
ಮಂಗಳೂರು: ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಮಂಗಳವಾರ ಮಧ್ಯಾಹ್ನ ಕೈದಿಗಳ ನಡುವೆ ಗಲಾಟೆ ಸಂಭವಿಸಿದ್ದು, ಜೈಲು ಆಸ್ತಿಪಾಸ್ತಿಗೂ ವ್ಯಾಪಕ ಹಾನಿಯಾಗಿದೆ.
ಮಧ್ಯಾಹ್ನ ೨:೧೫ರ ಸುಮಾರಿಗೆ ಈ ಘಟನೆ ನಡೆದಿದೆ. “ಎ” ಬ್ಯಾರಕ್ನ ಖೈದಿಗಳು ಅಡುಗೆ ಕೋಣೆಗೆ ನುಗ್ಗಿ, ಅಡುಗೆ ಕೆಲಸ ಮಾಡುತ್ತಿದ್ದ ವಿಚಾರಣಾಧೀನ ಕೈದಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಕಾರಾಗೃಹದ ಅಧಿಕಾರಿ ಸಿಬ್ಬಂದಿಗಳಿಂದ ಮಾಹಿತಿ ಪಡೆದ ಅಧೀಕ್ಷಕ ಬಿ. ಸುರೇಶ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ, “ಎ” ಬ್ಯಾರಕ್ನ ವಿಚಾರಣಾಧೀನ ಕೈದಿಗಳು ಅಡುಗೆ ಕೋಣೆಯಲ್ಲಿದ್ದವರ ಮೇಲೆ ಹಲ್ಲೆ ನಡೆಸಿರುವುದು ದೃಢಪಟ್ಟಿದೆ.
ಈ ಹಲ್ಲೆಯ ವಿಷಯ ತಿಳಿದ “ಬಿ” ಬ್ಯಾರಕ್ನ ಎಲ್ಲಾ ವಿಚಾರಣಾಧೀನ ಕೈದಿಗಳು ಜೋರಾಗಿ ಕೂಗಾಡುತ್ತಾ, ಬ್ಯಾರಕ್ಗೆ ಅಳವಡಿಸಲಾಗಿದ್ದ ಕಬ್ಬಿಣದ ಬಾಗಿಲನ್ನು ಮುರಿಯಲು ಪ್ರಯತ್ನಿಸಿದ್ದಾರೆ. ಅಲ್ಲದೆ, “ಬಿ” ಬ್ಯಾರಕ್ನ ಒಳಗಡೆ ಅಳವಡಿಸಲಾಗಿದ್ದ ೧೦ ಸಿಸಿಟಿವಿ ಕ್ಯಾಮೆರಾಗಳನ್ನು ಹಾನಿ ಮಾಡಿ, ಅವುಗಳ ವೈರ್ಗಳನ್ನು ಕೀಳಲಾಗಿದೆ. “ಬಿ” ಬ್ಯಾರಕ್ನಲ್ಲಿರುವ ಮೊಬೈಲ್ ಜಾಮರ್ನ ಆ?ಯಂಟೆನಾವನ್ನು ಕೂಡ ಜಖಂಗೊಳಿಸಲಾಗಿದೆ. ಈ ಸರ್ಕಾರಿ ಆಸ್ತಿಪಾಸ್ತಿಗಳ ಅಂದಾಜು ಮೌಲ್ಯ ೧,೦೦,೦೦೦/- ರೂಪಾಯಿ ಎಂದು ಅಂದಾಜಿಸಲಾಗಿದೆ.
ಘಟನೆಯಲ್ಲಿ ಸಣ್ಣಪುಟ್ಟ ಗಾಯಗಳಾಗಿರುವ ವಿಚಾರಣಾಧೀನ ಕೈದಿಗಳಿಗೆ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಈ ಬಗ್ಗೆ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ, ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಬರ್ಕೆ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂ: ೫೧/೨೦೨೫ ಅಡಿಯಲ್ಲಿ ೧೧೮(೧), ೩(೫) ಃಓS-೨೦೨೩, ಮತ್ತು ೨(ಃ) ಏPಆಐP ಂಅಖಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.