಳಿಮರದ ಬಳಿಯಿಂದ ನೇರ ದೇವರ ಧರ್ಶನಕ್ಕೆ ಅನುವು ಮಾಡಿಕೊಡಲಾಗಿತ್ತು ಭಕ್ತಾದಿಗಳಿಗೆ ಎಲ್ಲಾ ಸರದಿ ಸಾಲಿನಿಂದಲೂ ಸಹ ಉಚಿತವಾಗಿ ದೇವರ ಧರ್ಶನಕ್ಕೆ ಅನುವು ಮಾಡಿಕೊಡಲಾಗಿತ್ತು.


ಕಾಲ್ನಡಿಗೆಯಲ್ಲಿ ಆಗಮಿಸುತ್ತಿರುವ ಭಕ್ತಸಮೂಹ:
ಮಹಾಶಿವರಾತ್ರಿ ಜಾತ್ರೆ ವಿಶೇಷವಾಗಿ ರಾಮನಗರ ಕನಕಪುರ ಚನ್ನಪಟ್ಟಣ ಈ ಭಾಗದ ಮಲೆ ಮಹದೇಶ್ವರ ಭಕ್ತಾದಿಗಳು ಕಾವೇರಿ ನದಿಯನ್ನು ದಾಟಿ ಬಸವನಕಡ ಅರಣ್ಯ ಪ್ರದೇಶದ ಮಾರ್ಗವಾಗಿ ಕಾಲುನಡೆಗೆಯಲ್ಲಿ ಆಗಮಿಸುತ್ತಿದ್ದಾರೆ. ಶಾಗ್ಯ ಗ್ರಾಮದ ಮೂಲಕ ಹಾದು ಬರುವ ಭಕ್ತಾದಿಗಳು ಗುಳ್ಯಾ ಗ್ರಾಮಕ್ಕೆ ತಲುಪಿ ನಂತರ ಅರಣ್ಯ ಪ್ರದೇಶದ ಮಾರ್ಗವಾಗಿ ಮಲೆ ಮಾದೇಶ್ವರ ಬೆಟ್ಟದ ಮುಖ್ಯರಸ್ತೆಗೆ ಸೇರುತ್ತಾರೆ.


ನಂತರ ಮಲೆ ಮಾದೇಶ್ವರ ಬೆಟ್ಟದ ಮಾರ್ಗವಾಗಿ ಕೌದಳ್ಳಿ ಗ್ರಾಮದಲ್ಲಿ ತಲುಪಿ ಅಲ್ಲಿಯೂ ವಾಸ್ತವ್ಯ ಹೂಡಿ ನಂತರ ತಾಳುಬೆಟ್ಟವನ್ನು ತಲುಪಿ ವಾಸ್ತವ್ಯ ಹೂಡುತ್ತಾರೆ. ನಂತರ ಕಾಲು ನಡುಗೆ ಮೂಲಕ ಅರಣ್ಯ ಪ್ರದೇಶದ ಮಾರ್ಗವಾಗಿ ಮಲೆ ಮಹದೇಶ್ವರ ಬೆಟ್ಟಕ್ಕೆ ತಲುಪುತ್ತಿದ್ದಾರೆ. ಕಾಲ್ನಡಿಗೆಯಲ್ಲಿ ತೆರಳುತ್ತಿರುವ ಭಕ್ತರಿಗೆ ಹರಕೆ ಹೊತ್ತ ಭಕ್ತರು ದಾನಿಗಳು ಅಲ್ಲಲ್ಲಿ ಪಾನಕ ಮಜ್ಜಿಗೆ ನೀರಿನ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ ಜೊತೆಗೆ ಉಪಹಾರ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ.