ಮಂಗಳೂರು: ಕೆಥೋಲಿಕ್ ಚೆಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ ‘ರಚನಾ’ ವತಿಯಿಂದ ಐವರು ಸಾಧಕರಿಗೆ ೨೦೨೩-೨೫ನೇ ಸಾಲಿನ ರಚನಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಗರದ ಮಿಲಾಗ್ರಿಸ್ ಹಾಲ್‌ನಲ್ಲಿ ಭಾನುವಾರ ನಡೆಯಿತು.
ಆಸ್ಟಿನ್ ರೋಚ್ ಬೆಂಗಳೂರು ಅವರಿಗೆ ರಚನಾ ಎಂಟರ್‌ಪ್ರಿನರ್ ಪ್ರಶಸ್ತಿ, ಜಾನ್ ರಿಚರ್ಡ್ ಲೋಬೊ (ಜೆ.ಆರ್. ಲೋಬೊ) ಅವರಿಗೆ ರಚನಾ ಪ್ರೊಫೆಶನಲ್ ಪ್ರಶಸ್ತಿ, ಡಾ.ಗಾಡ್ವಿನ್ ರೋಡ್ರಿಗಸ್ ಬೆಳುವಾಯಿ ಅವರಿಗೆ ರಚನಾ ಕೃಷಿ ಪ್ರಶಸ್ತಿ, ಪ್ರತಾಪ್ ಮೆಂಡೋನ್ಸಾ ದುಬೈ ಅವರಿಗೆ ರಚನಾ ಎನ್‌ಆರ್‌ಐ ಎಂಟರ್‌ಪ್ರಿನರ್ ಪ್ರಶಸ್ತಿ, ಶೋಭಾ ಮೆಂಡೋನ್ಸಾ ದುಬೈ ಅವರಿಗೆ ರಚನಾ ಔಟ್‌ಸ್ಟ್ಯಾಂಡಿಂಗ್ ಪ್ರಶಸ್ತಿ ಪ್ರದಾನ ಮಾಡಲಾಯಿತು.ಮುಖ್ಯ ಅತಿಥಿಯಾಗಿ ಇಂಧನ ಸಚಿವ ಕೆ.ಜೆ. ಜಾರ್ಜ್ ಭಾಗವಹಿಸಿ ಪ್ರಶಸ್ತಿ ಪ್ರದಾನ ಮಾಡಿದರು.
ಬಳಿಕ ಮಾತನಾಡಿದ ಸಚಿವ ಜಾರ್ಜ್, ಸಮಾಜದಲ್ಲಿ ಕಷ್ಟದಲ್ಲಿ ಇರುವವರಿಗೆ ನೆರವಾಗುವಂತೆ ಏಸುಕ್ರಿಸ್ತರು ಸಂದೇಶ ನೀಡಿದ್ದರು.ಅವರ ತತ್ವವನ್ನು ಪಾಲಿಸಿಕೊಂಡು ಕಾಂಗ್ರೆಸ್ ತನ್ನ ಇತಿಹಾಸದುದ್ದಕ್ಕೂ ಬಡವರಿಗೆ ನೆರವಾಗಿದೆ. ಈಗಲೂ ಗ್ಯಾರಂಟಿ ಯೋಜನೆಗಳ ಮೂಲಕ ಆ ಸಂದೇಶಗಳನ್ನು ಅನುಷ್ಠಾನ ಮಾಡುತ್ತಿದೆ ಎಂದರು.




























