ಭಾರತಕ್ಕೆ ಶೇ. ೫೦ ಸುಂಕ: ಝೆಲೆನ್ಸ್ಕಿ ಬೆಂಬಲ

ಕೈವ್,ಸೆ.೯-ಭಾರತದ ಮೇಲೆ ಅಮೆರಿಕಾ ವಿಧಿಸಿರುವ ಶೇಕಡಾ ೫೦ರಷ್ಟು ಹೆಚ್ಚುವರಿ ಸುಂಕದ ಕ್ರಮ ಸರಿಯಾಗಿಯೇ ಇದೆ ಎಂದು ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಝೆಲೆನ್ಸ್ಕಿ ಬೆಂಬಲಿಸಿದ್ದಾರೆ.


ರಷ್ಯಾದಿಂದ ತೈಲ ಖರೀದಿಸುವುದಕ್ಕಾಗಿ ಭಾರತದ ಮೇಲೆ ಶೇಕಡಾ ೫೦ ರಷ್ಟು ಸುಂಕ ವಿಧಿಸುವ ಅಮೇರಿಕಾ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರವನ್ನು ಬೆಂಬಲಿಸಿದ್ದು ಅಮೇರಿಕಾದ ಕ್ರಮ ಸರಿಯಾಗಿಯೇ ಎಂದು ಹೇಳಿದ್ದಾರೆ.


ವೊಲೋಡಿಮಿರ್ ಝೆಲೆನ್ಸಿಪ್ರತಿಕ್ರಿಯಿಸಿ ರಷ್ಯಾಗೆ ಸಹಾಯ ಮಾಡುವ ದೇಶಗಳ ಮೇಲೆ ಅಮೇರಿಕಾ ಹೆಚ್ಚುವರಿ ಸುಂಕ ವಿಧಿಸುವುದು ಒಳ್ಳೆಯ ಬೆಳವಣಿಗೆ ಎಂದಿದ್ದಾರೆ.
ರಷ್ಯಾದ ತೈಲ ಅಥವಾ ಅನಿಲವನ್ನು ಖರೀದಿಸುವುದು ಅಥವಾ ವ್ಯಾಪಾರ ಒಪ್ಪಂದಗಳಿಗೆ ಪ್ರವೇಶಿಸುವುದು ಯುದ್ಧವನ್ನು ಮಾತ್ರ ದೀರ್ಘಗೊಳಿಸುತ್ತದೆ ಅಂತಹ ದೇಶಗಳ ಮೇಲೆ ದಂಡ ವಿಧಿಸುವುದು ಸೂಕ್ತ ಎಂದು ತಿಳಿಸಿದ್ದಾರೆ.


ಪ್ರಧಾನಿ ನರೇಂದ್ರ ಮೋದಿ ಶಾಂಘೈ ಸಹಕಾರ ಸಂಸ್ಥೆ ಶೃಂಗಸಭೆಗಾಗಿ ಚೀನಾಕ್ಕೆ ಭೇಟಿ ನೀಡಿದ ಕೆಲವೇ ದಿನಗಳಲ್ಲಿ ಉಕ್ರೇನ್ ಅಧ್ಯಕ್ಷ ವಲೋಡಿಮಿರ್ ಝೆಲೆನ್ಸ್ಕಿಯ ಈ ಹೇಳಿಕೆ ಬಂದಿದೆ.ಶೃಂಗಸಭೆಯ ಸಮಯದಲ್ಲಿ ಪ್ರಧಾನಿ ಮೋದಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಲಘು ಕ್ಷಣಗಳನ್ನು ಹಂಚಿಕೊಂಡಿರುವುದು ಕಂಡುಬಂದಿದೆ.


ದ್ವಿಪಕ್ಷೀಯ ಮಾತುಕತೆಗಾಗಿ ಸ್ಥಳಕ್ಕೆ ಒಟ್ಟಿಗೆ ಪ್ರಯಾಣಿಸುವಾಗ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ೪೫ ನಿಮಿಷಗಳ ಚರ್ಚೆ ನಡೆಸಿದರು.
ಇಂಧನ ಮತ್ತು ಶುದ್ಧ ಗಾಳಿಯ ಸಂಶೋಧನಾ ಕೇಂದ್ರದ ಪ್ರಕಾರ, ಭಾರತ ಮತ್ತು ಚೀನಾ ರಷ್ಯಾದ ತೈಲ ಮತ್ತು ಅನಿಲದ ಅತಿದೊಡ್ಡ ಖರೀದಿದಾರರಲ್ಲಿ ಸೇರಿವೆ,
ಇದು ಯುದ್ಧ ಪ್ರಾರಂಭವಾದಾಗಿನಿಂದ ಮಾಸ್ಕೋಗೆ ಅಂದಾಜು ೯೮೫ ಬಿಲಿಯನ್ ಡಾಲರ್ ಆದಾಯ ನಿರೀಕ್ಷೆ ಇದೆ.