ಮದ್ಯ ಮಾರಾಟ ಲೈಸನ್ಸ್ : ಬಿಡ್ ಆಹ್ವಾನ

ಮಂಗಳೂರು-ಅಬಕಾರಿ ಇಲಾಖೆಯು ಭಾರತೀಯ ಮದ್ಯ ಅಥವಾ ವಿದೇಶಿ ಮದ್ಯ ಅಥವಾ ಎರಡನ್ನೂ ಮಾರಾಟ ಮಾಡಲು ಯಶಸ್ವಿ ಊ೧ ಬಿಡ್ಡರ್‍ಗಳಿಗೆ ಫಾರಂ ಸಿಎಲ್-೨ಎ ಮತ್ತು ಫಾರಂ ಸಿಎಲ್-೯ಎ ನಮೂನೆಗಳಲ್ಲಿ ಖಾಲಿ ಅಥವಾ ಲಭ್ಯವಿರುವ ಅಬಕಾರಿ ಸನ್ನದು ನೀಡಲು ಅರ್ಹ ಬಿಡ್ಡರ್‍ಗಳಿಂದ ಬಿಡ್‌ಗಳನ್ನು ಆಹ್ವಾನಿಸುತ್ತದೆ.
ಈ ಪ್ರಕ್ರಿಯೆಯು ಇ-ಹರಾಜು ವೆಬ್‌ಸೈಟ್ https://www.mstcecommerce.com ಮೂಲಕ ನಡೆಯಲಿದ್ದು, ಹರಾಜು ನಡೆಯುವ ಮತ್ತು ಅಂಗೀಕಾರ ಪತ್ರ ನೀಡುವ ವರ್ಷಗಳನ್ನೂ ಒಳಗೊಂಡಂತೆ ೫ ಅಬಕಾರಿ ವರ್ಷಗಳ ಅವಧಿಗೆ ಅನ್ವಯಿಸುತ್ತದೆ.
ಇ-ಹರಾಜಿಗೆ ಸಂಬಂಧಿಸಿದಂತೆ ವಿವರವಾದ ಮಾರ್ಗಸೂಚಿಗಳು, ನಿಯಮಗಳು ಮತ್ತು ಷರತ್ತುಗಳು, ಜಿಲ್ಲಾವಾರು ಸನ್ನದುಗಳ ವಿವರಗಳು, ಮೀಸಲಾತಿ ವಿವರಗಳು, ಅರ್ಜಿ ಶುಲ್ಕ, ಮುಂಗಡ ಠೇವಣಿ (ಇಒಆ), ಮೂಲ ಬೆಲೆ ಮತ್ತು ಹರಾಜಿನ ನಂತರದ ವಿವರಗಳು ಇಲಾಖೆಯ ವೆಬ್‌ಸೈಟ್ https://stateexcise.karnataka.gov.in ಮತ್ತು ಎಂ.ಎಸ್.ಟಿ.ಸಿ ಲಿಮಿಟೆಡ್‌ನ ಇ ಹರಾಜು ಪೊ?ರ್ಟಲ್https://www.mstcecommerce.comಲಭ್ಯವಿರುತ್ತದೆ.
ಇ-ಹರಾಜಿನ ವೇಳಾಪಟ್ಟಿ :
ಬಿಡ್‌ದಾರರ ನೋಂದಣಿ ಡಿ.೨೨ ರಿಂದ ಪ್ರಾರಂಭವಾಗಲಿದ್ದು, ಸಂಭಾವ್ಯ ಬಿಡ್‌ದಾರರಿಗೆ ಮತ್ತು ಜಿಲ್ಲಾ ಇ-ಹರಾಜು ನೋಡಲ್ ಅಧಿಕಾರಿಗಳಿಗೆ ಡಿಸೆಂಬರ್ ೨೩ ರಿಂದ ಜನವರಿ ೭ ರವರೆಗೆ ತರಬೇತಿ ನೀಡಲಾಗುತ್ತದೆ. ನೇರ ಹರಾಜು ಜನವರಿ ೧೩ ರಿಂದ ಜನವರಿ ೨೦.
ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಮತ್ತು ಆನ್‌ಲೈನ್ ಮೂಲಕ ವ್ಯಾಲೆಟ್‌ಗೆ ಹಣ ಪಾವತಿಯು ಖಚಿತವಾದ ನಂತರವೇ ಬಿಡ್ಡರ್‍ಗಳು ಆನ್‌ಲೈನ್ ಹರಾಜಿನಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. ಆದುದರಿಂದ ಬಿಡ್ಡರ್‍ಗಳು ತಾವು ಭಾಗವಹಿಸಲು ಇಚ್ಚಿಸುವ ನಿರ್ದಿಷ್ಟ ಸ್ಲಾಟ್ ಹರಾಜು ಪ್ರಾರಂಭವಾಗುವ ೪೮ ಗಂಟೆಗಳ ಮುಂಚಿತವಾಗಿ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ನೆಟ್‌ವರ್ಕ್ ವೈಫಲ್ಯ ಮತ್ತು ಇತರೆ ತಾಂತ್ರಿಕ ಸಮಸ್ಯೆಗಳ ಸಂದರ್ಭದಲ್ಲಿ ಯಾವುದೇ ವಿಳಂಬವನ್ನು ತಪ್ಪಿಸಲು ಮುನ್ನೆಚ್ಚರಿಕೆ ಕ್ರಮವಾಗಿ ಬಿಡ್ಡರ್‍ಗಳು ಈ ಸಲಹೆಯನ್ನು ಪಾಲಿಸಬೇಕು. ನಿಗಧಿತ ಇ-ಹರಾಜು ಅವಧಿಯ ೨ ಕೆಲಸದ ದಿನಗಳ ಮುಂಚಿತವಾಗಿ (ಕೇಂದ್ರ/ರಾಜ್ಯ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ) ಬಿಡ್‌ದಾರರು ನೋಂದಾಯಿಸಿಕೊಳ್ಳಬಹುದು.
ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ ಇ-ಹರಾಜು ಪ್ರಕ್ರಿಯೆಯ ನೋಡಲ್ ಅಧಿಕಾರಿ ಜಿಲ್ಲೆಯ ಅಬಕಾರಿ ಆಯುಕ್ತರು (ದೂ.ಸಂ ೯೪೪೯೫೯೭೧೦೩) ಆಗಿರುತ್ತಾರೆ.
ಅಬಕಾರಿ ಆಯುಕ್ತರು ಹೊರಡಿಸಿರುವ ತರಬೇತಿ ವೇಳಾಪಟ್ಟಿಯನ್ನು ಅಬಕಾರಿ ಇಲಾಖೆಯ ವೆಬ್‌ಸೈಟ್ hಣಣಠಿs://sಣಚಿಣeexಛಿise.ಞಚಿಡಿಟಿಚಿಣಚಿಞಚಿ.gov.iಟಿ ಮತ್ತು ಎಂ.ಎಸ್.ಟಿ.ಸಿ ಇ ಹರಾಜು ಪೊ?ರ್ಟಲ್ hಣಣಠಿs://ತಿತಿತಿ.msಣಛಿeಛಿommeಡಿಛಿe.ಛಿom ರಲ್ಲಿ ಪ್ರಕಟಿಸಲಾಗಿದ್ದು, ಸಂಭಾವ್ಯ ಬಿಡ್‌ದಾರರಿಗೆ ತರಬೇತಿಯನ್ನು ನೀಡಲು ಸಿದ್ಧಪಡಿಸಿರುವ ವೇಳಾಪಟ್ಟಿಯಂತೆ ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಜನವರಿ ೬ ರಂದು ತರಬೇತಿಯನ್ನು ನಿಗಧಿಪಡಿಸಲಾಗಿದ್ದು, ತರಬೇತಿಯು ಉಡುಪಿ ಜಿಲ್ಲೆಯ ರಜತಾದ್ರಿ ಡೆಪ್ಯುಟಿ ಕಮಿಷನರ್ ಆಫೀಸ್ ಕಾಂಪ್ಲೆಕ್ಸ್‌ನ ಅಟಲ್ ಬಿಹಾರಿ ವಾಜಪೇಯಿ ಹಾಲ್‌ನಲ್ಲಿ ಬೆಳಿಗ್ಗೆ ೧೧ ರಿಂದ ೪ ಗಂಟೆಯವರೆಗೆ ನಡೆಯಲಿದೆ.
ಜನವರಿ ೧೯ ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ೩ ಗಂಟೆಯಿಂದ ೫ ಗಂಟೆಯವರೆಗೆ ಸಿಎಲ್-೨ಎ ೨೯ , ಸಿಎಲ್-೯ಎ ೧ , ಒಟ್ಟು ೩೦ ಸನ್ನದುಗಳ ನೇರ ಹರಾಜು ನಡೆಯಲಿದೆ ಎಂದು ಡೆಪ್ಯುಟಿ ಕಮಿಷನರ್ ಆಫ್ ಎಕ್ಸೈಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.