ಮಣಿಪಾಲ್ ಆಸ್ಪತ್ರೆಯಲ್ಲಿ ರೋಬೋಟಿಕ್ ಸರ್ಜರಿ: ಸಮರ್ಥ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ನ.20: 
  ಮಣಿಪಾಲ್ ಆಸ್ಪತ್ರೆಯಲ್ಲಿ ರೋಬಟಿಕ್ ಸರ್ಜರಿ ಮೂಲಕ ಚಿಕಿತ್ಸೆ ಪಡೆಯುವ ವ್ಯಕ್ತಿ ತ್ವರಿತವಾಗಿ ಗುಣಮುಖರಾಗುತ್ತಾರೆಂದು  ಆರ್ಥೋ ಸರ್ಜನ್
ಸಮರ್ಥ ಆರ್ಯ ಹೇಳಿದ್ದಾರೆ
ಅವರು ನಗರದ ಪತ್ರಿಕಾ ಭವನದಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿ ಜಾಯಿಂಟ್ ರೀಪ್ಲೇಸ್ ಮೆಂಟ್ , ಹಿಪ್ ಆಪರೇಷನ್ ನಲ್ಲಿ ಮಣಿಪಾಲ್ ಆಸ್ಪತ್ರೆಯಲ್ಲಿ  ರೊಬೋಟ ನಲ್ಲಿ ಸರ್ಜರಿ ಮಾಡಲಾಗುತ್ತಿದೆ.  ಇದರಿಂದ  ಮಾನವ ಸಹಿತವಾಗಿ ಮಾಡುವುದಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿ ಆಗಲಿದೆ. ಇದರಿಂಸ ಬೇಗನೇ ವ್ಯಕ್ತಿ ಗುಣಮುಖನಾಗುತ್ತಾನೆ,
ಪ್ರತಿ ಮೂರನೇ ಗುರುವಾರ  ಬಳ್ಳಾರಿಯ  ಆರಾಧನ ಆಸ್ಪತ್ರೆಯಲ್ಲಿ ಈ ರೀತಿಯ ಸರ್ಜರಿ ಮಾಡಲು ಪರೀಕ್ಷೆ ಮಾಡಲಿದೆ. ಇದಕ್ಕೆ ಸರ್ಕಾರದ ಆರೋಗ್ಯ ವಿಮಾ ಯೋಜನೆಗಳಿಲ್ಲ ಆದರೆ ಖಾಸಗೀ ಹೆಲ್ತ್ ಇನ್ಸೂರೆನ್ಸ್ ನಲ್ಲಿ ಚಿಕಿತ್ಸೆ ನಡೆಯಲಿದೆಂದು ತಿಳಿಸಿದರು.