ಭೋಜನ ಕೂಟಹಿಟ್ನಾಳ್ ದೆಹಲಿಯ ನಿವಾಸಕ್ಕೆ ಶಿಫ್ಟ್

ಬೆಂಗಳೂರು, ನ೯: ಕಾಂಗ್ರೆಸ್‌ನಲ್ಲಿ ಸಂಪುಟ ಪುನಾರಚನೆ ಮತ್ತು ಕ್ರಾಂತಿಯ ಚರ್ಚೆ ಮಧ್ಯೆ ಸಿದ್ದರಾಮಯ್ಯ ಮತ್ತು ಆಪ್ತರಿಗೆ ಮಾಜಿ ಸಚಿವ ಕೆ ಎನ್ ರಾಜಣ್ಣ ಕರೆದಿದ್ದ ತುಮಕೂರು ಔತಣ ಕೂಟ ರಾಜಣ್ಣ ಮನೆಯಿಂದ ಸಂಸದ ರಾಜಶೇಖರ್ ಹಿಟ್ನಾಳ್ ಅವರ ದೆಹಲಿ ನಿವಾಸಕ್ಕೆ ಶಿಫ್ಟ್ ಆಗಿದೆ.


ಈ ಮೂಲಕ ಸಿಎಂ ಸಿದ್ದರಾಮಯ್ಯ ಬಿಹಾರ ಫಲಿತಾಂಶ ಮುಗಿದ ಬೆನ್ನಲ್ಲೇ ದೆಹಲಿ ಅಂಗಳದಲ್ಲೇ ರಾಜಕೀಯ ದಾಳಗಳನ್ನು ಉರುಳಿಸುವ ಸುಳಿವು ಕೊಟ್ಟಿದ್ದಾರೆ. ರಾಜ್ಯ ಕಾಂಗ್ರೆಸ್‌ನಲ್ಲಿ ಪವರ್ ಶೇರ್ ಮತ್ತು ಪುನಾರಚನೆ ಜಪ ಜೋರಾಗಿದೆ. ಸಿಎಂ ಮತ್ತು ಡಿಸಿಎಂ ತಮ್ಮ ಅಂತಿಮ ಹಂತದ ದಾಳಗಳನ್ನು ದೆಹಲಿಯಲ್ಲೇ ಪ್ರಯೋಗಿಸಲು ವೇದಿಕೆಯೂ ಸಿದ್ಧಗೊಳ್ಳುತ್ತಿದೆ. ಸಿಎಂ ಸಿದ್ದರಾಮಯ್ಯನವರು ಬಿಹಾರ ಫಲಿತಾಂಶ ಬಂದ ಮಾರನೇ ದಿನ ಅಂದ್ರೆ ನವೆಂಬರ್ ೧೫ ರಂದೇ ದೆಹಲಿ ತೆರಳುತ್ತಿದ್ದಾರೆ


ಸಿಎಂ ಮತ್ತು ಆಪ್ತರಿಗೆ ದೆಹಲಿಯಲ್ಲಿ ರಾಜಕೀಯ ಲೆಕ್ಕಾಚಾರಗಳನ್ನು ಹೆಣೆಯಲು ಸಂಸದ ರಾಜಶೇಖರ್ ಹಿಟ್ನಾಳ್ ಭರ್ಜರಿ ವೇದಿಕೆ ಒದಗಿಸಿ ಕೊಡಲಿದ್ದಾರೆ. ಸಂಸದ ರಾಜಶೇಖರ್ ಹಿಟ್ನಾಳ್ ಅವರು ದೆಹಲಿಗೆ ಬರುತ್ತಿರುವ ಸಿಎಂ ಮತ್ತು ಆಪ್ತರಿಗೆ ತಮ್ಮ ನಿವಾಸದಲ್ಲೇ ಡಿನ್ನರ್ ಕೂಟ ಆಯೋಜಿಸಲು ಮುಂದಾಗಿದ್ದಾರೆ.ಶುಕ್ರವಾರ ಮಾಜಿ ಸಚಿವ ಕೆ ಎನ್ ರಾಜಣ್ಣ ತುಮಕೂರಿನ ತಮ್ಮ ಮನೆಯಲ್ಲಿ ಸಿಎಂ ಮತ್ತು ಆಪ್ತರಿಗೆ ಔತಣ ಕೂಟ ಆಯೋಜಿಸಿದ್ದರು. ಆದರೆ ಕಬ್ಬು ಬೆಳೆಗಾರರ ಹೋರಾಟ, ಸಕ್ಕರೆ ಕಾರ್ಖಾನೆ ಮಾಲೀಕರ ಜತೆ ಸಭೆ ಹಿನ್ನೆಲೆಯಲ್ಲಿ ಸಿಎಂ ಅವರು ಆ ಔತಣ ಕೂಟಕ್ಕೆ ಹೋಗಲು ಸಾಧ್ಯವಾಗಿರಲಿಲ್ಲ.

ಈಗ ಹಿಟ್ನಾಳ್ ದೆಹಲಿ ನಿವಾಸಕ್ಕೆ ಶಿಫ್ಟ್ರಾ ಜಣ್ಣ ಮನೆಯಿಂದ ದೆಹಲಿಗೆ ಔತಣ ಕೂಟ ರಾಜಕೀಯ ಶಿಫ್ಟ್ ಆಗಿದೆ. ಸಿಎಂ ದೆಹಲಿ ಪ್ರವಾಸದಲ್ಲಿ ಡಿನ್ನರ್ ಮೀಟಿಂಗ್ ಶಕ್ತಿ ಪ್ರದರ್ಶನದ ಮೀಟಿಂಗ್ ಆಗಲಿದೆ ಎನ್ನಲಾಗಿದೆ. ಪವರ್ ಶೇರ್ ಮಾತುಕತೆ ನಡುವೆ ದೆಹಲಿ ಅಂಗಳದಲ್ಲಿ ಕುಳಿತೇ ಸಿಎಂ ತಂತ್ರಗಾರಿಕೆ ರೂಪಿಸ್ತಾರೆ ಎನ್ನಲಾಗಿದೆ. ಡಿನ್ನರ್ ಮೀಟಿಂಗ್ ದೆಹಲಿಗೆ ಶಿಫ್ಟ್ ಆಗಿರುವುದು ಸಿಎಂ ಮತ್ತು ಆಪ್ತರು ಪಕ್ಕಾ ಲೆಕ್ಕಾಚಾರದೊಂದಿಗೆ ಅಖಾಡಕ್ಕೆ ಇಳಿಯುವ ಸಿದ್ದತೆ ಎನ್ನಲಾಗುತ್ತಿದೆ. ಈ ಡಿನ್ನರ್ ಸಭೆ ಮೂಲಕ ಸಿಎಂ ಕೈ ಬಲಪಡಿಸುವುದು, ಸಿಎಂ ಪರ ಗಟ್ಟಿ ಬೆಂಬಲ ಹಾಗೂ ಕ್ರಾಂತಿಗೆ ಎದುರಾಗಿ ಪುನಾರಚನೆ ದಾಳವನ್ನೇ ಬಲವಾಗಿ ಪ್ರಯೋಗಿಸುವ ಲೆಕ್ಕಾಚಾರಗಳಿವೆ ಎನ್ನಲಾಗಿದೆ.