ಭೂಮಿಪೂಜೆಯಾದರೂ ಆರಂಭವಾಗದ ಸಣ್ಣ ಮಾರುಕಟ್ಟೆ ಕಾಮಗಾರಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಅ.04:
ನಗರದ ವಾರ್ಡ್ ಸಂಖ್ಯೆ 11 ವ್ಯಾಪ್ತಿಯಲ್ಲಿ ಬರುವ ಗ್ರಹಂ ರಸ್ತೆಯಲ್ಲಿನ ಈ ಮೊದಲಿನ ಸಣ್ಣ ಮಾರುಕಟ್ಟೆ ಪ್ರದೇಶ ಇದು.
ಇಲ್ಲಿ ಈ ಮೊದಲು ತರಕಾರಿ ಮತ್ತು ಮಾಂಸದ ಮಾರ್ಕೆಟ್ ಅನೇಕ ವರ್ಷಗಳ ಇತ್ತು. ಪಾಲಿಕೆಯ    ಈ  ಮಾರ್ಕೆಟ್ ಪ್ರದೇಶದಲ್ಲಿನ ಕಟ್ಟಡಗಳು ಶಿಥಿಲಗೊಂಡಿದ್ದರಿಂದ  ಅವನ್ನು ಕೆಡವಿ ಹೊಸ ಮಾರುಕಟ್ಟೆ ನಿರ್ಮಿಸುವುದಾಗಿ ಬಿಜೆಪಿ ಶಾಸಕರ ಆಡಳಿತ ಅವಧಿಯಲ್ಲಿ ಡೆಮಾಲಿಷ್ ಮಾಡಲಾಗಿತ್ತು.
ಇಲ್ಲಿ ಪಾರ್ಕಿಂಗ್ ಮಾರುಕಟ್ಟೆ ನಿರ್ಮಾಣ ಮಾಡುವುದಾಗಿ ಹೇಳಿದ್ದರು. ಆದರೆ ಮಾಡಲಿಲ್ಲ.
ನಂತರ ಬಂದ ಕಾಂಗ್ರೆಸ್ ಪಕ್ಷದ ಶಾಸಕರು ಇಲ್ಲಿ ಮಾರುಕಟ್ಟೆ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಿ ಹಲವು ತಿಂಗಳು ಕಳೆದವು. ಆದರೆ ಇನ್ನೂ ಕಾಮಗಾರಿ ಮಾತ್ರ ಆರಂಭವಾಗಲಿಲ್ಲ.
 ಈ  ಸ್ಥಳ ಹಂದಿ,  ಬೀದಿನಾಯಿ ಮತ್ತು ಬೀಡಾಡಿ ದನಗಳು ವಾಸ ಮಾಡುವ  ಸ್ಥಳವಾಗಿದೆ. ಈ ಮೊದಲು ಇಲ್ಲಿ ವ್ಯಾಪಾರ ವಹಿವಾಟು ಮಾಡುತ್ತಿದ್ದ ಜನ ಇಂದಾಗಿತ್ತೆ, ನಾಳೆ ಆಗುತ್ತೆ ಮಾರುಕಟ್ಟೆ ಎಂದು ಕನಸು ಕಾಣುತ್ತಲೇ ಇದ್ದಾರೆ.
ಕಾಮಗಾರಿಗೆ ಭೂಮಿ ಪೂಜೆ  ಮಾಡಿರುವಾಗ ನಿರ್ಮಾಣ ಕೆಲಸ  ಪ್ರಾರಂಭ ಮಾಡಬೇಕು ಎನ್ನುತ್ತಾರೆ ಸಾಮಾಜಿಕ ಹೋರಾಟಗಾರ ಆರ್ ವೆಂಕಟರೆಡ್ಡಿ.
ಕಾಮಗಾರಿ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆಯೋ ಇಲ್ಲವೂ ತಿಳಿಯದಾಗಿದೆ. ಬಿಡುಗಡೆ ಆಗಿದ್ದರೆ ಕೂಡಲೇ ಕಾಮಗಾರಿ ಆರಂಭಿಸಿ ಎಬ್ನುವುದು ಜನರ ಆಗ್ರಹವಾಗಿದೆ.