ಭೀಮ ಬಲ ಬಳಗದಿಂದ ಸಂವಿಧಾನ ದಿನ ಮ್ಯಾರಥಾನ್

ಸಂಜೆವಾಣಿ ನ್ಯೂಸ್
ಮೈಸೂರು: ಡಿ.01:-
ಸಂವಿಧಾನ ಜಾರಿಗೆ ಬಂದು 75 ವರ್ಷಗಳಾದ ವಿಶೇಷವಾಗಿಭೀಮ ಬಲ ಬಳಗ’ ತಂಡದಿಂದ ವಾಕಾಥಾನ್ ಕಾರ್ಯಕ್ರಮವು ಸುಮಾರು 200 ಜನಗಳು ಭಾಗವಹಿಸುವ ಮೂಲಕ ಯಶಸ್ವಿಯಾಗಿ ನಡೆಯಿತು.


ಈ ಕಾರ್ಯಕ್ರಮವು ಬೆಳಿಗ್ಗೆ 8 ಗಂಟೆಗೆ ಕ್ರಾಫರ್ಡ್ ಭವನದ ಬಳಿಯಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಆರಂಭಗೊಂಡು ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ಅಂಬೇಡ್ಕರ್ ಪ್ರತಿಮೆಯ ಬಳಿ ವಿರಾಮಗೊಂಡಿತು.


ನಂತರ ಅಂಬೇಡ್ಕರ್ ಪ್ರತಿಮೆ ಬಳಿ ಸಂವಿಧಾನ ಪೀಠಿಕೆಯನ್ನು ಸಾಮೂಹಿಕವಾಗಿ ಓದುವ ಮೂಲಕ ಸಂವಿಧಾನ 75 ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಮೈಸೂರು ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮ ಪಾಲನ ನಿರ್ದೇಶನಾಲಯದ ನಿರ್ದೇಶಕ ಗುರುಸಿದ್ಧಯ್ಯ ಹಾಗೂ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ ದೀಪಕ್ , ಮಾಜಿ ಸಿಂಡಿಕೇಟ್ ಸದಸ್ಯ ಶರತ್ ಸತೀಶ್ ಹಾಗೂ ಭೀಮ ಬಲ ಬಳಗದ ಸಂಚಾಲಕ ಎಂ.ಎಸ್. ಪರಮಾನಂದ ಅವರು ಸಂಚಾಲಕರು ಧ್ವಜ ತೋರುವ ಮೂಲಕ ವಾಕಥಾನ್ ಗೆ ಚಾಲನೆ ನೀಡಿದರು.


ಈ ಕಾರ್ಯಕ್ರಮದಲ್ಲಿ ಭೀಮ ಬಲ ಬಳಗದ ಸಂಚಾಲಕ ಪರಮಾನಂದ, ಎಂ.ಎಸ್.ನಟರಾಜ್, ಶಿವಣ್ಣ, ವೇದಾವತಿ, ಆನೆ ಮಹೇಶ್, ಕಾರ್ತಿಕ್, ಮರಿಯಪ್ಪ, ಸುರೇಶ್ ನಾಡನಹಳ್ಳಿ, ನವೀನ್ ಮೌರ್ಯ, ಅಶ್ವಿನಿ ಶರತ್, ಪ್ರಫುಲ್ಲ ಮಲ್ಲಾಡಿ, ಡಾ. ಕಿರಣ್ ಸಂದೇಶ್, ಡಾ. ಅನಿಲ್ ಥಾಮಸ್, ಪುಷ್ಪ ಇತರರು ಭಾಗವಹಿಸಿದ್ದರು.