ಸಂಜೆವಾಣಿ ನ್ಯೂಸ್
ಮೈಸೂರು.ಆ.17:-ನಮಗೆ ತಿಳಿದಷ್ಟು ಇತಿಹಾಸ, ಧರ್ಮ ನಮ್ಮ ಮಕ್ಕಳಿಗೆ ತಿಳಿದಿಲ್ಲ. ಈ ನಿಟ್ಟಿನಲ್ಲಿ ಮಕ್ಕಳಿಗೆ ಇತಿಹಾಸ, ಸಂಸ್ಕೃತಿ, ಹಿಂದು ಧರ್ಮ ಗ್ರಂಥಗಳ ಸಾರವನ್ನು ತಿಳಿಸುವ ಕೆಲಸವಾಗಬೇಕು ಎಂದು ವಿಧಾನ ಪರಿಷತ್ನ ಸದಸ್ಯರಾದ ಸಿ.ಎನ್. ಮಂಜೇಗೌಡ ತಿಳಿಸಿದರು. ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಕರ್ನಾಟಕ ಕಲಾಮಂದಿರದ ಆವರಣದಲ್ಲಿರುವ ಕಿರು ರಂಗಮoದಿರದಲ್ಲಿ ಆಯೋಜಿಸಲಾಗಿದ್ದ, ಶ್ರೀ ಕೃಷ್ಣ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು. ಕೃಷ್ಣ ಇಡೀ ಮನುಕುಲದ ಮಾದರಿ ಹಾಗೂ ಸಮಾಜವನ್ನು ಮುನ್ನಡೆಸುವ ಸಾರಥಿಯಂತೆ. ಕೃಷ್ಣ ಯಾವಾಗಲೂ ನ್ಯಾ?ಂದ ಪರವಾಗಿದ್ದವನು. ಧರ್ಮೋ ರಕ್ಷಿತೀ ರಕ್ಷಿತಃ. ಧರ್ಮವನ್ನು ಕಾಪಾಡಬೇಕು ಎಂದು ಭೋಧಿಸಿದವನು. ಕೃಷ್ಣ ಜನ್ಮಾಷ್ಠಾಮಿ ಭಾರತದಲ್ಲಿ ಎಲ್ಲರಿಗೂ ಪ್ರಮುಖವಾದ ಶ್ರೇಷ್ಠ ಹಬ್ಬವಾಗಿದೆ ಎಂದರು ಮಕ್ಕಳಲ್ಲಿ ದೈವಿಕ ಭಕ್ತಿ, ಭಾವ ಬೆಳೆಯಬೇಕಾದರೆ, ತಾಯಿಯ ಆದರ್ಶ ಮುಖ್ಯವಾಗುತ್ತದೆ. ಹಾಗಾಗಿ ತಾಯಿ ಸವಾಜದಲ್ಲಿ ಎಲ್ಲಾ ರೀತಿ?ಂ ಜವಾಬ್ದಾರಿ?ಂನ್ನು ಹೊರುವ ಶಕ್ತಿ ಹೊಂದಿದ್ದಾಳೆ. ಒಂದು ಹೆಣ್ಣನ್ನು ಗೌರವಿಸಿದರೆ ನೂರು ದೇವರನ್ನು ಪೂಜಿಸುವುದಕ್ಕೆ ಸಮವಾಗಿದೆ. ಹಾಗಾಗಿ ಹೆಣ್ಣನ್ನು ಗೌರವಿಸುವ ಕೆಲಸವಾಗಬೇಕು ಎಂದು ಅಭಿಪ್ರಾಯಿಸಿದರು.
ಅಪರ ಜಿಲ್ಲಾಧಿಕಾರಿ ಡಾ.ಪಿ ಶಿವರಾಜು ಮಾತನಾಡಿ, ಕೃಷ್ಣ ಮಹಾ ಭಾರತದಲ್ಲಿ ತಿಳಿಸಿರುವಂತೆ ಜೀವನದಲ್ಲಿ ಯಾರೊಬ್ಬರು ಆತಂಕಕ್ಕೆ ಒಳಗಾಗದೇ, ಹತಾಶರಾಗದೇ, ಸೋತಿದ್ದೇವೆ ಎಂದು ಶರಣಾಗತರಾಗಬಾರದು ಧೃಡವಾಗಿ ನಿಲ್ಲಬೇಕು. ಎಲ್ಲಿ ಅಧರ್ಮ ನಡೆಯುತ್ತದೆಯೋ ಅಲ್ಲಿ ಕೃಷ್ಣ ಮತ್ತೆ ಹುಟ್ಟಿರುತಾನೆ. ಅಂದರೆ ಕೃಷ್ಣ ಬಿತ್ತಿದಂತಹ ಆದರ್ಶಗಳು, ಮಾರ್ಗಗಳ ಮೂಲಕ ಪ್ರತಿಯೊಬ್ಬರ ಜೀವನದಲ್ಲಿ ಮೊಳಕೆಯಾಗಿ ಸಸಿಯಂತೆ ಮೂಡುತ್ತವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಲವಾರು ಪುಟ್ಟ ಪುಟ್ಟ ಮಕ್ಕಳು ಕೃಷ್ಣ ಹಾಗೂ ರಾಧೆಯ ವೇಶಧಾರಿಗಳಾಗಿ ಪ್ರದರ್ಶಿಸಿ ನೆರೆದಿದ್ದವರನ್ನು ಕಣ್ಮನವನ್ನು ಕಂಗೊಳಿಸಿದರು. ಹಾಗೂ ದಿವ್ಯ ಚ್ಚಿದಾನಂದ ಮತ್ತು ತಂಡದಿಂದ ಗೀತ ಗಾಯನ ನೆಡಸಲಾಯಿತು. ಬಳಿಕ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಪ್ರಾಚೀನ ಇತಿಹಾಸ ಮತ್ತು ಪುರತತ್ವ ವಿಭಾಗ ಮುಖ್ಯಸ್ಥ ಪೆÇ್ರ.ಶೆಲ್ವ ಪಿಳ್ಳೆ ಅಂಯುಂಗಾರ್ ಉಪನ್ಯಾಸ ಕಾರ್ಯಕ್ರಮ ನಡೆಸಿಕೊಟ್ಟರು. ನಗರಪಾಲಿಕೆ ಮಾಜಿ ಉಪ ಮೇಯರ್ ಪುಷ್ಪವಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಡಿ ಸುದರ್ಶನ್, ಶ್ರೀ ಕೃಷ್ಣ ಜಯಂತೋತ್ಸವ ಸಮಿತಿಯ ವೆಂಕಟಾಚಲಾ ಉಪಸ್ಥಿತರಿದ್ದರು.




























