ಸಂಜೆವಾಣಿ ವಾರ್ತೆ
ಚಾಮರಾಜನಗರ, ಅ.12- ಸುಪ್ರೀಂಕೋರ್ಟ್‍ನ ಮುಖ್ಯ ನ್ಯಾಯಾಧೀಶರಾದ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆಯಲು ಪ್ರಯತ್ನಿಸಿ ನ್ಯಾಯಾಂಗ ವ್ಯವಸ್ಥೆಗೆಅಪಮಾನ ಮಾಡಿರುವಮತಾಂಧ ವಕೀಲ ರಾಕೇಶ್‍ಕಿಶೋರ್‍ಗೆ ಗಲ್ಲುಶಿಕ್ಷೆ ವಿಧಿಸುವಂತೆಜನ ಹಿತಾಶಕ್ತಿ ಹೋರಾಟ ವೇದಿಕೆಯಜಿಲ್ಲಾಧ್ಯಕ್ಷರಾಮಸಮುದ್ರ ಸುರೇಶ್ ಒತ್ತಾಯಿಸಿದ್ದಾರೆ.
ಜನ ಹಿತಾಶಕ್ತಿ ಹೋರಾಟ ವೇದಿಕೆ, ದಲಿತ ಸಂಘರ್ಷ ಸಮಿತಿ ಸಂಯೋಜಕ ಹಾಗೂ ದಲಿತ ಸಂಘಟನೆಗಳ ವತಿಯಿಂದ ಶನಿವಾರಚಾಮರಾಜನಗರದ ಭುವನೇಶ್ವರಿ ವೃತ್ತದಲ್ಲಿ ನಡೆದರಸ್ತೆತಡೆ ಪ್ರತಿಭಟನೆಯಲ್ಲಿ ಮಾತಾಡಿದಅವರುದಲಿತ ಸಮುದಾಯಕ್ಕೆ ಸೇರಿದ ನ್ಯಾಯಮೂರ್ತಿ ಗವಾಯಿ ಅವರು ಸಂವಿಧಾನದ ತತ್ವಗಳ ಆಧಾರದ ಮೇಲೆ ಅತ್ಯಂತಘನತೆಯ ನ್ಯಾಯಾಧೀಶರಾಗಿಕಾರ್ಯನಿರ್ವಹಿಸುತ್ತಿರುತ್ತಾರೆ. ಇಂತಹ ನ್ಯಾಯಾಧೀಶರ ಮೇಲೆ ಸನಾತನಿ ಮನಸ್ಥಿತಿಯ ವಕೀಲನೊಬ್ಬ ಶೂ ಎಸೆದುಅವಮಾನ ಮಾಡಿರುವದುರ್ಘಟನೆಯು ಪೂರ್ವಯೋಜಿತ ದಾಳಿಯಾಗಿರುತ್ತದೆ.ಇದು ಹಿಂದುಧರ್ಮದ ಶೂ ಎಸೆಯಲು ಪ್ರಯತ್ನಿದರಾಜೇಶ್‍ಕಿಶೋರ್ ಎಂಬ ಮನುವಾದಿ ಮನಸ್ಸಿನ ವಕೀಲ ಧರ್ಮದ ಹೆಸರಿನಲ್ಲಿ ಸಮಾಜವನ್ನು ಇಬ್ಬಾಗಿಸಿ ಪರಸ್ಪರದ್ವೇಷ ಮತ್ತು ಮನುವಾದದ ಪ್ರತಿನಿಧಿಯಾಗಿಕಾರ್ಯನಿರ್ವಹಿಸುತ್ತಿದ್ದಾನೆ.
ನಾಥೂರಾಮ್‍ಗೋಡ್ಸೆಯಂತಹಕೊಲೆಗಡುಕ ಮನಸ್ಥಿತಿಯ ಇಂಥವರ ವಿರುದ್ಧ ಸೂಕ್ತ ಕಾನೂನು ಕೈಗೊಂಡುಈತನನ್ನು ಈ ಕೂಡಲೇ ನ್ಯಾಯಾಂಗ ನಿಂದನೆ ಪ್ರಕ್ರಿಯೆಗೆ ಒಳಪಡಿಸಬೇಕು ಮತ್ತು ನೀತಿ ಸಂಹಿತೆ ವಿರುದ್ಧವಾಗಿ ನಡೆದುಕೊಂಡಿದ್ದಾನೆಂದು ನ್ಯಾಯಲಯದ ಬಾರ್‍ಕೌನ್ಸಿಲ್‍ನವರು ಸದರಿ ವಕೀಲನ ಸದಸ್ಯತ್ವವನ್ನುರದ್ದುಪಡಿಸಬೇಕೆಂದುಒತ್ತಾಯಿಸಲಾಗಿದೆ ಹಾಗೂ ಈತನಿಗೆಉಗ್ರವಾದಗಲ್ಲು ಶಿಕ್ಷೆಯನ್ನು ವಿಧಿಸಬೇಕೆಂದುರಾಮಸಮುದ್ರ ಸುರೇಶ್ ಒತ್ತಾಯಿಸಿದ್ದಾರೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದುಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿದಲಿತ ಸಂಘರ್ಷ ಸಮಿತಿಜಿಲ್ಲಾ ಸಂಯೋಜಕ ಕೆರೆಹಳ್ಳಿ ಬಸವರಾಜ್,ಜಿಲ್ಲಾ ಸಂಚಾಲಕ ಯರಿಯೂರು ಸಿ ರಾಜಣ್ಣ, ಸಿ.ಎಂ. ಶಿವಣ್ಣ, ನಾಗವಳ್ಳಿ ಪಾಪಣ್ಣ,ಉಮ್ಮತ್ತೂರು ಸೋಮಣ್ಣ, ಕಾಡಳ್ಳಿ ನಾಗರಾಜ್, ಪ್ರಭಾವತಿ, ಗಾಳಿಪುರ ಮಹೇಶ, ಅಬ್ರಾರ್‍ಅಹಮದ್, ಪ್ರಭು, ಚಂದ್ರಬಾಬು, ಕೆಂಪರಾಜು, ಶರೀಪ್, ದರಣೇಂದ್ರ, ರಾಜು ಪಣ್ಯದಹುಂಡಿ, ಅಟೋಉಮೇಶ್, ಇತರರುಇದ್ದರು


























