ಮಣಿಪುರ: ಮತ್ತೆ ಭುಗಿಲೆದ್ದ ಜನಾಂಗೀಯ ಘರ್ಷಣೆ

ನವದೆಹಲಿ, ಸೆ.15:- ಪ್ರಧಾನಿ ನರೇಂದ್ರ ಮೋದಿ ಮಣಿಪುರಕ್ಕೆ ಭೇಟಿ ನೀಡಿದ ಮರುದಿನವೇ ರಾಜ್ಯದಲ್ಲಿ ಮತ್ತೆ ಜನಾಂಗೀಯ ಘರ್ಷಣೆಗಳು ಭುಗಿಲೆದ್ದಿದೆ. ಈ ಸಂದರ್ಭ ಪ್ರಧಾನಿ ಮೋದಿ ಅವರ ಬ್ಯಾನರ್ ಹಾಗೂ ಕಟೌಟ್‍ಗಳನ್ನು ಧ್ವಂಸಗೊಳಿಸಿದ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ಪೆÇಲೀಸರು ಬಂಧಿಸಿದ್ದಾರೆ.


ಪ್ರಧಾನಿ ಮೋದಿ ರಾಜ್ಯಕ್ಕೆ ಭೇಟಿ ನೀಡುವ ಮುನ್ನ ಚುರಚಂದಪುರ ಜಿಲ್ಲೆಯಾದ್ಯಂತ ನೂರಾರು ಕಟೌಟ್‍ಗಳನ್ನು ಹಾಕಲಾಗಿತ್ತು. ವರದಿಗಳ ಪ್ರಕಾರ ಪಿಯರ್ಸನ್‍ಮುನ್ ಮತ್ತು ಫೈಲಿಯನ್ ಬಜಾರ್‍ನಲ್ಲಿ ಹಾಕಲಾಗಿದ್ದ ಹಲವಾರು ಬ್ಯಾನರ್‍ಗಳು ಮತ್ತು ಕಟೌಟ್‍ಗಳನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ.


ಪ್ರಧಾನಿಯವರ ಕಟೌಟ್‍ಗಳು ಮತ್ತು ಬ್ಯಾನರ್‍ಗಳನ್ನು ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೆÇಲೀಸರು ಅನೇಕ ವ್ಯಕ್ತಿಗಳನ್ನು ಬಂಧಿಸಿದ್ದಾರೆ. ನಂತರ ಅವರೆಲ್ಲರನ್ನೂ ಬಿಡುಗಡೆ ಮಾಡಲಾಗಿದ್ದರೂ, ಇಬ್ಬರು ವ್ಯಕ್ತಿಗಳನ್ನು ಮಾತ್ರ ಪೆÇಲೀಸರು ಬಂಧನದಲ್ಲೇ ಇರಿಸಿದ್ದಾರೆ.


ಇದರೊಂದ ರೊಚ್ಚಿಗೆದ್ದ ಗುಂಪು ಅವರ ಬಿಡುಗಡೆಗೆ ಒತ್ತಾಯಿಸಿ, ಚುರಾಚಂದ್‍ಪುರ ಪೆÇಲೀಸ್ ಠಾಣೆಯ ಹೊರಗೆ ಪ್ರತಿಭಟನೆ ನಡೆಸಿದ್ದಾರೆ. ನಂತರ ಸ್ಥಳದಲ್ಲಿ ಮತ್ತೆ ಉದ್ವಿಗ್ನತೆ ಉಂಟಾಗಿದೆ. ಗುಂಪು ಭದ್ರತಾ ಪಡೆಗಳೊಂದಿಗೆ ಘರ್ಷಣೆ ನಡೆಸಿದೆ. ಸದ್ಯ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸುತ್ತಿದ್ದೇವೆ ಎಂದು ಪೆÇಲೀಸರು ತಿಳಿಸಿದ್ದಾರೆ.


2023ರ ಮೇ ತಿಂಗಳಲ್ಲಿ ಕುಕಿ ಸಮುದಾಯ ಮತ್ತು ಮೈತೈಗಳ ನಡುವೆ ಜನಾಂಗೀಯ ಘರ್ಷಣೆ ಭುಗಿಲೆದ್ದಿತ್ತು. ಇದಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಮಣಿಪುರಕ್ಕೆ ದೀರ್ಘ ಸಮಯದ ವರೆಗೆ ಭೇಟಿ ನೀಡಿರಲಿಲ್ಲ.


ಮಣಿಪುರ ಹಿಂಸಾಚಾರದ ಬಳಿಕ ಪ್ರಧಾನಿ ಮೋದಿ ಶನಿವಾರ ಮೊದಲ ಬಾರಿಗೆ ರಾಜ್ಯಕ್ಕೆ ಭೇಟಿ ನೀಡಿದ್ದರು. ಅವರು ಚುರಾಚಂದ್‍ಪುರದಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಾ, ರಾಜ್ಯವನ್ನು ಶಾಂತಿಯ ಸಂಕೇತವನ್ನಾಗಿ ಮಾಡುವುದಾಗಿ ಭರವಸೆ ನೀಡಿದ್ದಾರೆ.