(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ಭೋವಿ, ಲಮಾಣಿ, ಕೊರಮ, ಕೊರಚ, ನಮ್ಮ ನಾಲ್ಕು ಜಾತಿಗೆ ಈ ಮೊದಲು ಸದಾಶಿವ ಆಯೋಗದ ವರದಿಯಲ್ಲಿ ಶೇ. 4.5 ಮೀಸಲಾತಿ ಇತ್ತು. ಈಗ ಶೇ.0.5 ಹೆಚ್ಚಿಸಿ ಅಲೆಮಾರಗಳ ,59 ಜಾತಿ ಸೇರಿಸಿರುವುದು ಅನ್ಯಾಯವಾಗಿದೆ. ಅದಕ್ಕಾಗಿ ನಮಗೆ ಶೇ 6 ರಿಂದ 7 ಮೀಸಲಾತಿ ನೀಡಬೇಕೆಂದು ಬೋವಿ, ಲಂಬಾಣಿ, ಕೊರಮ ಮತ್ತು ಕೊರಚ ಮೀಸಲಾತಿ ಹೋರಾಟ ಸಮಿತಿ ಹೇಳಿದೆ.
ನಗರದ ಪತ್ರಿಕಾ ಭವನದಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿದ ಸಮಿತಿಯ ಮುಖಂಡರುಗಳಾದ ಡಾ.ಹನುಂಮತಪ್ಪ, ವಿ.ರಾಮಾಂಜನೇಯಲು, ವಿ.ಮಹೇಶ್, ರಾಮುನಾಯ್ಕ, ರಮಣಪ್ಪ ಭಜಂತ್ರಿ ಮೊದಲಾದವರು. ಎಬಿಸಿಡಿಇ ವರ್ಗೀಕರಣ ಮಾಡಲು ಆಯೋಗ ಹೇಳಿತ್ತು. ಆದರೆ ಈಗ ಎಬಿಸಿ ಮಾತ್ರ ಮಾಡಿದೆ. ನಮ್ಮ 63 ಜಾತಿಗಳಿಗೆ ಶೇ 5 ರಷ್ಟು ಮಾತ್ರ ಮೀಸಲು ಮಾಡಿದೆ ಸಿದ್ದರಾಮಯ್ಯ ಸರ್ಕಾರ. ಇದು
ನಮಗೆ ಅನ್ಯಾಯವಾಗಿದೆ.ಎ.ಜೆ.ಸದಾಶಿವ ಆಯೋಗದ ವರದಿಯಲ್ಲಿ ಶೇ 4.5 ಮೀಸಲಾತಿ ನಿಗಧಿ ಮಾಡಿತ್ತು. ಅದನ್ನು ವಿರೋಧಿಸಿತ್ತು.
ಮಾಧವ ಸಮಿತಿಯ ವರದಿಯನ್ನು ವಿರೋಧಿಸಿತ್ತು. ನಾಗಮೋಹನ್ ದಾಸ್ ಅವರ ಆಯೋಗ ದತ್ತಾಂಶ ಸಂಗ್ರಹಣೆ ಸರಿಯಾಗಿಲ್ಲ. ಸಂವಿಧಾನದಲ್ಲಿ ಸ್ಪರ್ಶ, ಅ ಸ್ಪರ್ಶ ಎಂದು ಇಲ್ಲ. ಪರಿಶಿಷ್ಟ ಜಾತಿ ಎಂದರೆ ಎಲ್ಲರೂ ಒಂದೇ ಎಂದರು.
ನಮಗೆ ಶೇ 6 ರಿಂದ 7 ಮೀಸಲಾತಿ ಕೊಡಿ. ಅಲೆಮಾರಿಗಳಿಗೆ ಪ್ರತ್ಯೇಕ ಕೊಡಿ ಎಂದ ಅವರು. ತಮಗೆ ಮೀಸಲಾತಿ ಹೆಚ್ಚಳಕ್ಕಾಗಿ ನಗರದಲ್ಲಿ ಸೆ.15 ರಂದು ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ ಮಾಡಲಿದೆ. ನಗರದ ನಾರಾಯಣರಾವ್ ಪಾರ್ಕ್ ನಿಂದ ಪ್ರತಿಭಟನೆ ಮಾಡಿ ಡಿಸಿ ಕಚೇರಿಗೆ ಆಗಮಿಸಿ ಸಿಎಂ ಹಾಗು ರಾಜ್ಯಪಾಲರಿಗೆ ಮನವಿ ಮಾಡಲಿದೆಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ವೆಂಕಟೇಶ್, ಕೃಷ್ಣಾ ನಾಯ್ಕ, ಹನುಂಮತ, ಗೋಪಿ ನಾಯ್ಕ ಮೊದಲಾದವರು ಇದ್ದರು.

























