
(ಸಂಜೆವಾಣಿ ವಾರ್ತೆ)
ಬಳ್ಳಾರಿ:ಅ,3- ನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿರು ಎಸ್.ಐ.ಆರ್.ಪ್ರಕ್ರಿಯೆಯಲ್ಲಿ ಸಾಕಷ್ಟು ಗೊಂದಲಗಳು ರಾಜ್ಯದಲ್ಲೇ ಅಲ್ಲಾ ರಾಷ್ಟ್ರದಲ್ಲೂ ಸಹ ಸೃಷ್ಟಿಯಾಗಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಒಂದಿ ರೀತಿ ಗಂಡಾಂತರ ಎದುರಾಗಿದೆ ಎಂದು ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಹೇಳಿದೆ.
ಈ ಕುರಿತು ಅದು ಪತ್ರಿಕಾ ಹೇಳಿಕೆ ನೀಡಿದ್ದು. ನಮ್ಮ ರಾಜ್ಯದಲ್ಲೂ ಸಹ 1 ಕೋಟಿ ಮೇಲ್ಪಟ್ಟು ಮತದಾರರನ್ನು ಮತಪಟ್ಟಿಯಿಂದ ಕೈ ಬಿಡುವಂತಹ ಪ್ರಯತ್ನಗಳು ನಡೆದಿವೆ. ಬಳ್ಳಾರಿ ನಗರವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 7561 ಮತದಾರರನ್ನು ಬಳ್ಳಾರಿ ಬಿಜೆಪಿ ಪಕ್ಷದ ಬಿ.ಎಲ್.ಎ- 1 ಟಿ.ಶ್ರೀನಿವಾಸ್ ಮೊತ್ಕರ್ ಅವರು ಪಾಲಿಕೆಯ ಚುನಾವಣಾಧಿಕಾರಿಗಳಿಗೆ ದೂರನ್ನು ನೀಡಿ 7561 ಮತದಾರರನ್ನು ತೆಗೆಯಬೇಕು ಎಂದು ಪತ್ರದ ಮೂಲಕ ದೂರು ನೀಡಿದ್ದಾರೆ. ಇದು ಬಿಜೆಪಿಯ ಷಡ್ಯಂತರವಾಗಿದೆ.
ಈ ಪಟ್ಟಿಯಿಂದ ಎಸ್.ಸಿ, ಎಸ್.ಟಿ, ಒ.ಬಿ.ಸಿ ಮತ್ತು ಶೇ 90 ರಷಲಷ್ಟು ಅಲ್ಪಸಂಖ್ಯಾತ ಸಮಾಜವನ್ನು ಗುರಿಯಾಗಿಸಿಕೊಂಡು ಅವರನ್ನು ಮತ ಪಟ್ಟಿಯಿಂದ ತೆಗೆಯಬೇಕೆಂದು ಪ್ರತ್ನಿಸುತ್ತಿದ್ದಾರೆ. ಇದರ ಮೆರೆಗೆ ಅಧಿಕಾರಿಗಳು ನಿಯಮ ಉಲ್ಲಂಘಿಸಿ ಮನೆ- ಮನೆಗಳಿಗೆ ಭೇಟಿ ನೀಡಿ ಮತ್ತೆ ತಮ್ಮ ತಮ್ಮ ದಾಖಲಾತಿಗಳನ್ನು ಮರ ಪರಿಶೀಲನೆ ಮಾಡಬೇಕೆಂದು ಮತದಾರರಿಗೆ ತೊಂದರೆ ನೀಡುತ್ತಿದ್ದಾರೆ. ಅರ್ಜಿ ಕೊಟ್ಟಿರುವ ಬಿಜೆಪಿ ಪಕ್ಷದ ನಿರ್ಧಾರವು ಭಾರತ ಸಂವಿಧಾನದ ಅನುಚ್ಚೆದ 326ರ ವಿರುದ್ಧವಾಗಿದೆ.
ಆದ್ದರಿಂದ ಈ ಕೂಡಲೇ ಅರ್ಜಿ ನೀಡಿರುವಂತಹ ಮತ್ತು ಈ ಷಡ್ಯಂತರ ರೂಪಿಸಿರುವ ಬಿಜೆಪಿ ಪಕ್ಷದ ಬಿ.ಎಲ್.ಎ-1 ಟಿ.ಶ್ರೀನಿವಾಸ್ ಮೊತ್ಕರ್ ಅವರ ಮೇಲೆ ಹಾಗೂ ಇದಕ್ಕೆ ಸಹಕರಿಸಿರುವ ಸಂಭಂದ ಪಟ್ಟ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಂಡು.ಭಾರತೀಯ ನ್ಯಾಯ ಸಮಿತಿಯ ಅನುಚ್ಚೆದ 217ರ ಪ್ರಕಾರ ಕಾನೂನು ಕ್ರಮ ಜರುಗಿಸಬೇಕು ಎಂದು ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಸಮಿತಿ ಬ್ರೂಸ್ ಪೇಟ್ ಪೊಲೀಸ್ ಠಾಣೆಗೆ ದೂರು ನೀಡಿದೆ.
ಈ ಸಂಧರ್ಭದಲ್ಲಿ ಬಳ್ಳಾರಿ ನಗರ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುಮಯೂನ್ ಖಾನ್, ಬುಡಾ ಅಧ್ಯಕ್ಷ ಆಂಜಿನೆಯಲು, ಮೇಯರ್ ಪಿ.ಗಾದೆಪ್ಪ, ಮುಖಂಡರುಗಳಾದ ಜಿ.ಜೆ.ರವಿಕುಮಾರ್, ಸರಗು ನಾಗರಾಜ್, ವಿಷ್ಣು, ಶ್ರೀನಿವಾಸ್, ಅಖಿಲ್ ಅಹಮ್ಮದ್, ಶೋಭಾ ಕಾಳಿಂಗ, ಲಕ್ಷ್ಮೀ ನಾರಾಯಣ ಮತ್ತು ಇತರರು ಇದ್ದರು.


























