ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು: ಜೆ.ಎನ್.ರಾಮಕೃಷ್ಣೇಗೌಡ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಡಿ.28:
ಮಕ್ಕಳಿಗೆ ವಿದ್ಯೆಯ ಜೊತೆಗೆ ಉತ್ತಮ ಸಂಸ್ಕಾರವನ್ನು ನೀಡಬೇಕು. ಸಂಸ್ಕಾರವಂತ ವಿದ್ಯಾವಿಂತರಿದ್ದರೆ ಮಾತ್ರ ಸುಸಂಕೃತ ಸಮಾಜ ನಿರ್ಮಾಣ ಸಾಧ್ಯ ಎಂದು ಕನ್ನಡಪ್ರಭ-ಸವರ್ಣ ವಾಹಿನಿಯ ಕಾನ್ ಕ್ಲೇವ್ ಪ್ರಶಸ್ತಿ ಪುರಸ್ಕೃತ ಹಾಗೂ ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಅಭಿಪ್ರಾಯಪಟ್ಟರು.


ಅವರು ಪಟ್ಟಣದ ಬಿಜಿಎಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಸಂಸ್ಥೆಯ ಪದವಿ ಪೂರ್ವ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಆಯೋಜಿಸಿದ್ದ ಪೆÇೀಷಕರ ಪಾದಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ದೇಶದಲ್ಲಿಂದು ವಿದ್ಯಾವಂತರ ಸಂಖ್ಯೆ ಹೆಚ್ಚಾಗುತ್ತಿದೆ. ವಿದ್ಯಾವಂತರ ಸಂಖ್ಯೆ ಹೆಚ್ಚಿದಷ್ಟು ಸಾಮಾಜಿಕ ಆರೋಗ್ಯ ಹದಗೆಡುತ್ತಿದೆ. ಸಮಾಜ ಸೇವೆಯಲ್ಲಿ ಭಗವಂತನನ್ನು ಕಾಣಬೇಕಾದ ವಿದ್ಯಾವಂತರು ಭ್ರಷ್ಟರಾಗುತ್ತಿದ್ದಾರೆ. ಸಾಕಿ ಸಲುಹಿದ ತಂದೆ ತಾಯಂದಿರು ವೃದ್ದಾಶ್ರಮಗಳ ಪಾಲಾಗುತ್ತಿದ್ದರೆ ವಿದ್ಯೆ ಕಲಿಸಿದ ಗುರುಗಳು ನಗಣ್ಯರಾಗುತ್ತಿದ್ದಾರೆ. ಶಿಕ್ಷಣದಲ್ಲಿ ಸಂಸ್ಕಾರದ ಕೊರತೆಯೇ ಇದಕ್ಕೆ ಮುಖ್ಯ ಕಾರಣ. ಪೆÇೀಷಕರು ಮಕ್ಕಳ ಕಲಿಕೆಗೆ ನೀಡುವಷ್ಟೇ ಆಸಕ್ತಿಯನ್ನು ಮಕ್ಕಳ ಸಂಸ್ಕಾರ ಕಲಿಕೆಗೂ ನೀಡಬೇಕು. ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ ಗುರು ಹಿರಿಯರು ಮತ್ತು ತಂದೆ ತಾಯಂದಿರ ಬಗ್ಗೆ ಗೌರವ ಕೊಡುವುದನ್ನು ಕಲಿಸಬೇಕು. ಸಂಸ್ಕಾರವಂತ ಯುವಕರು ದೇಶದ ನಿಜವಾದ ಆಸ್ತಿ ಎಂದು ಡಾ.ಜೆ.ಎನ್.ರಾಮಕೃಷ್ಣೇಗೌಡ ಅಭಿಪ್ರಾಯಪಟ್ಟರು.


ಪಾದಪೂಜೆಯ ಅಂಗವಾಗಿ ಕಾಲೇಜು ಆವರಣದಲ್ಲಿ ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಬೈರವೈಕ್ಯ ಡಾ.ಬಾಲಗಂಗಾಧರನಾಥ ಶ್ರೀಗಳ ಪುಥ್ಥಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತಲ್ಲದೆ ವೇದ ಮಂತ್ರ ಘೋಷಗಳ ಮೂಲಕ ವಿದ್ಯಾರ್ಥಿಗಳಿಂದ ಅವರ ತಂದೆ ತಾಯಿಗೆ ಪಾದಪೂಜೆ ಮಾಡಿಸಿ ಮಕ್ಕಳಿಗೆ ಆರ್ಶೀವಾದ ಮಾಡಿಸಲಾಯಿತು. ಗಣಪತಿ ವೇಷಧಾರಿಯ ಮೂಲಕ ಜಗತ್ತಿನ ಆದಿ ತಂದೆ ತಾಯಿಗಳಾದ ಶಿವ ಪಾರ್ವತಿಯವರಿಗೆ ಪಾದಪೂಜೆ ಮಾಡಿಸುವ ಮೂಲಕ ಪಾದಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಶ್ರವಣ ಪಿತೃಭಕ್ತಿಯನ್ನು ವಿದ್ಯರ್ಥಿಗಳಿಗೆ ವೇಷದಾರಿಗಳ ಮೂಲಕ ಪರಿಚಯಿಸಲಾಯಿತು. ವಿದ್ಯಾರ್ಥಿನಿಯರಿಂದ ಭರತ ನಾಟ್ಯ ಪ್ರದರ್ಶನ ನಡೆಯಿತು.


ಜಿಲ್ಲಾ ರೈತಸಂಘದ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಂ.ಕೆ.ಹರಿಚರಣತಿಲಕ್, ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಪುಟ್ಟರಾಜು, ಬಳ್ಳೇಕೆರೆ ಮಂಜುನಾಥ್ ಸೇರಿದಂತೆ ಹಲವರಿದ್ದರು