ಮಣಿಪಾಲ ಮಾಹೆಯ ಕಲಾವಿದರಿಂದ ಧರ್ಮಸ್ಥಳದಲ್ಲಿ ಸಂಗೀತ ಸೇವೆ

ಉಜಿರೆ: ಮಣಿಪಾಲದ ಮಾಹೆಯ ಪ್ರಾಧ್ಯಾಪಕರುಗಳ ತಂಡ ಮಂಗಳವಾರ ರಾತ್ರಿ ಧರ್ಮಸ್ಥಳದಲ್ಲಿ ನವರಾತ್ರಿ ಸಂದರ್ಭ ಪ್ರವಚನ ಮಂಟಪದಲ್ಲಿ ಸಂಗೀತ ಸೇವೆ ಮಾಡಿದರು.
ಡಾ. ವಿದ್ಯಾ ಎಸ್. ರಾವ್, ಡಾ. ಭಾಗ್ಯ ಆರ್. ನಾವಡ, ಪ್ರೊ. ರಜಿತ ಕೆ.ವಿ., ಡಾ. ರಮ್ಯ ಎಸ್., ಪ್ರೊ. ಸೌಮ್ಯ ಎಸ್., ಪ್ರೊ. ಪ್ರಥ್ವಿ ಶೆಣೈ, ಡಾ. ಚೈತ್ರ ಎಂ. ಮತ್ತು ಡಾ. ಶಿಲ್ಪಾ ಸುರೇಶ್ ಸುಶ್ರಾವ್ಯ ಸಂಗೀತ ಹಾಡಿದರು.
ಹಿನ್ನೆಲೆಯಲ್ಲಿ ವಯಲಿನ್ ವಾದಕರಾಗಿ : ಡಾ. ಸುಹಾಸ್ ಕೌಶಿಕ್, ಮೃದಂಗ ವಾದಕರಾಗಿ : ವಿದ್ವಾನ್ ಬಾಲಚಂದ್ರ ಭಾಗವತ್ ಮತ್ತು ಡಾ. ಕೃಷ್ಣಪ್ರಸಾದ್ ಸಹಕರಿಸಿದರು.

ನಳಪಾಕ: ಅಕ್ಟೋಬರ್ ೧೯ ಅಡುಗೆ ಮಾಡುವ ಸ್ಪರ್ಧೆ (ಬಾಕ್ಸ್ ಐಟಂ)
ಉಜಿರೆ: ಬೆಳ್ತಂಗಡಿ ರೋಟರಿ ಕ್ಲಬ್ ಆಶ್ರಯದಲ್ಲಿ ಅ. ೧೯ ರಂದು ಭಾನುವಾರ ಸಂಜೆ ಐದು ಗಂಟೆಯಿಂದ ಉಜಿರೆ ಕಾಶಿಬೆಟ್ಟು ಬಳಿ ಇರುವ ಅರಳಿ ರೋಟರಿ ಸಮುದಾಯ ಭವನದಲ್ಲಿ ಅಡುಗೆ ಮಾಡುವ ಸ್ಪರ್ಧೆ ಆಯೋಜಿಸಲಾಗಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಪ್ರೊ. ಪ್ರಕಾಶ್‌ಪ್ರಭು ಪಿ. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
೧೮ ವರ್ಷಕ್ಕಿಂತ ಹೆಚ್ಚಿನ ಪ್ರಾಯದ ಗಂಡಸರು ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದ್ದು, ಮೂರು ಸಿಮೆಂಟ್ ಬ್ಲಾಕ್‌ಗಳನ್ನು ಇಟ್ಟಿಗೆ ಒಲೆ, ಕಟ್ಟಿಗೆ, ನೀರು ಮತ್ತು ಮೇಜು ಒದಗಿಸಲಾಗುವುದು.
ನಗದು ಬಹುಮಾನ: ಪ್ರಥಮ ಬಹುಮಾನ: ರೂ. ೨೦೦೦/-, ದ್ವಿತೀಯ ಬಹುಮಾನ: ರೂ. ೧೦೦೦/-, ತೃತೀಯ ಬಹುಮಾನ: ರೂ. ೫೦೦/-. ಬಹುಮಾನ ವಿತರಣೆ ಬಳಿಕ ಭೋಜನ ವ್ಯವಸ್ಥೆ ಇದೆ.
ಆಸಕ್ತರು ಹೆಸರು ಮತ್ತು ವಿಳಾಸದೊಂದಿಗೆ ವಾಟ್ಸಾಪ್ ಮೂಲಕ ಅ. ೧೭ (ಶುಕ್ರವಾರ) ರ ಮೊದಲು ಸ್ಪರ್ಧೆಗೆ ನೋಂದಾಯಿಸಲು ಕೋರಲಾಗಿದೆ.
ಮೊಬೈಲ್ ನಂಬರ್: ೯೪೪೮೦೬೦೨೦೬ / ೯೪೮೧೮೪೪೨೮೭.