
ಪೆÇೀರ್ಟ್ ಆಫ್ ಸ್ಪೈನ್, ಜು.5:- ‘ಭಯೋತ್ಪಾದನೆ ಮಾನವೀಯತೆಯ ಶತ್ರು, ಜಗತ್ತಿನ ಯಾವುದೇ ದೇಶ ಆಶ್ರಯ ಅಥವಾ ಸ್ಥಳ ನೀಡಬಾರದು, ಆಗ ಮಾತ್ರ ಅದನ್ನು ಹೋಗಲಾಡಿಸಲು ಸಾಧ್ಯ, ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿ ಹೋರಾಟ ಮಾಡಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಭಾರತದ ಜೊತೆ ನಿಂತಿದ್ದಕ್ಕಾಗಿ ಕೆರಿಬಿಯನ್ ರಾಷ್ಟ್ರದ ಜನರು ಮತ್ತು ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದ ಅವರು, ನಮ್ಮ ಮುಂದೆ ಹೊಸ ಸವಾಲುಗಳಿವೆ ಹೀಗಾಗಿಯೇ ಶಾಂತಿ ಮತ್ತು ಪ್ರಗತಿ ಕಾಣಲು ಹಲವು ದೇಶಗಳು ಹೆಣಗಾಡುತ್ತಿವೆ ಎಂದು ತಿಳಿಸಿದ್ಧಾರೆ
ಟ್ರಿನಿಡಾಡ್ ಮತ್ತು ಟೊಬಾಗೋ ಸಂಸತ್ತಿನ ಜಂಟಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಈ ಕೆಂಪು ಸದನವೇ ಭಯೋತ್ಪಾದನೆಯ ಗಾಯಗಳು ಮತ್ತು ಮುಗ್ಧ ರಕ್ತದ ನಷ್ಟಕ್ಕೆ ಸಾಕ್ಷಿಯಾಗಿದೆ, “ಭಯೋತ್ಪಾದನೆಗೆ ಯಾವುದೇ ಆಶ್ರಯ ಅಥವಾ ಸ್ಥಳ ನೀಡುವುದನ್ನು ಎಲ್ಲರೂ ಒಗ್ಗೂಡಿ ಹೋರಾಟ ಮಾಡಬೇಕು ಎಂದು ಮಾಹಿತಿ ಹಂಚಿಕೊಂಡಿದ್ದಾರೆ
“ಭಯೋತ್ಪಾದನೆ ಮಾನವೀಯತೆಯ ಶತ್ರು. ಈ ಕೆಂಪು ಸದನವೇ ಭಯೋತ್ಪಾದನೆಯ ಗಾಯಗಳಿಗೆ ಮತ್ತು ಮುಗ್ಧ ರಕ್ತದ ನಷ್ಟಕ್ಕೆ ಸಾಕ್ಷಿಯಾಗಿದೆ. ಭಯೋತ್ಪಾದನೆಗೆ ಯಾವುದೇ ಆಶ್ರಯ ಅಥವಾ ಸ್ಥಳಾವಕಾಶ ನಿರಾಕರಿಸಲು ನಾವು ಒಗ್ಗಟ್ಟಿನಿಂದ ನಿಲ್ಲಬೇಕು” ಎಂದು ಅವರು ಹೇಳಿದರು.
ಜಾಗತಿಕ ದಕ್ಷಿಣದ ರಾಷ್ಟ್ರಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿರುವ ಭಯೋತ್ಪಾದನೆ ವಿರುದ್ದ ಹೋರಾಟ ಮಾಡಬೇಕಾಗಿದೆ. ಹೊಸ ಮತ್ತು ನ್ಯಾಯಯುತ ಕ್ರಮ ಕೈಗೊಳ್ಳುವ ಅಗತ್ಯ ಮತ್ತು ಅನಿವಾರ್ಯತೆ ಇದೆ ಎಂದು ತಿಳಿಸಿದ್ಧಾರೆ
‘ಭಾರತದ ಜನರಿಂದ ಟ್ರಿನಿಡಾಡ್ ಮತ್ತು ಟೊಬಾಗೋ ಜನರಿಗೆ’ ಎಂಬ ಸ್ಪೀಕರ್ ಕುರ್ಚಿಯ ಸುವರ್ಣ ಪದಗಳನ್ನು ನೋಡಿದಾಗ, ಕುರ್ಚಿ ಕೇವಲ ಪೀಠೋಪಕರಣಗಳ ತುಣುಕಲ್ಲ, ಆದರೆ ಎರಡು ರಾಷ್ಟ್ರಗಳ ನಡುವಿನ ಸ್ನೇಹದ ಪ್ರಬಲ ಸಂಕೇತವಾಗಿದೆ ಎಂದು ತಿಳಿಸಿದ್ದಾರೆ
ಟ್ರಿನಿಡಾಡ್ ಮತ್ತು ಟೊಬಾಗೊ ಸಂಸತ್ತಿನಲ್ಲಿ ಸ್ಪೀಕರ್ ಕುರ್ಚಿಯನ್ನು ಭಾರತ 1968ರಲ್ಲಿ ಉಡುಗೊರೆಯಾಗಿ ನೀಡಿತು. ಅಲಂಕೃತ ಕುರ್ಚಿಯ ಮೇಲೆ “ಭಾರತದ ಜನರಿಂದ ಟ್ರಿನಿಡಾಡ್ ಮತ್ತು ಟೊಬಾಗೊ ಜನರಿಗೆ” ಎಂಬ ಅಡಿ ಬರಹ ಬರೆದಿದ್ದು ಎರಡು ರಾಷ್ಟ್ರಗಳ ನಡುವಿನ ಬಾಂಧವ್ಯದ ಸಂಕೇತವಾಗಿದೆ ಎಂದಿದ್ಧಾರೆ
ದೇಶದ ಅತ್ಯುನ್ನತ ರಾಷ್ಟ್ರೀಯ ಗೌರವವಾದ ‘ದಿ ಆರ್ಡರ್ ಆಫ್ ದಿ ರಿಪಬ್ಲಿಕ್ ಆಫ್ ಟ್ರಿನಿಡಾಡ್ ಮತ್ತು ಟೊಬಾಗೊ’ ಪ್ರಶಸ್ತಿಯನ್ನು ಪಡೆದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ಈ ಪ್ರಶಸ್ತಿಯನ್ನು ಭಾರತ ಮತ್ತು ಟ್ರಿನಿಡಾಡ್ ಮತ್ತು ಟೊಬಾಗೊ ನಡುವಿನ “ಶಾಶ್ವತ ಮತ್ತು ಆಳವಾದ ಸ್ನೇಹ”ದ ಪ್ರತಿಬಿಂಬ ಎಂದಿದ್ಧಾರೆ. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು 140 ಕೋಟಿ ಭಾರತೀಯರ ಪರವಾಗಿ ಈ ಗೌರವವನ್ನು ಸ್ವೀಕರಿಸಿದ್ದು ಉಭಯ ದೇಶಗಳ ನಡುವೆ ಬಾಂಧವ್ಯ ಬಲವರ್ಧನೆಗೆ ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.