ಭದ್ರಕಾಳಿ ಅಮ್ಮನವರ ದೇವಸ್ಥಾನದಲ್ಲಿ 45 ದಿನಗಳ ಪೂಜೆ

ಕೇರಳ,ಜು2: ಇಡಕ್ಕಿ. ಗ್ರಾಮ ಪಂಚಾಯಿತಿಯ. ವ್ಯಾಪ್ತಿಯ ಕೊಟ್ಟೆಯೂರು. ಶಿವ ವೀರಭದ್ರೇಶ್ವರ ಭದ್ರಕಾಳಿ ಅಮ್ಮನವರ ದೇವಸ್ಥಾನ. 48 ದಿನಗಳ ಕಾಲ. ತೆಗೆದು ಪೂಜೆ ಮಾಡಲಾಗುತ್ತದೆ. ಕಾಡಿನ ನಿಸರ್ಗ ಪ್ರಕೃತಿಯ ಹೊಳೆ ಮಧ್ಯದಲ್ಲಿ ಇರುವ ಈ ದೇವಸ್ಥಾನವು. ಇತ್ತೀಚಿಗೆ ಪ್ರಸಿದ್ಧವಾಗುತ್ತಿದೆ.

ಇದೇ ಜುಲೈ 4ರಂದು ಸಂಜೆ 6 ಗಂಟೆಗೆ. ಮೃತ್ಯುಂಜಯ ಹೋಮ ಮಹಾಮಂಗಳಾರತಿಯೊಂದಿಗೆ ದೇವಸ್ಥಾನವು. ಮುಚ್ಚಲ್ಪಡುತ್ತದೆ ಮುಂದಿನ ವರ್ಷ ಮೇ. ದೇವಸ್ಥಾನವು ಪ್ರತಿಷ್ಠಾಪಿಸಲ್ಪಡುತ್ತದೆ. ಈ ದೇವಸ್ಥಾನದ ವಿಶೇಷವೆಂದರೆ ಯಾವುದೇ ರೀತಿಯ ಪ್ರಾಂಗಣವಾಗಲಿ. ಗರ್ಭಗುಡಿ ಗೋಪುರಗಳಾಗಲಿ ಇರುವುದಿಲ್ಲ. ಭದ್ರಕಾಳಿ ಸಮೇತ ವೀರಭದ್ರೇಶ್ವರ ಶಿವ ಪಾರ್ವತಿಯರನ್ನು. ಅಷ್ಟಮಂಗಲ ಪ್ರಶ್ನೆಯಲ್ಲಿ ರೂಪದಲ್ಲಿ. ಕಾಡಿನ ಮಧ್ಯದ ಪ್ರಾಂಗಣಕ್ಕೆ ತರುತ್ತಾರೆ. ದೇವರನ್ನು ಅಲ್ಲಿ ಪ್ರತಿಷ್ಠಾಪಿಸಿದ ಕೂಡಲೇ. ಪ್ರಕೃತಿಯ ಸೊಬಗು ಮಳೆ ರೂಪದಲ್ಲಿ ಬಂದು ದೇವಸ್ಥಾನದ ಸುತ್ತ ನೀರು ನಿಲ್ಲುತ್ತದೆ. ಆನೆಯ ಮೇಲೆ ಮೂರು ಪ್ರದಕ್ಷಣೆ ಹಾಕಿಸಿ ಭಗವಂತನನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಅಂದಿನಿಂದ 48 ದಿನಗಳ ಕಾಲ ಹೋಮ ಹವನ ಪೂಜೆ. ಅಭಿಷೇಕ ಹಾಗೂ ಭಕ್ತಾದಿಗಳಿಗೆ ದರ್ಶನವಿರುತ್ತದೆ. ಮೈಸೂರಿನಿಂದ ಹೋಗುವವರಿಗೆ ಎರಡು ದಾರಿ ಇದೆ. ಒಂದು ಹೆಗ್ಗಡದೇವನಕೋಟೆ ಬಾವಲಿ ಮಾನಂದವಾಡಿ ಇಡುಕ್ಕಿ. ಕೋಟೆಯುರು ಸೇರಬಹುದು.

ಮತ್ತೊಂದು ದಾರಿ ಗೋಣಿಕೊಪ್ಪ ವಿರಾಜಪೇಟೆ ಮಾಕೂಟ ಇಡುಕ್ಕಿ. ಕೋಟೆಯೂರು ಸೇರಬಹುದು. ಮೈಸೂರಿನಿಂದ 163 ಕಿಲೋಮೀಟರ್ ದಾರಿ ಕ್ರಮಿಸಬೇಕು. ಕೇರಳ ದೇವಸ್ಥಾನದ ಪ್ರಕಾರ 38 ದಿನಗಳ ಕಾಲ ಹೆಂಗಸರಿಗೂ ದರ್ಶನವಿರುತ್ತದೆ. ಇನ್ನು ಹತ್ತು ದಿನಗಳ ಕಾಲ ಹೆಂಗಸರಿಗೆ ಪ್ರವೇಶ ಇರುವುದಿಲ್ಲ. ದೇವರ ದರ್ಶನ ಪಡೆಯಲು ಪಂಚೆ ಧರಿಸಿ ಹೋಗಬೇಕು. ಇನ್ನು ನಾಲ್ಕು ದಿನಗಳ ಕಾಲ ಮಾತ್ರ ಬಾಗಿಲು ತೆರೆದಿರುತ್ತದೆ. ಈ ಬಾರಿ ಕರ್ನಾಟಕದಿಂದ ಅಧಿಕ ಭಕ್ತರು ಭೇಟಿ ನೀಡಿದ್ದಾರೆ.