Home ಜಿಲ್ಲೆ ಮೈಸೂರು ಮನೆ ಮನೆಗೆ ಗ್ಯಾರಂಟಿ ತಲುಪಿಸಿ: ಹರೀಶ್ ಗೌಡ

ಮನೆ ಮನೆಗೆ ಗ್ಯಾರಂಟಿ ತಲುಪಿಸಿ: ಹರೀಶ್ ಗೌಡ

ಸಂಜೆವಾಣಿ ನ್ಯೂಸ್
ಮೈಸೂರು:ಫೆ.06:-
ಇಂದಿನಿಂದಲೇ ನಿತ್ಯ ಮನೆ ಮನೆ ತಲುಪುವ ಕೆಲಸ ಕಾರ್ಯಕರ್ತರು ಮಾಡಿದಾಗ ಮಾತ್ರವೇ ಮುಂದೆಯೂ ನನ್ನ ಗೆಲುವು ಸಾಧ್ಯ ಎಂದು ಶಾಸಕ ಹರೀಶ್ ಗೌಡ ತಿಳಿಸಿದರು.
ಚಾಮರಾಜ ವಿಧಾನಸಭಾ ಕ್ಷೇತ್ರದ ದೇವರಾಜ ಬ್ಲಾಕ್ ಅಧ್ಯಕ್ಷರಾಗಿ ಡಿ.ನಾಗಭೂಷಣ್ ಪುನರ್ ನೇಮಕಗೊಂಡ ಹಿನ್ನೆಲೆಯಲ್ಲಿ ಅವರಿಗೆ ಪಕ್ಷದ ಧ್ವಜ ನೀಡಿ ಜವಾಬ್ದಾರಿ ವಹಿಸಿ ಅವರು ಮಾತನಾಡಿದರು. ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಹೇಳಿದಂತೆ ಚಾಮರಾಜ ಕ್ಷೇತ್ರ ಕಾಂಗ್ರೆಸ್ ಗೆಲುವಿಗೆ ಸುಲಭವಾಗಿಲ್ಲ.


ಕಳೆದ ಬಾರಿ ಒಬ್ಬನೇ ಕಾಂಗ್ರೆಸ್ ಪಾಲಿಕೆ ಸದಸ್ಯನಿದ್ದದ್ದು, ನನ್ನ ಇಬ್ಬರೂ ಸೇರಿ ಮೂವರಿದ್ದರು. ಹೀಗಿರುವಾಗ ಹಾಲಿ ಶಾಸಕರ ಸೋಲಿಸಿ ಗೆದ್ದಿರುವ ಕಷ್ಟ ನಮಗೆ ಗೊತ್ತಿದೆ ಎಂದರು. ಕ್ಷೇತ್ರದಲ್ಲಿ ಗೆದ್ದಿದ್ದೇನೆಂದು ಮೈಮರಿಯುವಂತಿಲ್ಲ ಎಂಬ ಸ್ಥಿತಿಯಿದೆ. ಹೀಗಾಗಿ ನಿತ್ಯ ಕಾರ್ಯಕ್ರಮ ಕೊಡುವ ಮೂಲಕ ಕಾರ್ಯಕರ್ತರನ್ನು ಎಚ್ಚರವಾಗಿರಸಬೇಕಿದೆ. ಹಿಂದಿನ ವಾರ್ಡ್ ಅಧ್ಯಕ್ಷರಾಗಿದ್ದ ಶಿವಮಾಧು, ಕುಮಾರ ಚುನಾವಣೆಯಲ್ಲಿ ಸಾಕಷ್ಟು ಕೆಲಸ ಮಾಡಿದ್ದರ ಫಲ ನಾನು ಶಾಸಕನಾಗಲು ಸಹಕಾರಿಯಾಯಿತು. ಬಿಜೆಪಿ, ಜೆಡಿಎಸ್ ಪ್ರಬಲವಾಗಿ ಬೇರೂರಿರುವ ಕ್ಷೇತ್ರ ನನ್ನದಾಗಿದೆ.


ಇದಾಗಿಯೂ ನಾಲ್ಕು ಬಾರಿ ಶಂಕರಲಿಂಗೇಗೌಡ, ಅನಂತರ ವಾಸಣ್ಣ ಬಳಿಕ ಮತ್ತೆ ಬಿಜೆಪಿ ಬಂದಿತ್ತು. ಈ ವೇಳೆ ನನ್ನ ಸ್ಪರ್ಧೆ ಬಳಿಕ 15 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆಂಬ ನಿರೀಕ್ಷೆಯಿತ್ತು. ಆದರೆ, 4500 ಮತಗಳಿಂದ ಗೆದ್ದಿದ್ದೇವೆ. ಹೀಗಾಗಿ ಗೆದ್ದಿದ್ದೇವೆಂದು ಹಿಗ್ಗುವ ಕೆಲಸ ಮಾಡುವಂತಿಲ್ಲ. 1500 ಕೋಟಿ ಕಾಮಗಾರಿ ನನ್ನ ಕ್ಷೇತ್ರದಲ್ಲಿ ನಡೆಯುತ್ತಿದೆ. ಆಸ್ಪತ್ರೆ, ಕಾಲೇಜು ಎನೇ ಆದರೂ ನಮಗೆ ಅನೂಕೂಲ ಆಗುತ್ತಿದೆ. ಕಾಲೇಜಿಗೆ 200 ಕೋಟಿ ಯಷ್ಟು ಮೂಲಭೂತ ಸೌಕರ್ಯ ಕೆಲಸ ಸರ್ಕಾರ ನೀಡಿದೆ ಎಂದರು.


ಬಹುಶಃ ಮುಂದಿನ ನಾಲ್ಕು ತಿಂಗಳಲ್ಲಿ ಗ್ರೇಟರ್ ಮೈಸೂರು ಆಗಬಹುದು. ಈ ವರ್ಷದಲ್ಲೇ ನೂರಕ್ಕೆ ನೂರು ಚುನಾವಣೆ ಆಗಲಿದೆ.
ಕ್ಷೇತ್ರದ 20 ವಾರ್ಡ್ ನಲ್ಲಿ 15 ಮಂದಿ ಗೆಲ್ಲಲೇ ಬೇಕಿದೆ. ಹೀಗಾಗಿ ವಾರ್ಡ್ ವಾರು ನಿಷ್ಕ್ರಿಯ ಅಧ್ಯಕ್ಷರನ್ನು ಅರಿತು, ಮಹಿಳಾ ವಾರ್ಡ್ ಅಧ್ಯಕ್ಷರೊಂದಿಗೆ ಸಮಾಲೋಚನೆ ನಡೆಸಬೇಕಿದೆ. ನಾನು ನಗರಾಧ್ಯಕ್ಷನಾಗಿದ್ದಾಗ 12 ವಾರ್ಡ್ ಗೆಲ್ಲಿಸಿದ್ದೇನು. ಪ್ರಮುಖವಾಗಿ ಮನೆ ಮನೆಗೆ ತೆರಳಿ ಕಾಂಗ್ರೆಸ್ ಗ್ಯಾರಂಟಿ ಯೋಜನೆ ಹಾಗೂ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಿಳಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಮಾಜಿ ಮಹಾಪೌರರಾದ ಪುಷ್ಪಲತಾ ಚಿಕ್ಕಣ್ಣ, ಪುಷ್ಪವಲ್ಲಿ, ಮೋದಾಮಣಿ, ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎನ್.ಭಾಸ್ಕರ್ ನಗರ ಪ್ರಧಾನ ಕಾರ್ಯದರ್ಶಿ ಈಶ್ವರ ಚಕ್ಕಡಿ, ಮಹಿಳಾ ಅಧ್ಯಕ್ಷರಾದ ಸುಶೀಲಾ ಮರಿಗೌಡ, ಚಂದ್ರಕಲಾ, ಮೃಗಾಲಯ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಲ್ಲಿಗೆ ವೀರೇಶ್, ಹಿಂದುಳಿದ ವರ್ಗಗಳ ಬ್ಲಾಕ್ ಅಧ್ಯಕ್ಷ ಕೆ.ನಾಗೇಶ್, ಮುಖಂಡರಾದ ಹರೀಶ್, ರವಿ, ಅಶೋಕ್ ಇನ್ನಿತರರು ಉಪಸ್ಥಿತರಿದ್ದರು.