
ಸಂಜೆವಾಣಿ ವಾರ್ತೆ
ಹನೂರು ಫೆ 28 :- ತಾಲೂಕಿನ ರಾಮನಗುಡ್ಡ ಕೆರೆಯಿಂದ ಚಿಂಚಳ್ಳಿ ಹಳ್ಳಕ್ಕೆ ನೀರು ಹರಿಬಿಟ್ಟು ಚಿಂಚಳ್ಳಿ ಗ್ರಾಮದ ಭೂತ ರಾಯನ ಕೆರೆ ಭರ್ತಿಯಾಗಿ ಹರಿಯುತ್ತಿರುವುದರಿಂದ ಶಾಸಕ ಎಂ.ಆರ್ ಮಂಜುನಾಥ್ ಅವರು ಭೂತರಾಯನ ಕೆರೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು. ಇತಿಹಾಸದಲ್ಲಿ ಹಳ್ಳಗಳಲ್ಲಿ ತುಂಬಿ ಹರಿಯುತ್ತಿರುವ ಕಾವೇರಿ ಮಾತೆಗೆ ರೈತರು ಕೈಮುಗಿದು ಪೂಜೆ ಸಲ್ಲಿಸಿ ಸಂಭ್ರಮಿಸಿದರು.
ಇದೆ ವೇಳೆ ಶಾಸಕ ಮಂಜುನಾಥ್ ಅವರು ಮಾತನಾಡಿ ರೈತರ ಹಲವು ದಶಕಗಳ ಬೇಡಿಕೆ ಈಡೇರಿಸಲು ನೀರಾವರಿ ಅಧಿಕಾರಿಗಳ ಮನವೊಲಿಸಿ ರಾಮನ ಗುಡ್ಡ ಕೆರೆಯಿಂದ ಹಳ್ಳಕ್ಕೆ ನೀರು ಹರಿಸಿರುವುದು ಈ ಭಾಗದ ರೈತರ ದಶಕಗಳ ಬೇಡಿಕೆಯಾಗಿದ್ದು ನೀರಾವರಿ ಯೋಜನೆಗಳಿಗೆ ಸದ್ಬಳಕೆ ಮಾಡಿಕೊಳ್ಳಲು ರೈತರ ಒತ್ತಾಯದ ಮೇರೆಗೆ ನೀರು ಬಿಡುಗಡೆಗೊಳಿಸಲಾಗಿದೆ. ಇದು ಇತಿಹಾಸದಲ್ಲಿ ಹಳ್ಳಗಳಲ್ಲಿ ನೀರು ಹರಿಯುತ್ತಿರುವುದಕ್ಕೆ ಹೆಮ್ಮೆ ಇದೆ.
ಮುಂಗಾರು ಮಳೆ ಕ್ಷೀಣಿಸಿರುವುದರಿಂದ ಹಿಂಗಾರು ಮಳೆ ಸಹ ತಾಲೂಕಿನಲ್ಲಿ ಬರದ ವಾತಾವರಣ ಉಂಟಾಗಿರುವುದರಿಂದ ರೈತರ ಸಂಕಷ್ಟ ಸಹ ಮಾದಪ್ಪನಿಗೆ ಪ್ರೀತಿಯಾಗಿದೆ ಹಾಗಾಗಿ ಕಾವೇರಿ ನದಿಯಿಂದ ರಾಮನಗುಡ್ಡ ಕೆರೆಗೆ ನೀರು ತುಂಬಿಸಿ ಈ ಭಾಗದ ರಾಯರ ದೊಡ್ಡಿ ಚಿಂಚಳ್ಳಿ ಮಣಗಳ್ಳಿ ಸೇರಿದಂತೆ ತೋಮಿಯರ್ ಪಾಳ್ಯದವರು ಸಹ ಕೆರೆಯ ನೀರು ಹರಿದು ಹಳ್ಳದಲ್ಲಿ ಹರಿದು ರೈತರ ಜಮೀನುಗಳಲ್ಲಿ ಇರುವ ಬೋರ್ವೆಲ್ಗಳು ತೋಡುಬಾವಿಗಳಲ್ಲಿ ಅಂತರ್ಜಲ ವೃದ್ಧಿಯಾದರೆ ರೈತರ ತಮ್ಮ ಬದುಕನ್ನು ಸಹ ಕಟ್ಟಿಕೊಳ್ಳಲಿದ್ದಾರೆ ಹೀಗಾಗಿ ರೈತರಿಗೆ ಬೇಕಾಗಿರುವ ನೀರಾವರಿ ಯೋಜನೆ ಹಾಗೂ ರಸ್ತೆ ವಿದ್ಯುತ್ ನೀಡಿದರೆ ರೈತರಿಗೆ ಅನುಕೂಲವಾಗಲಿದೆ ಎಂದರು.
ಈ ಸಂದರ್ಭದಲ್ಲಿ ರಾಮಾಪುರ ಮಠ ಶ್ರೀ ಬಸವಣ್ಣ ಸ್ವಾಮಿಗಳು, ಮಣಗಳ್ಳಿ ಗ್ರಾಮ ಪಂ ಮಾಜಿ ಅಧ್ಯಕ್ಷ ಸೋಮಶೇಖರ್, ಚಾಮುಲ್ ಮಾಜಿ ಅಧ್ಯಕ್ಷ ಗುರುಮಲ್ಲಪ್ಪ, ಮಾಜಿ ಜಿಲ್ಲಾ ಪಂ. ಸದಸ್ಯರುಗಳಾದ ಬಾಬು , ರವಿ, ಅಂಜುಮ್ ಪಾಷ, ಚಾಮುಲ್ ನಿರ್ದೇಶಕ ಉದ್ದನೂರು ಪ್ರಸಾದ್, ಜಿ.ಕೆ.ವಿ.ಕೆಯ ನಿವೃತ್ತ ಪ್ರಾಧ್ಯಪಕಾರದ ನಿರಂಜನ್ ಮೂರ್ತಿ, ಮಂಜೇಶ್ ಗೌಡ , ತಿರುಪತಿ, ತಂಗವೇಲು, ಶಂಕರಪ್ಪ, ಪಳನಿಸ್ವಾಮಿ, ಚಿನ್ನವೆಂಕಟ್, ನಿಂಗಶೆಟ್ಟಿ, ಗೋಪಾಲ್ ನಾಯಕ, ಕುಲ್ಲಪ್ಪ, ಭೈರನತ್ತ ರಾಜು ಸೇರಿದಂತೆ ಇನ್ನಿತರರು ಇದ್ದರು.






























