ಮಡುವಿನಕೋಡಿ ಕಾರ್ಯಕ್ಷೇತ್ರದಲ್ಲಿ ತರಬೇತಿ ಕಾರ್ಯಗಾರ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಅ.26:
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ (ರಿ) ಕಿಕ್ಕೇರಿ ವತಿಯಿಂದ ಕಸಬಾ ವಲಯದ ಮಡುವಿನಕೋಡಿ ಕಾರ್ಯಕ್ಷೇತ್ರದಲ್ಲಿ ಒಕ್ಕೂಟ ಪದಾಧಿಕಾರಿಗಳ ತರಬೇತಿ ಕಾರ್ಯಾಗಾರ ನಡೆಯಿತು.


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕರಾದ ಯೋಗೇಶ್ ಅವರು ದೀಪ ಉದ್ಘಾಟನೆ ಮೂಲಕ ಕಾರ್ಯಗಾರಕ್ಕೆ ಚಾಲನೆ ನೀಡಿದರು.
ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉದ್ದೇಶಗಳು, ಕಾರ್ಯಕ್ರಮಗಳು, ಸಮುದಾಯ ಅಭಿವೃದ್ಧಿ, ಸ್ವಸಹಾಯ ಸಂಘಗಳ ಪಾತ್ರ, ಕೃಷಿ ಅಭಿವೃದ್ಧಿ, ಮಾನವ ಸಂಪನ್ಮೂಲ ಅಭಿವೃದ್ಧಿ, ಪ್ರಗತಿ ನಿಧಿ, ಜನಜಾಗೃತಿ, ನಮ್ಮೂರು ನಮ್ಮ ಕೆರೆ, ಜ್ಞಾನದೀಪ ಶಾಲಾ ಶಿಕ್ಷಣ, ಸುಜ್ಞಾನ ನಿಧಿ, ಶಿಷ್ಯವೇತನ ಯೋಜನೆ, ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮ ಮೊದಲಾದ ವಿವಿಧ ಯೋಜನೆಗಳ ಕುರಿತು ಸವಿಸ್ತಾರವಾದ ಮಾಹಿತಿ ನೀಡಿದರು.


ಮುಖ್ಯವಾಗಿ ಒಕ್ಕೂಟದ ಪದಾಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಹೇಗೆ ಸಮರ್ಪಕವಾಗಿ ನಿರ್ವಹಿಸಬೇಕು ಎಂಬುದರ ಕುರಿತು ಮಾರ್ಗದರ್ಶನ ನೀಡಿದರು.
ಯೋಜನಾಧಿಕಾರಿಯಾದ ಪ್ರಸಾದ್ ಅವರು ಪ್ರಗತಿ ರಕ್ಷಾ ಕವಚ, ಬಡ್ಡಿದರ, ವಾರದ ಸಭೆ, ಒಕ್ಕೂಟ ಸಭೆ, ಮರುಪಾವತಿ ಚೀಟಿ ಅನುಷ್ಠಾನ, ಆರೋಗ್ಯ ರಕ್ಷಾ ಹಾಗೂ ಸಂಪೂರ್ಣ ಸುರಕ್ಷಾ ವಿಮಾ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕಿ ಗುಣಶ್ರೀ, ಸೇವಾ ಪ್ರತಿನಿಧಿಗಳಾದ ಅನಿತಾ, ಉಮಾ, ಶ್ವೇತಾ, ನೇತ್ರವತಿ, ಶಶಿಕಲಾ, ಸುನಿತಾ ಹಾಗೂ ಒಕ್ಕೂಟ ಪದಾಧಿಕಾರಿಗಳು ಉಪಸ್ಥಿತರಿದ್ದರು.