
ಮಂಗಳೂರು-೨೦೨೬-೨೭ನೇ ಸಾಲಿನ ಕೃಷಿ ಪ್ರಶಸ್ತಿ ಯೋಜನೆಯಡಿ ಭತ್ತದ ಬೆಳೆ ಸ್ಪರ್ಧೆ ಹಾಗೂ ಕೃಷಿ ಪಂಡಿತ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ರೈತರು ಕೆ-ಕಿಸಾನ್ ಪೊ?ರ್ಟಲ್ ನ ಖSಏ ಟogiಟಿ ಅಥವಾ ಛಿiಣizeಟಿ ಟogiಟಿ ಮೂಲಕ ರೈತ ಸಂಪರ್ಕ ಕೇಂದ್ರ/ ಸ್ವತಃ ತಾವು/ ನಾಗರಿಕ ಸೇವಾ ಕೇಂದ್ರ ಮೂಲಕ ಅರ್ಜಿ ಸಲ್ಲಿಸಬಹುದು.
ಕೃಷಿ ಪ್ರಶಸ್ತಿ ಬೆಳೆ ಸ್ಪರ್ಧೆ ಹಾಗೂ ಕೃಷಿ ಪಂಡಿತ್ ಪ್ರಶಸ್ತಿಗೆ ಪುರುಷರು ಹಾಗೂ ಮಹಿಳೆಯರು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬಹುದಾಗಿದ್ದು, ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.
ಕೃಷಿ ಪ್ರಶಸ್ತಿ ಬೆಳೆ ಸ್ಪರ್ಧೆ:
ಕನಿಷ್ಠ ೧ ಎಕರೆಯಲ್ಲಿ ಭತ್ತ ಬೆಳೆದಿರಬೇಕು. ಒಂದು ಬಾರಿ ಪ್ರಶಸ್ತಿ ಪಡೆದ ಕುಟುಂಬದವರು ಪುನಃ ೫ ವರ್ಷಗಳವರೆಗೆ ಆ ಹಂತದಲ್ಲಿ ಭಾಗವಹಿಸುವಂತಿಲ್ಲ. ಮೇಲಿನ ಹಂತಗಳಲ್ಲಿ ಭಾಗವಹಿಸಬಹುದು.
ಕೃಷಿ ಪಂಡಿತ ಪ್ರಶಸ್ತಿ:
ಇತರೆ ರೈತರ ಸಾಧನೆಗಿಂತ ವಿಭಿನ್ನವಾಗಿ, ರಾಜ್ಯ ಕೃಷಿ ಕ್ಷೇತ್ರದಲ್ಲಿ ವಿನೂತನ/ ಹೊಸ ಅನ್ವೇಷಣೆ ಮಾಡಿರುವ, ಮೂಲ ಸ್ವರೂಪದ ಸಂಶೋಧನೆ/ ಸಾಧನೆ ಮಾಡಿರುವ, ಬೇರೆ ರೈತರ ಸಾಧನೆಗಿಂತ ವಿಭಿನ್ನ ಸಾಧನೆ ಮಾಡಿರುವ ರೈತರು ಅರ್ಜಿ ಸಲ್ಲಿಸಬಹುದು. ಈ ಹಿಂದೆ ಕೃಷಿ ಪಂಡಿತ ಪ್ರಶಸ್ತಿ ಪಡೆದ ರೈತರು ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ.
ಅಗತ್ಯ ದಾಖಲೆಗಳು: ಪಹಣಿ, ಆಧಾರ್, ಬ್ಯಾಂಕ್ ಪಾಸ್ ಪುಸ್ತಕ, ರೈತರ ಪೊ?ಟೋ, ಪರಿಶಿಷ್ಟ ಜಾತಿ/ಪಂಗಡದ ರೈತರಾದಲ್ಲಿ ಜಾತಿ ಪ್ರಮಾಣ ಪತ್ರ.
ಒಂದು ಕುಟುಂಬದ (ಗಂಡ, ಹೆಂಡತಿ ಮತ್ತು ಅವಲಂಬಿತ ಮಕ್ಕಳು) ಒಬ್ಬ ರೈತರು ಮಾತ್ರ ಭಾಗವಹಿಸಬಹುದು. ಕೇಂದ್ರ/ ರಾಜ್ಯ ಸರ್ಕಾರಿ ಸೇವೆಯಲ್ಲಿರುವ ಯಾವುದೇ ಇಲಾಖೆ / ವಿಶ್ವವಿದ್ಯಾಲಯ / ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ನೌಕರರು ಮತ್ತು ಅವರ ಕುಟುಂಬ ಸದಸ್ಯರು ಭಾಗವಹಿಸುವಂತಿಲ್ಲ.
ಅರ್ಜಿ ಸಲ್ಲಿಸಲು ಕೊನೆಯ ದಿನ ಸೆಪ್ಟೆಂಬರ್ ೩೦.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಹತ್ತಿರದ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
































