ಮಕಂಜ – ಅರಂತೋಡು ರಸ್ತೆಯಲ್ಲಿ ಕಾಡಾನೆ ಸಂಚಾರ

ಸುಳ್ಯ:ಮಕಂಜ – ಅರಂತೋಡು ರಸ್ತೆಯಲ್ಲಿ ಸಂಜೆಯಾಗುತ್ತಲೇ ಕಾಡಾನೆ ಸಂಚಾರ ರಸ್ತೆ ಮಧ್ಯೆ ಪ್ರತ್ಯಕ್ಷವಾಗುವ ಘಟನೆ ನಡೆದಿದೆ.
ಕಳೆದ ಕೆಲವು ಸಮಯಗಳಿಂದ ಅರಂತೋಡು, ಮರ್ಕಂಜ ಗ್ರಾಮಗಳ ಕಾಡುಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳು ಸಂಜೆಯಾಗುತ್ತಲೇ ಕಾಡು ಬಿಟ್ಟು ನಾಡಿಗೆ ಇಳಿಯುತ್ತಿವೆ. ಕಾಡಿನಂಚಿನ ತೋಟಗಳಿಗೆ ನುಗ್ಗುತ್ತಿರುವ ಕಾಡಾನೆಗಳ ಹಿಂಡು ಅಪಾರ ಕೃಷಿ ಹಾನಿ ಮಾಡುತ್ತಿವೆ. ಮಂಗಳವಾರ ಸಂಜೆ ಅರಂತೋಡು ಭಾಗದಿಂದ ಮಕಂಜಕ್ಕೆ ಹೋಗುವ ಸಂದರ್ಭ ಅಡ್ತಲೆ ಬಳಿ ಕಾಡಾನೆಗಳ ಹಿಂಡು ಎದುರಾಗಿದೆ. ಒಂದು ಕಡೆಯಿಂದ ಅಡ್ತಲೆ ಭಾಗದಲ್ಲಿ ಚಿರತೆ ಕಾಟ ಈ ಮಧ್ಯೆ ಕಾಡಾನೆಗಳ ಉಪಟಳ ಮಿತೀಮೀರಿದೆ. ಇದರಿಂದ ರಸ್ತೆಯಲ್ಲಿ ರಾತ್ರಿ ಸಂಚಾರ ಮಾಡುವಾಗ ಎಚ್ಚರ ವಹಿಸಬೇಕಿದೆ.