ಮಧ್ಯಂತರ ಸರ್ಕಾರದ ವಿರುದ್ಧ ಶೇಖ್ ಹಸೀನಾ ವಾಗ್ದಾಳಿ

ನವದೆಹಲಿ, ಜ.24:- ಬಾಂಗ್ಲಾದೇಶದ ಜನರು ಪ್ರಜಾಪ್ರಭುತ್ವವನ್ನು ಮರಳಿ ಪಡೆಯಬೇಕು. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಒತ್ತಾಯಿಸಿದ್ದು ಮಧ್ಯಂತರ ಸರ್ಕಾರ ‘ಫ್ಯಾಸಿಸ್ಟ್’ ಮತ್ತು ‘ಭ್ರಷ್ಟ’ ಸರ್ಕಾರ ಎಂದು ವಾಗ್ದಾಳಿ ತಿಳಿಸಿದ್ದಾರೆ.


“ಪ್ರಜಾಪ್ರಭುತ್ವ ಹೊಂದಿದ್ದ ದೇಶ ಈಗ ದೇಶಭ್ರಷ್ಟವಾಗಿದೆ”.ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗಿದೆ ಮತ್ತು ಮಾನವ ಹಕ್ಕುಗಳನ್ನು ತುಳಿದಿದೆ ದೇಶಾದ್ಯಂತ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿದೆ. ಧಾರ್ಮಿಕ ಅಲ್ಪಸಂಖ್ಯಾತರು, ಮಹಿಳೆಯರು ಮತ್ತು ಮಕ್ಕಳು ಹೆಚ್ಚು ದುರ್ಬಲರಾಗಿದ್ದಾರೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಆಡಿಯೋ ಸಂದೇಶದಲ್ಲಿ ಅವರು ಬಾಂಗ್ಲಾದೇಶದಲ್ಲಿ ಹತ್ಯೆಗಳು, ಬೆಂಕಿ ಹಚ್ಚುವಿಕೆ, ಲೂಟಿ ಮತ್ತು ಬಲವಂತದ ಸುಲಿಗೆಗಳು ರಾಜಧಾನಿಯಿಂದ ಗ್ರಾಮೀಣ ಪ್ರದೇಶಗಳಿಗೆ ಹರಡಿವೆ ಮತ್ತು ಶಿಕ್ಷಣ ಸಂಸ್ಥೆಗಳು ಅವ್ಯವಸ್ಥೆಯಿಂದ ದುರ್ಬಲಗೊಂಡಿವೆ. ದೇಶದ ಭೂಮಿ ಮತ್ತು ಸಂಪನ್ಮೂಲಗಳ ಮೇಲೆ ಹಿಡಿತ ಸಾಧಿಸಲು ವಿದೇಶಿ ಹಿತಾಸಕ್ತಿಗಳು ಬಿಕ್ಕಟ್ಟನ್ನು ಬಳಸಿಕೊಳ್ಳುತ್ತಿವೆ ಎಂದು ಆರೋಪಿಸಿದ್ದಾರೆ.
ಬಾಂಗ್ಲಾದೇಶದ ಮಾಜಿ ಪ್ರಧಾನಿ ಮತ್ತು ಅವಾಮಿ ಲೀಗ್ ಮುಖ್ಯಸ್ಥೆ ಶೇಖ್ ಹಸೀನಾ, ಬಾಂಗ್ಲಾದೇಶದಲ್ಲಿ ಹಿಂಸಾಚಾರ ಮತ್ತು ಅಶಾಂತಿಯ ನಡುವೆ ಅಧಿಕಾರದಿಂದ ಹೊರಹಾಕಲ್ಪಟ್ಟ ನಂತರವೂ ಅವರು ಉಳಿದುಕೊಂಡಿರುವ ಭಾರತದಿಂದ ಬಲವಾದ ಸಂದೇಶವನ್ನು ನೀಡಿದ್ದಾರೆ.


ಶೇಖ್ ಹಸೀನಾ ರಾಷ್ಟ್ರವನ್ನು “ಗಾಯಗೊಂಡ ಮತ್ತು ರಕ್ತಸಿಕ್ತ ಭೂಮಿ” ಎಂದು ಬಣ್ಣಿಸಿದ್ದಾರೆ, ತಮ್ಮ ತಂದೆ ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್ ಅವರ ವಿಮೋಚನಾ ಹೋರಾಟದ ನಂತರದ ಇತಿಹಾಸದಲ್ಲಿ ಅತ್ಯಂತ ಗಂಭೀರ ಅಧ್ಯಾಯ ಎಂದು ಅವರು ಕರೆದಿದ್ದು. ಭಯ, ಅವ್ಯವಸ್ಥೆ ಮತ್ತು ಕ್ರೌರ್ಯದಿಂದ ತುಂಬಿರುವ ದೇಶದ ಸ್ಪಷ್ಟ ಚಿತ್ರಿಸಿದ್ದಾರೆ.
ಮದ್ಯಂತರ ಸರ್ಕಾರ “ಫ್ಯಾಸಿಸ್ಟ್, ಭ್ರಷ್ಟ ಮತ್ತು ನ್ಯಾಯಸಮ್ಮತವಲ್ಲದ” ನಾಯಕತ್ವ ಎಂದು ಅವರು ಕರೆದಿರುವ ಅವರು ಪ್ರಸ್ತುತ ಆಡಳಿತ ಬಾಂಗ್ಲಾದೇಶವನ್ನು ಭಯೋತ್ಪಾದನೆಯ ಯುಗಕ್ಕೆ ತಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.


ಬಾಂಗ್ಲಾದೇಶದಲ್ಲಿ ಹತ್ಯೆಗಳು, ಬೆಂಕಿ ಹಚ್ಚುವಿಕೆ, ಲೂಟಿ ಮತ್ತು ಬಲವಂತದ ಸುಲಿಗೆಗಳು ರಾಜಧಾನಿಯಿಂದ ಗ್ರಾಮೀಣ ಪ್ರದೇಶಗಳಿಗೆ ಹರಡಿವೆ ಮತ್ತು ಶಿಕ್ಷಣ ಸಂಸ್ಥೆಗಳು ಅವ್ಯವಸ್ಥೆಯಿಂದ ದುರ್ಬಲಗೊಂಡಿವೆ. ದೇಶದ ಭೂಮಿ ಮತ್ತು ಸಂಪನ್ಮೂಲಗಳ ಮೇಲೆ ಹಿಡಿತ ಸಾಧಿಸಲು ವಿದೇಶಿ ಹಿತಾಸಕ್ತಿಗಳು ಬಿಕ್ಕಟ್ಟನ್ನು ಬಳಸಿಕೊಳ್ಳುತ್ತಿವೆ ಎಂದು ಅವರು ದೂರಿದ್ದಾರೆ
ವಿಮೋಚನಾ ಯುದ್ಧದ ಉತ್ಸಾಹದೊಂದಿಗೆ ಎದ್ದುನಿಂತು ಸಾರ್ವಭೌಮತ್ವ ಮರಳಿ ಪಡೆಯುವಂತೆ ಹಸೀನಾ ಬಾಂಗ್ಲಾದೇಶದ ಜನರಿಗೆ ಮನವಿ ಮಾಡಿದದು ತಾಯ್ನಾಡಿನ ಆತ್ಮ ಕಳಂಕಿತವಾಗಿದೆ”, ಸಂವಿಧಾನವನ್ನು ರಕ್ಷಿಸಲು ಮತ್ತು ಪ್ರಜಾಪ್ರಭುತ್ವ ಆಡಳಿತವನ್ನು ಪುನಃಸ್ಥಾಪಿಸಲು ನಾಗರಿಕರನ್ನು ಒತ್ತಾಯಿಸಿದ್ದಾರೆ.