
ಮಂಗಳೂರು: ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್‌ಗೆ ಘೆರಾವ್ ಪ್ರಕರಣದಲ್ಲಿ ಪೊಲೀಸ್ ದೂರು ದಾಖಲಾಗಿದೆ.
ಕುತ್ತಾರುವಿನಲ್ಲಿ ಕೊರಗಜ್ಜನ ಸರ್ಕಲ್ ನಿರ್ಮಾಣದ ಬಗ್ಗೆ ಮುಸ್ಲಿಂ ಸಮುದಾಯದ ತಂಡವೊಂದು ಆಕ್ಷೇಪಣೆ ವ್ಯಕ್ತಪಡಿಸಿ ಸ್ಪೀಕರ್ ಖಾದರ್ ಅವರೊಂದಿಗೆ ತಗಾದೆ ತೆಗೆದು ಘೆರಾವ್ ಹಾಕಿತ್ತು. ಈ ಪ್ರಕರಣದ ಬಗ್ಗೆ ಸ್ಪೀಕರ್ ಭದ್ರತಾ ಸಿಬ್ಬಂದಿ ಮೊಹಮ್ಮದ್ ಯಾಸಿನ್ ಇನಾಮದಾರ್ ಪೊಲೀಸ್ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಮದನಿನಗರ ನಿವಾಸಿ ಜುನೈದ್ ಸೇರಿದಂತೆ ೧೧ಮಂದಿಯ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

























