
ಬೆಂಗಳೂರು, ಫೆ. ೧೧- ಶಾಸಕರಾಗಿ ಮತ್ತು ಸಚಿವರಾಗಿ ಭೀಮಣ್ಣ ಖಂಡ್ರೆರವರು ರಾಜ್ಯಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ಶಿವಾಜಿನಗರ ಬಸ್ ನಿಲ್ದಾಣವನ್ನು ಭೀಮಣ್ಣ ಖಂಡ್ರೆರವರು ಗುದ್ದಲಿಪೂಜೆ ನೇರವೇರಿಸಿದ್ದರು ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿರವರು ತಿಳಿಸಿದರು.
ನಗರದ ಹೋಟೆಲ್ ಮೌರ್ಯ ಸಭಾಂಗಣದಲ್ಲಿ ಲೋಕನಾಯಕ ಶತಾಯುಷಿ ಡಾ.ಭೀಮಣ್ಣ ಖಂಡ್ರೆ ರವರ ಫೆಬ್ರವರಿ ೧೪ರಂದು ಅರಮನೆ ಮೈದಾನದ ಗಾಯಿತ್ರಿ ವಿಹಾರ ನಡೆಯಲಿರುವ ನುಡಿ ನಮನ ಕಾರ್‍ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು,
ಭೀಮಣ್ಣ ಖಂಡ್ರೆರವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಕಾರಣದಿಂದ ಬ್ರಿಟಿಷರು ಅವರ ಸಂಪತ್ತು ಆನ್ನು ಜಪ್ತಿ ಮಾಡಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಆರ್.ಎಸ್.ಎಸ್. ಮತ್ತು ವಿಶ್ವ ಹಿಂದೂ ಪರಿಷತ್ತು ನವರ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಲ್ಲ. ದೇಶ ದ್ರೋಹಿಗಳು ಇಂದು ದೇಶ ಭಕ್ತರು ಎಂದು ಹೊಗಳಿಸಿಕೊಳ್ಳುತ್ತಿದ್ದಾರೆ ಇದು ದುರಂತ. ಯಾವ ಸೋಷಿಯಲ್ ಮೀಡಿಯದಿಂದ ಅಧಿಕಾರಕ್ಕೆ ಬಂದ ಬಿಜೆಪಿ ಪಕ್ಷಕ್ಕೆ ಅದೇ ಸೋಷಿಯಲ್ ಮೀಡಿಯ ಇಂದು ಬಿಜೆಪಿ ಪಕ್ಷವನ್ನು ತೆಗುಳುತ್ತಿದೆ ಎಂದು ಹೇಳಿದರು.
ನೆಹರೂರವರ ಆಡಳಿತದಲ್ಲಿ ಬೆಂಗಳೂರಿನಲ್ಲಿ ಹಲವಾರು ಕಾರ್ಖಾನೆ ಸಂಸ್ಥೆಗಳು ಪ್ರಾರಂಭಿಸಿ, ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದರು.
ಸಾರ್ವಕರ್, ಗೊಡ್ಸ್ ರವರಿಗೆ ಭಾರತರತ್ನ ಕೊಡುವ ಯೋಚನೆ ಮಾಡುತ್ತಿದ್ದಾರೆ ಎಂಬುದು ದುರಂತ. ಇಂದಿನ ಯುವಕರಿಗೆ ಕಾಂಗ್ರೆಸ್ ಪಕ್ಷದ ಸಾಧನೆ, ಯೋಜನೆಗಳನ್ನು ತಿಳಿಸಬೇಕು ಎಂದು ಹೇಳಿದರು.
ಶತಾಯುಷಿ ಭೀಮಣ್ಣ ಖಂಡ್ರೆರವರಿಗೆ ಕರ್ನಾಟಕ ರತ್ನ ನೀಡಬೇಕೆಂದು ಮುಖ್ಯಮಂತ್ರಿಗಳ ಬಳಿ ಮನವಿ ಸಲ್ಲಿಸಲಾಗುವುದು ಎಂದರು.
ಫೆಬ್ರವರಿ ೧೪ರಂದು ಶತಾಯುಷಿ ಭೀಮಣ್ಣ ಖಂಡ್ರೆರವರ ನುಡಿ ನಮನ ಕಾರ್ಯಕ್ರಮ ಅರಮನೆ ಮೈದಾನದಲ್ಲಿ ನಡೆಯಲಿದ್ದು ಎಲ್ಲರೂ ಆಗಮಿಸಬೇಕಾಗಿ ಮನವಿ ಮಾಡಿದರು.
ಅರಣ್ಯ ಇಲಾಖೆ ಸಚಿವರಾದ ಈಶ್ವರ್ ಖಂಡ್ರೆ ಮತ್ತು ಎಂ.ಇ.ಐ. ಅಧ್ಯಕ್ಷರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ರವರು, ಕೆಪಿಸಿಸಿ ವಕ್ತಾರರಾದ ಲಕ್ಷ್ಮಣ್, ಮಾಜಿ ಮಹಾಪೌರರಾದ ಜೆ.ಹುಚ್ಚಪ್ಪ, ಮಾಜಿ ಉಪಮಹಾಪೌರರಾದ ಬಿ.ಎಸ್.ಪುಟ್ಟರಾಜು, ಬಿ. ಎಮ್ ಟಿ.ಸಿ ನಿಗಮದ ಅಧ್ಯಕ್ಷರಾದ ವಿ.ಎಸ್.ಆರಾಧ್ಯ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ನಗರ ಅಧ್ಯಕ್ಷರಾದ ಜಿ.ಕೃಷ್ಣಪ್ಪ, ಮಾಜಿ ಪಾಲಿಕೆ ಸದಸ್ಯ ಬಿ.ಟಿ.ಶ್ರೀನಿವಾಸಮೂರ್ತಿ, ಸಾಹಿತಿ ತಲಕಾಡು ಚಿಕ್ಕರಂಗೇಗೌಡರವರು ಶತಾಯುಷಿ ಭೀಮಣ್ಣ ಖಂಡ್ರೆರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.





























