
ಬೆಂಗಳೂರು.ಏ3: ಭಾರತವು ತೀವ್ರ ನಗರೀಕರಣ ಮತ್ತು ಸೀಮಿತ ಕುಡಿಯುವ ನೀರಿನ ಸಂಪನ್ಮೂಲಗಳ ದ್ವಿಗುಣ ಒತ್ತಡದಿಂದ ಅಪಾರ ನೀರಿನ ಬಿಕ್ಕಟ್ಟು ಎದುರಿಸುತ್ತಿದೆ. ನೀತಿ ಆಯೋಗದ ಪ್ರಕಾರ ಸುಮಾರು 600 ಮಿಲಿಯನ್ ಭಾರತೀಯರು ಅತ್ಯಂತ ತೀವ್ರವಾದ ನೀರಿನ ಒತ್ತಡ ಎದುರಿಸುತ್ತಿದ್ದು 21 ಪ್ರಮುಖ ನಗರಗಳಲ್ಲಿ ಅಂತರ್ಜಲದ ಲಭ್ಯವಿಲ್ಲದಂತಾಗಿರುವುದು ವ್ಯವಸ್ಥಿತ ಸುಧಾರಣೆಯ ತುರ್ತನ್ನು ಎತ್ತಿ ತೋರಿಸಿದೆ. 2030ರ ವೇಳೆಗೆ ನೀರಿನ ಬೇಡಿಕೆಯು ದುಪ್ಪಟ್ಟಾಗಲಿದ್ದು ಪೂರೈಕೆ ಕಡೆಯಲ್ಲಿನ ವಿಸ್ತರಣೆಯಿಂದ ಬೇಡಿಕೆಯ-ಪ್ರೇರಿತ, ದಕ್ಷತೆಯ ನೀರಿನ ನಿರ್ವಹಣೆಯು ಹೆಚ್ಚು ಮುಖ್ಯವಾಗಿದೆ.
ಬೆಂಗಳೂರಿನಂತಹ ನಗರ ಕೇಂದ್ರಗಳು ಈ ಬಿಕ್ಕಟ್ಟಿ ತೀವ್ರತೆಯನ್ನು ನಿರೂಪಿಸುತ್ತವೆ. ಒಂದೊಮ್ಮೆ 1,000ಕ್ಕೂ ಹೆಚ್ಚು ಪರಸ್ಪರ ಸಂಪರ್ಕ ಹೊಂದಿರುವ ಕೆರೆಗಳನ್ನು ಹೊಂದಿದ್ದ ನಗರವು ಈಗ ಕೇವಲ 100 ಜಲಮೂಲಗಳಿಗೆ ಇಳಿದಿದೆ, ಅವುಗಳಲ್ಲಿ ಬಹಳಷ್ಟು ಮಾಲಿನ್ಯ ಹೊಂದಿವೆ ಅಥವಾ ಒತ್ತುವರಿಗೆ ಒಳಗಾಗಿವೆ.
ಈ ಪ್ರದರ್ಶನವು ನೀರಿನ ನಿರ್ವಹಣೆಯಲ್ಲಿ ಪ್ರಮುಖ ಸವಾಲುಗಳನ್ನು ಎದುರಿಸುವ ಮತ್ತು ಉದಯೋನ್ಮುಖ ಅವಕಾಶಗಳನ್ನು ಪೂರೈಸುವ ಸಮಗ್ರ ವಿಚಾರ ಸಂಕಿರಣಗಳನ್ನು ಹೊಂದಿದೆ. ಇದರಲ್ಲಿ ಐಪಿಎ ಅವಾಡ್ರ್ಸ್ ಆಫ್ ಎಕ್ಸೆಲೆನ್ಸ್, ಆರ್ಕಿಟೆಕ್ಚರ್ ವಿದ್ಯಾರ್ಥಿಗಳಿಗೆ ಜಲ ಆಧರಿತ ವಿನ್ಯಾಸ ಕುರಿತು ಅರಿವು ಮೂಡಿಸುವ ಅರೌಂಡ್ ದಿ ಡ್ರಾಪ್ ಕಾರ್ಯಾಗಾರ ಮತ್ತು ಐಪಿಎ ಬಾಥ್ ರೂಂ ಚಾಲೆಂಜ್ ಒಳಗೊಂಡಿದೆ. ಬೆಂಗಳೂರಿನ ಐಟಿಸಿ ಗಾರ್ಡೆನಿಯಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಇಂಡಿಯನ್ ಪ್ಲಂಬಿಂಗ್ ಅಸೋಸಿಯೇಷನ್ ರಾಷ್ಟ್ರೀಯ ಅಧ್ಯಕ್ಷ ಗುರ್ಮಿತ್ ಸಿಂಗ್ ಅರೋರ, ನೀರಿನ ಸುಸ್ಥಿರತೆಯು ವಿವೇಚನೆಯ ನೀತಿಯಿಂದ ಬದಲಾಗಿದ್ದು ಈಗ ಭಾರತದ ಪಾರಿಸರಿಕ ಮತ್ತು ಅಭಿವೃದ್ಧಿಯ ಭವಿಷ್ಯವನ್ನು ರಕ್ಷಿಸಲು ರಾಜಿಯಾಗದ ಅನಿವಾರ್ಯ ಅಂಶವಾಗಿದೆ. ಪ್ಲಂಬೆಕ್ಸ್ ಇಂಡಿಯಾದಂತಹ ವೇದಿಕೆಗಳು ಪ್ರಮುಖ ಸಮ್ಮಿಲನದ ತಾಣಗಳಾಗಿ ಕೆಲಸ ಮಾಡುತ್ತಿದ್ದು ಬಹು ಪಾಲುದಾರರನ್ನು ಒಗ್ಗೂಡಿಸುತ್ತವೆ, ಎಂದು ಹೇಳಿದರು. ಕಾರ್ಯಕ್ರಮದ ಕರ್ಟನ್ ರೈಸರ್ ಆಯೋಜಿಸಲಾಗಿದ್ದುನೀರಿನ ಮೌಲ್ಯವನ್ನು ಉಳಿಸುವುದು’ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ತಜ್ಞರ ಚರ್ಚೆ ಒಳಗೊಂಡಿತ್ತು. ಡಿಸೈನ್ ಟ್ರೀ ಸರ್ವೀಸ್ ಕನ್ಸಲ್ಟೆಂಟ್ಸ್ ಪ್ರೈ.ಲಿ.ಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ಬಿ.ಒ. ಪ್ರಸನ್ನ ಕುಮಾರ್ ಅವರೊಂದಿಗೆ ಏಸ್ ಗ್ರೂಪ್ ಆರ್ಕಿಟೆಕ್ಟ್ಸ್ ಸಂಸ್ಥಾಪಕ ದಿನೇಶ್ ವರ್ಮಾ, ಬಿ.ಡಬ್ಲ್ಯೂ.ಎಸ್.ಎಸ್.ಬಿ.ಯ ಚೀಫ್ ಎಂಜಿನಿಯರ್ ಸನತ್ ಕುಮಾರ್ ವಿ. ಬ್ರಿಗೇಡ್ ಗ್ರೂಪ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಅಮರ್ ಮೈಸೂರು, ಬಿ.ಸಿ.ಐ.ಎಲ್. ಸಂಸ್ಥಾಪಕ ಮತ್ತು ಅಧ್ಯಕ್ಷ ಡಾ. ಹರಿಹರನ್ ಚಂದ್ರಶೇಖರ್, ಫಾರ್ಮ್ ಲ್ಯಾಂಡ್ ರೈನ್ ವಾಟರ್ ಹಾರ್ವೆಸ್ಟಿಂಗ್ ಸಿಸ್ಟಂ ನಿರ್ದೇಶಕ ವಿಜಯ್ ರಾಜ್ ಮತ್ತು ಮ್ಯಾಪಲ್ ಎಂಜಿನಿಯರಿಂಗ್-ಡಿಸೈನ್ ಸರ್ವೀಸಸ್ (ಇಂಡಿಯಾ) ಪ್ರೈ.ಲಿ.ಯ ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್.ಎ. ನಾರಾಯಣ್ ಭಾಗವಹಿಸಿದ್ದರು.























