
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ನ. 22 :- ಮಕ್ಕಳು ಪಠ್ಯದ ಜೊತೆಗೆ ಪಠ್ಯತರ ಚಟುವಟಿಕೆಗಳಾದ ಕ್ರೀಡೆ, ಕಲೆಗಳಲ್ಲಿಯೂ ಆಸಕ್ತಿ ತೋರುತ್ತಿದ್ದೂ ಇವುಗಳನ್ನು ಪಾಲಕರು, ಶಿಕ್ಷಕರು ಮಕ್ಕಳ ಆಸಕ್ತಿಯನ್ನು ಸೂಕ್ಷ್ಮವಾಗಿ ಅರಿತು ಅವರಿಗೆ ಅಗತ್ಯವಾಗಿ ಪ್ರೋತ್ಸಾಹ ನೀಡಿದಲ್ಲಿ ಅವರು ತಮ್ಮ ಗುರಿ ಮುಟ್ಟಲು ಸಾಧ್ಯವಾಗಬಲ್ಲದು ಎಂದು ಶಿಕ್ಷಣ ಇಲಾಖೆಯ ಸಂಯೋಜಕ ಬಿ ನಿಂಗಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ತಾಲೂಕಿನ ತುಪ್ಪಕನಹಳ್ಳಿ ಗ್ರಾಮದಲ್ಲಿ 2025 – 26 ನೇ ಸಾಲಿನ ಚೌಡಾಪುರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತ ಮಕ್ಕಳ ಪ್ರತಿಭೆಗೆ ಪ್ರತಿಭಾ ಕಾರಂಜಿ ಬಹುಮುಖ್ಯವಾದ ವೇದಿಕೆಯಾಗಿದ್ದು ಮಕ್ಕಳ ಆಸಕ್ತಿ ಅನಾವರಣಗೊಳ್ಳುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್ ಡಿಎಂಸಿ ಅಧ್ಯಕ್ಷ ಕೆ ವೀರೇಶ್ ಮಾತನಾಡಿ ಗ್ರಾಮೀಣ ಭಾಗದಲ್ಲಿ ಪ್ರತಿಭಾ ಕಾರಂಜಿ ಮಕ್ಕಳ ಕಲಾಸಕ್ತಿ ಯನ್ನು ಹೆಚ್ಚಿಸುತ್ತದೆ ಇದಕ್ಕೆ ಪಾಲಕರು ಹಾಗೂ ಶಿಕ್ಷಕರು ಪ್ರೋತ್ಸಾಹ ನೀಡಿದಲ್ಲಿ ಮಕ್ಕಳ ಪ್ರತಿಭೆ ಉನ್ನತ ಮಟ್ಟ ತಲುಪಿ ನಾಡಿನ ಹಿರಿಮೆ ಹೆಚ್ಚಿಸಲು ಸಹಕಾರಿಯಾಗುತ್ತದೆ ಎಂದರು.
ಇಲಾಖೆಯ ಶಿಕ್ಷಣ ಸಂಯೋಜಕರಾದ ಆರ್ ಪಿ ರವೀಂದ್ರ ನಾಗವೇಣಿ ಸಮೂಹ ಸಂಪನ್ಮೂಲ ವ್ಯಕ್ತಿಯಾದ ಕೆಸಿ ಪ್ರಕಾಶ್ ವಿವಿಧ ಶಾಲೆಗಳಿಂದ ಆಗಮಿಸಿದ ಮುಖ್ಯ ಗುರುಗಳು ಸಹ ಶಿಕ್ಷಕ ವರ್ಗ ವಿದ್ಯಾರ್ಥಿ ವಿದ್ಯಾರ್ಥಿನಿಯರು ಆಗಮಿಸಿದ್ದರು
ತುಪ್ಪಕ್ಕನಹಳ್ಳಿ ಗ್ರಾಮದ ಗ್ರಾಮ ಪಂಚಾಯತಿ ಸದಸ್ಯರು ಎಸ್‌ಡಿಎಂಸಿ ಸರ್ವ ಸದಸ್ಯರು ಊರಿನ ಮುಖಂಡರು ಭಾಗವಹಿಸಿ ಮಕ್ಕಳಿಗೆ ಶುಭ ಕೋರಿದರು
ಸದರಿ ಕಾರ್ಯಕ್ರಮದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ತಿಪ್ಪೇಸ್ವಾಮಿ ಅವರಿಗೆ ಕ್ಲಸ್ಟರ್ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಭಾಷಾ ವಿಷಯಗಳ ಕಂಠಪಾಠ, ಕ್ಲೇ ಮಾಡ್ಲಿಂಗ್,ಛದ್ಮ ವೇಷ, ಕವನ ವಾಚನ,ಧಾರ್ಮಿಕ ಪಠಣ ಇನ್ನಿತರೆ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
ಸರಕಾರಿ ನೌಕರ ಸಂಘದ ರಾಜ್ಯ ಪರಿಷತ್ ಸದಸ್ಯ ಆರ್ ಬಸವರಾಜ. ತಾಲೂಕು ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಶೇಖರಯ್ಯ, ಶಿಕ್ಷಕರ ಪ್ರತಿನಿಧಿಗಳಾದ ಎರ್ರಿಸ್ವಾಮಿ,ಪಾಂಡುರಂಗ,
ತಿಪ್ಪೇಶ್, ಭಾಗವಹಿಸಿದ್ದರು. ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನಗಳನ್ನು ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಿಕ್ಷಕರಿಗೆ ಜಿಲ್ಲಾ ಪ್ರಶಸ್ತಿ ವಿಜೇತ ತಿಪ್ಪೇಸ್ವಾಮಿ ಇವರ ಪ್ರಯೋಜಕತ್ವದಲ್ಲಿ ಸ್ಮರಣಿಕೆಗಳನ್ನ ಎಲ್ಲಾ ಶಿಕ್ಷಕರಿಗೆ ನೀಡಲಾಯಿತು.ಶಾಲೆಯ ಶಿಕ್ಷಕರಾದ ಶಿವಪುತ್ರ ಸ್ವಾಮಿ ಎನ್ ಎಂ, ಬಿ ಎಂ ಬಸವರಾಜ ಎರ್ರಿಸ್ವಾಮಿ ಕವಿತಾ ಉಜ್ಜೋಳ, ಅನಿತಾ ಉಡುಚಾಳ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಆರ್ ಪ್ರಶಾಂತ್ ಕುಮಾರ್ ಶಿಕ್ಷಕರು ನಿರೂಪಿಸಿದರು,ಟಿ ಓ ಕೃಷ್ಣ ಶಿಕ್ಷಕರು ವಂದಿಸಿದರು.

























