
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.7: ನಮ್ಮ ಹೆಮ್ಮೆಯ ಭಾರತದ ಕ್ರಿಕೆಟ್ ತಂಡ ಮತ್ತೊಮ್ಮೆ ಟಿ 20 ವಿಶ್ವಕಪ್ ಗೆಲ್ಲಲಿ ಎಂದು ನಗರದ ವಾಸವಿ ಶಾಲೆಯ ಮಕ್ಕಳು ಪ್ರಾರ್ಥನೆ ಮಾಡಿದ್ದಾರೆ.
ಕ್ರಿಕೆಟ್ ಬ್ಯಾಟ್, ಬಾಲ್, ವಿಕೆಟ್ ಜೊತೆಗೆ ವಾಸವಿ ಮಾತೆಯ ಪೂಜೆ ಸಲ್ಲಿಸಿ, ಭಾರತದ ಭಾವುಟ ಹಿಡಿದು ಆಟಗಾರರು ಪೋಟೋ ಹಿಡಿದು ಶುಭಾಶಯ ಕೋರಿದರು. ಭಾರತೀಯ ಆಟಗಾರನ್ನು ಹುರಿದುಂಬಿಸುವ ನಿಟ್ಟಿನಲ್ಲಿ ಜಯ ಘೋಷಣೆ ಹಾಕಿದರು.
ಯುವತಿಯೊಬ್ವಳು ಭಾರತ ಮಾತೆಯ ವೇಷ ತೊಟ್ಟು ಭಾರತೀಯ ಕ್ರಿಕೆಟ್ ತಂಡಕ್ಕೆ ಶುಭಾಷಯ ಹೇಳಿದ್ದು ವಿಶೇಷವಾಗಿತ್ತು. ನೂರಾರು ವಿದ್ಯಾರ್ಥಿಗಳು ಲೇಜಿಂ ನೃತ್ಯದ ಮೂಲಕ ಗಮನ ಸೆಳೆದರು.




















