ಮಂಗಳೂರು: ಮಂಗಳೂರಿನ ರಾಷ್ಟ್ರೀಯ ಹೆದ್ದಾರಿ ೬೬ ರ ಕುಂಟಿಕಾನ್ ಜಂಕ್ಷನ್ ನಲ್ಲಿರುವ ಮಾರುತಿ ಸುಜುಕಿಯ ಅಧಿಕೃತ ಡೀಲರ್ ಮತ್ತು ಸರ್ವಿಸ್ ಸೆಂಟರ್ ಭಾರತ್ ಆಟೋ ಕಾರ್‌ಸ್ ಪ್ರೈವೇಟ್ ಲಿಮಿಟೆಡ್ ಶೋರೂಂನಲ್ಲಿ ಮಾರುತಿ ಸುಜುಕಿ ಕಂಪೆನಿಯ ನೂತನ ಕಾರು ವಿಕ್ಟೋರಿಸ್‌ನ್ನು ಅಕ್ಟೋಬರ್ ೨೫ ರಂದು ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಎಂ.ಸಿ.ಸಿ. ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಸಮಾರಂಭದಲ್ಲಿ ಭಾರತ್ ಆಟೋ ಕಾರ್‌ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸುಧೀರ್ ಎಂ. ಪೈ, ಜನರಲ್ ಮ್ಯಾನೇಜರ್ ವಿಶ್ವ ಕುಮಾರ್, ಸೇಲ್ಸ್ ಮ್ಯಾನೇಜರ್ ಶಿವ ಕೀರ್ತಿ ಹಾಗೂ ಶೋರೂಂ ಮ್ಯಾನೇಜರ್ ಯಶವಂತ್ ಉಪಸ್ಥಿತರಿದ್ದರು. ವೇದಿಕೆಯಲ್ಲಿದ್ದ ಎಲ್ಲಾ ಗಣ್ಯರು ನೂತನ ಕಾರು ವಿಕ್ಟೋರಿಸ್‌ನ್ನು ಅನಾವರಣ ಗೊಳಿಸಿ ಮಾರುಕಟ್ಟೆಗೆ ವಿದ್ಯುಕ್ತವಾಗಿ ಬಿಡುಗಡೆ ಮಾಡಿದರು.
ನೂತನ ಕಾರು ವಿಕ್ಟೋರಿಸ್ ಥಿಯೇಟರ್ ಆನ್ ವೀಲ್ಸ್, ಇನ್ಸ್ ನಿಟ್ ಪ್ರೀಮಿಯಮ್ ೮ ಸ್ಪೀಕರ್ ಗಳು, ಡಾಟ್ ಬಿ ಆಟ್ ಮೋಸ್ ಸರೌಂಡ್ ಸೌಂಡ್, ೬೪ ಕಲರ್ ಕಸ್ಟಮ್ ಅಂಬಿಯಂಟ್ ಲೈಟಿಂಗ್, ಎಲೆಕ್ಸಾ ಆಟೋ ವಾಯ್ಸ್ ಎಐ, ನೆಕ್ಸ್ಟ್ ಜನರೇಷನ್ ಸುಜುಕಿ ಕನೆಕ್ಟ್, ಗೆಸ್ಚರ್ ಕಂಟ್ರೋಲ್ ಟೈಲ್ ಗೇಟ್, ವೆಂಟಿಲೇಟೆಡ್ ಸೀಟ್ಸ್, ಎಡಾಸ್ ಲೆವೆಲ್ ಟ್ರೂ ಫೀಚರ್, ಸ್ಟ್ರಾಂಗ್ ಹೈಬ್ರಿಡ್ ಈಸಿವಿಟ್ , ಆಲ್ ಟೆರೈನ್ ಆಲ್ ಗ್ರಿಪ್ ಸಿಲೆಕ್ಟ್ ಅಂಡರ್ ಬಾಡಿ ಸಿಎನ್ ಬಿ, ೨೮.೬೫ ಕಿ. ಮೀ ಪೆಟ್ರೋಲ್, ಈ ಸಿವಿಟಿ ಯಲ್ಲಿ ಮೈಲೇಜ್ ಇತ್ಯಾದಿ ಅನೇಕ ವಿಶಿಷ್ಟತೆಗಳನ್ನು ಹೊಂದಿದೆ.




























