
ಸಂಜೆವಾಣಿ ವಾರ್ತೆ
ಬಳ್ಳಾರಿ, ಡಿ.27: ನಮ್ಮ ಭಾರತ ದೇಶ ಯುವಶಕ್ತಿಯ ದೇಶವಾಗಿದೆ ಎಂದು ವಿಮ್ಸ್ ನ ನಿವೃತ್ತ ಪ್ರಾಂಶುಪಾಲ ಡಾ|| ವಿದ್ಯಾಧರ ಕಿನ್ನಾಳ್ ಅಭಿಪ್ರಾಯಪಟ್ಟರು.
ನಗರದ ಶ್ರೀಮತಿ ಸರಳಾದೇವಿ ಸತೀಶ್ಚದಂದ್ರ ಅಗರ್ವಾಲ್ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ರೂಸ ಅನುದಾನದ ಅಡಿಯಲ್ಲಿ ಆಯೋಜಿಸಿದ್ದ ಪೋಷಕರು-ಪ್ರಾಧ್ಯಾಪಕರ-ವಿಧ್ಯಾರ್ಥಿಗಳ ಪರಿಷತ್ತಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯುವಕರು ದೇಶದ ಸೇವೆಗೆ ಮುಂದೆಬರಬೇಕು ಎಂದು ಕರೆನೀಡಿದರು. ನಾವು ಪ್ರಥಮವಾಗಿ ನಮ್ಮ ದೇಶಕ್ಕೆ ಗೌರವವನ್ನು ನೀಡಬೇಕು. ಪೋಷಕರ ಸ್ಥಾನ ನಮ್ಮ ಜೀವನದಲ್ಲಿ ಎರಡನೇಯದಾಗಿದೆ. ಗುರುಗಳು ನಮ್ಮ ಜೀವನದಲ್ಲಿ ಮೂರನೇ ಸ್ಥಾನದಲ್ಲಿ ಇರಬೇಕು. ನಾವು ಗುರುಗಳಿಗೆ ಪೋಷಕರಿಗ್ ಭಕ್ತಿ ಭಾವದಲ್ಲಿರಬೇಕು. ವಿಧ್ಯಾರ್ಥಿ ಜೀವನವು ಸಮುದ್ರದ ದಡದಲ್ಲಿ ನಡೆದ ಹಾಗೆ ಇರುತ್ತದೆ. ಯಾರು ಹೆಚ್ಚು-ಹೆಚ್ಚು ನಡೆಯುವರು ಅವರು ಜೀವನದಲ್ಲಿ ಬೇರೆ ಬೇರೆ ತರಹದ ಮುತ್ತು ರತ್ನಗಳನ್ನು ಸಂಗ್ರಹಿಸುತ್ತಾ ಹೋಗುತ್ತಾರೆ. ಎಲ್ಲರ ಬದುಕಿನಲ್ಲಿ ಕಲಿಕೆ ನಿರಂತರ ಇರಬೇಕು. ವಿಧ್ಯಾರ್ಥಿಗಳಿಗೆ ವಿನಯವೇ ಭೂಷಣ ಎಂದು ತಿಳಿಸಿದರು.
ಪರಿಷತ್ತಿನ ಸಂಚಾಲಕರಾದ ಡಾ.ರಮಾಬಾಯಿ ಅವರು ಅಧ್ಯಾಪಕರು-ಪೋಷಕರು ವಿಧ್ಯಾರ್ಥಿಯ ಜೀವನದ ತಳಹದಿ ಎಂದು ಪ್ರಾಸ್ತಾವಿಕ ನುಡಿಯಲ್ಲಿ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ. ಪ್ರಹ್ಲಾದ್ ಚೌದ್ರಿ ಯವರು ವಿಧ್ಯಾರ್ಥಿಗಳಿಗೆ ಇರುವ ಸರ್ಕಾರಿ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ರೂಸ ಸಂಯೋಜಕರು ಡಾ. ಕುಂಚಂ ನರಸಿಂಹಲು, ಡಾ.ಇಸ್ಮಾಯಲ್ ಮಖಾಂದರ್ ಸಮಾಜ ಶಾಸ್ತ್ರ ವಿಭಾಗ ಮುಖ್ಯಸ್ಥರು, ಡಾ.ಎಸ್.ಮಂಜುನಾಥ-ಭೌತಶಾಸ್ತ್ರ ಮುಖ್ಯಸ್ಥರು, ಡಾ.ಕನ್ಯಾಕುಮಾರಿ ವಾಣಿಜ್ಯಶಾಸ್ತ್ರ ವಿಭಾಗ ಮುಖ್ಯಸ್ಥರು, ಹಾಗೂ ಕಾರ್ಯಕ್ರಮದ ಸಂಚಾಲಕರಾದ ಡಾ.ರಮಾಬಾಯಿ ಸಹ ಪ್ರಾಧ್ಯಾಪಕರಾದ ಡಾ.ಗುರುಬಸಪ್ಪ, ಪ್ರೊ.ಗಂಟೆಪ್ಪ ಶೆಟ್ರು, ಡಾ. ದೊಡ್ಡಬಸವರಾಜ್, ಡಾ.ಶೋಭಾರಾಣಿ, ಡಾ.ರೇಖಾಅಣ್ಣಿಗೇರಿ, ಡಾ.ಶಿಲ್ಪಾಕುಲ್ಕರ್ಣಿ, ಡಾ.ಗೀತಾಬಾಬು ಸಿಂಗ್, ಡಾ.ಗಾಯತ್ರಿ, ಪ್ರೊ.ನಾಜಿಯ ಖಾಜಿ, ಪ್ರೊ ಸುಮಲತ, ಡಾ.ಸಲಿಹಾ, ಬೋಧಕೇತರ ಸಿಬ್ಬಂದಿ ಮತ್ತು ಪೋಷಕರು ಹಾಗೂ ವಿಧ್ಯಾರ್ಥಿಗಳು ಈ ಸಭೆಯಲ್ಲಿ ಉಪಸ್ಥಿತರಿದ್ದರು.























