ಮನ್ರೇಗಾ ಜಾರಿಗೆ ಕೈ ಅಹೋರಾತ್ರಿ ಧರಣಿ

ಸಂಜೆವಾಣಿ ನ್ಯೂಸ್
ಮೈಸೂರು: ಫೆ.02:
– ಕೇಂದ್ರ ಸರ್ಕಾರ ವಿಬಿ ಜಿರಾಮ್ ಜಿ ಯೋಜನೆ ಘೋಷಿಸಿ ನರೇಗಾ ಹೆಸರು ಕೈ ಬಿಟ್ಟಿರುವುದನ್ನು ವಿರೋಧಿಸಿ ರಾಜ್ಯ ವ್ಯಾಪಿ ಮುಷ್ಕರದ ಭಾಗವಾಗಿ ಮೈಸೂರಿನಲ್ಲಿ ಕೈ ನಾಯಕರ ಅಹೋರಾತ್ರಿ ಧರಣಿ ಕೈಗೊಂಡರು.


ಗಾಂಧಿವೃತ್ತ ಸಾಯಂಕಾಲ 6.30 ಗಾಂಧಿ ಪ್ರತಿಮೆಗೆ ಪುಷ್ಪಾರ್ಚನೆ ನೇರವೇರಿಸಿದರು. ಬಳಿಕ ಟೌನ್ ಹಾಲ್ ನ 6.45 ಡಾ.ಬಿಆರ್. ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು. ರಾತ್ರಿ 7ಕ್ಕೆ ವಂದೇ ಮಾತರಂ, ನಂತರ ಸಂವಿಧಾನ ಪೀಠಿಕೆ ಓದಿದರು. ಬಳಿಕ ಸತ್ಯಾಗ್ರಹದ ದಿಕ್ಕೂಚಿ ಭಾಷಣ ಮಾಡಲಾಯಿತು.
ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕ ಕೆ.ಹರೀಶ ಗೌಡ, ಅನಿಲ್ ಚಿಕ್ಕಮಾಧು, ಡಿ.ರವಿಶಂಕರ್, ಕೆ.ವೆಂಕಟೇಶ್, ಡಾ.ಡಿ.ತಿಮ್ಮಯ್ಯ, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅರುಕುಮಾರ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಸೇರಿ ಅನೇಕರು ವಿಬಿಜಿ ರಾಮ್ ಜಿ ಕುರಿತು ಹಾಗೂ ಗಾಂಧೀಜಿ ಮೇಲೆ ಬಿಜೆಪಿ ಸಾಧಿಸುತ್ತಿರುವ ದ್ವೇಷ ಕುರಿತು ಮಾತನಾಡಿದರು.


9.30ಕ್ಕೆ ಸ್ಥಳದಲ್ಲೇ ಭೋಜನ ಮಾಡಿ, 10 ಕ್ಕೆ ಹಿರಿಯರಿಂದ ಕ್ರಾಂತಿ ಗೀತೆ ಹಾಡಲಾಯಿತು. ರಾತ್ರಿ -1ಕ್ಕೆ ದೇಶಭಕ್ತಿ ಗೀತೆ, ಮಧ್ಯರಾತ್ರಿ 3ಕ್ಕೆ ಮನರೇಗಾ ಸಾಕ್ಷ್ಯ ಚಿತ್ರ, ಬೆಳಗಿನ ಜಾವ 4 ಕ್ಕೆ – ಮಹಾತ್ಮ ಗಾಂಧಿ ಜೀವನಾಧಾರಿತ ಚಲನಚಿತ್ರ, 5 ಕ್ಕೆ ಡಾ.ಬಿ.ಆರ್. ಅಂಬೇಡ್ಕರ್ ಅವರ ಸಾಕ್ಷ್ಯಚಿತ್ರ, 6.30 ಕ್ಕೆ ಅಹೋರಾತ್ರಿ ಸತ್ಯಾಗ್ರಹದ ಸಮಾರೋಪ ನಡೆಯುವುದಾಗಿ ತಿಳಿಸಿದರು.
ಬೆ.7ಕ್ಕೆ ರಾಷ್ಟ್ರಗೀತೆಯೊಂದಿಗೆ ಸತ್ಯಾಗ್ರಹದ ಮುಕ್ತಾಯವಾಗಲಿದೆ ಎಂದು ಹೇಳಿದರು.


ಆ ಮೂಲಕ ರಾಜ್ಯವ್ಯಾಪಿ ವಿಭಿನ್ನ ಹೋರಾಟಕ್ಕೆ ಸಿಎಂ ತವರಿನಿಂದಲೇ ಮುನ್ನುಡಿ ಬರೆಯಲಾಯಿತು. ಜತೆಗೆ ಮುಂದಿನ ದಿನಗಳಲ್ಲಿ ರಾಜ್ಯದ ವಿವಿಧ ಜಿಲ್ಲೆ ಗಳಲ್ಲಿಯೂ ನಾನಾ ರೀತಿ ಹೋರಾಟಕ್ಕೆ ತೀರ್ಮಾನಿಸಲಾಯಿತು.