
ಸಂಜೆವಾಣಿ ವಾರ್ತೆ
ತಿ.ನರಸೀಪುರ ನ.17- ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾ.ನಂದಿನಿ ಆವರ ಹುಟ್ಟು ಹಬ್ಬವನ್ನು ಡಾ.ಎಸ್.ಬಿ.ಅಭಿಲಾಶ್ ಅಭಿಮಾನಿಗಳ ಬಳಗದ ವತಿಯಿಂದ ಆಚರಿಸಿ, ಸನ್ಮಾನಿಸಲಾಯಿತು.
ವೈದ್ಯೆ ಡಾ.ನಂದಿನಿ ಮಾತನಾಡಿ, ನರಸೀಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಕ್ಕಳ ವೈದ್ಯೆಯಾಗಿ ಸುಮಾರು ವರ್ಷದಿಂದ ಸೇವೆ ಸಲ್ಲಿಸುತ್ತಿರುವುದು ನನ್ನ ಸೌಭಾಗ್ಯವಾಗಿದೆ. ನಮ್ಮ ತಂದೆ ತಾಯಿಯ ಆಶೀರ್ವಾದದಿಂದ ನಾನು ಮಕ್ಕಳ ತಜ್ಞರಾಗಿ ಸೇವೆ ಮಾಡಲು ಅವಕಾಶ ದೊರಕಿದೆ. ಮಕ್ಕಳು ದೇವರ ಸಮಾನ, ಮುಗ್ದತೆಯ ಮಕ್ಕಳಿಗೆ ಏನು ಸಹ ತಿಳಿಯ ತಿಳಿದಿರುವುದಿಲ್ಲ. ಅನಾರೋಗ್ಯಕೀಡಾದಾಗ ತಮ್ಮ ಕಷ್ಟಗಳನ್ನು ಹೇಳಿಕೊಳ್ಳಲು ಸಾಧ್ಯವಾಗಿರುವುದಿಲ್ಲ ಅಂತಹ ಮುಗ್ಧ ಮಕ್ಕಳ ಸೇವೆ ಮಾಡುವುದು ನನ್ನ ಪುಣ್ಯವಾಗಿದೆ. ತಾಲೂಕಿನ ಜನತೆಗೆ ನನ್ನ ಕೈಲಾದಷ್ಟು ಸೇವೆ ಮಾಡುತ್ತೇನೆ ಎಂದರು.
ಸಮಾಜ ಸೇವಕ ನಿಲಸೋಗೆ ಉಮೇಶ್ ಮಾತನಾಡಿ, ಡಾ.ನಂದಿನಿ ಅವರು ಸರಳತೆಯ ವ್ಯಕ್ತಿತ್ವದ ಹೃದಯವಂತರು . ಆಸ್ಪತ್ರೆಗೆ ರೋಗಿಯಾಗಿ ಬರುವ ಮಕ್ಕಳನ್ನು ತಮ್ಮ ಸ್ವಂತ ಮಕ್ಕಳಂತೆ ಭಾವಿಸಿ ಅವರಿಗೆ ಚಿಕಿತ್ಸೆಯನ್ನು ನೀಡುವುದರಲ್ಲಿ ನಿಪುಣರಾಗಿದ್ದಾರೆ. ಚಿಕಿತ್ಸೆ ಪಡೆದ ಮಕ್ಕಳು ಬೇಗ ಗುಣಮುಖರಾಗುತ್ತಿದ್ದಾರೆ. ಇವರ ಈ ಸೇವೆ ನಮ್ಮ ತಾಲೂಕಿಗಷ್ಟೇ ಸೀಮಿತವಾಗದೆ ಅಕ್ಕಪಕ್ಕದ ತಾಲೂಕಿನ ಜನತೆಗೂ ಸಹ ಸಿಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ನಮ್ಮ ಆಸ್ಪತ್ರೆಯ ಸೇವೆಯನ್ನು ನೋಡಿ ಮಳವಳ್ಳಿ ಕೊಳ್ಳೇಗಾಲ ನಂಜನಗೂಡು ಯಳಂದೂರು , ಮೈಸೂರು , ಚಾಮರಾಜನಗರ ತಾಲೂಕಿನ ರೋಗಿಗಳು ಬರುತ್ತಿರುವುದು ತುಂಬಾ ಸಂತೋಷದ ವಿಚಾರ ಕಾರಣವೇನೆಂದರೆ ನಮ್ಮ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳು ಹಾಗೂ ಎಲ್ಲಾ ತಜ್ಞ ವೈದ್ಯರು ಮತ್ತು ಶುಶ್ರೂಷಕಿಯರು ಇವರುಗಳ ಸೇವೆ ಅಪಾರವಾಗಿದೆ. ಮುಂದೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ರೋಗಿಗಳಿಗೆ ಸೌಲಭ್ಯಗಳು ಸಿಗಲಿ ಎಂದು ಹಾರೈಸುತ್ತೇನೆ ಎಂದರು.
ಪುರಸಭೆ ಸದಸ್ಯ ಮೆಡಿಕಲ್ ನಾಗರಾಜು, ಗ್ರಾಮ ಪಂಚಾಯತಿ ಸದಸ್ಯ ನಿರಂಜನ್, ಹೊಸಪುರ ಮಹೇಂದ್ರ, ರಾಜೀವ್, ಪ್ರಕಾಶ್, ದಾದಿಯರಾದ ಭಾಗ್ಯಮ್ಮ, ರಾಜಮ್ಮ ಹಾಗೂ ಇನ್ನಿತರರು ಭಾಗವಹಿಸಿದ್ದರು.


























