Home ಜಿಲ್ಲೆ ಮೈಸೂರು ಭಗವಂತ ನೀಡಿದ ಕಣ್ಣಿನ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಡಿ.ಮಂಜುನಾಥ್

ಭಗವಂತ ನೀಡಿದ ಕಣ್ಣಿನ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಡಿ.ಮಂಜುನಾಥ್

ಸಂಜೆವಾಣಿ ವಾರ್ತೆ
ಚಾಮರಾಜನಗರ, ಫೆ.15
:- ಭಗವಂತ ನೀಡಿದ ಕಣ್ಣನ್ನು ಪ್ರತಿಯೊಬ್ಬರೂ ರಕ್ಷಣೆ ಮಾಡುವುದು ಕರ್ತವ್ಯ ಎಂದು ಇನ್ಫಿನಿಟಿ ಸಂಸ್ಥೆಯ ಆಡಳಿತಾಧಿಕಾರಿ ಡಿ. ಮಂಜುನಾಥ್ ತಿಳಿಸಿದರು.
ಅವರು ತಾಲ್ಲೂಕಿನ ಸಂತೇಮರಹಳ್ಳಿಯ ಇನ್ಫಿನಿಟಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೆಎಸ್’ಬಿ ಪ್ರತಿμÁ್ಠನದ ವತಿಯಿಂದ, ಸಿಮ್ಸ್ ಸಹಯೋಗದಲ್ಲಿ ನಡೆದ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.


ಹುಟ್ಟಿನಿಂದಲೇ ದೃಷ್ಟಿಯನ್ನು ಕಳೆದುಕೊಂಡವರು ಪ್ರಪಂಚವನ್ನು ನೋಡುವ ಭಾಗ್ಯದಿಂದ ವಂಚಿತರಾಗಿದ್ದಾರೆ. ಆದರೆ ಬಹಳಷ್ಟು ಮಂದಿ ತಮ್ಮ ನಿರ್ಲಕ್ಷೃದಿಂದ ಕಣ್ಣು ಕಳೆದುಕೊಂಡವರಿದ್ದಾರೆ. ಆದ ಕಾರಣ ದೃಷ್ಟಿ ಇದ್ದವರು ಆಗಾಗ ಕಣ್ಣಿನ ತಪಾಸಣೆ ಮಾಡಿಕೊಂಡು ಕಣ್ಣಿನ ರಕ್ಷಣೆಗೆ ಒತ್ತು ನೀಡುವುದು ಅವಶ್ಯ ಎಂದರು.


ಜೆಎಸ್’ಬಿ ಪ್ರತಿμÁ್ಠನದ ಎಸ್. ಶಶಿಕಿಮಾರ್ ಮಾತನಾಡಿ, ನಮ್ಮ ಸಂಸ್ಥೆಯು ಹಲವಾರು ವರ್ಷಗಳಿಂದ ನಿರಂತರವಾಗಿ ಜಿಲ್ಲಾದ್ಯಂತ ವಿವಿಧ ಮಾದರಿಯ ಆರೋಗ್ಯ ತಪಾಸಣಾ ಶಿಬಿರಗಳನ್ನು ಮಾಡುತ್ತಿದ್ದು,
ನೂರಾರು ಮಂದಿಗೆ ಚಿಕಿತ್ಸೆಯನ್ನು ಹಾಗೂ ಔಷಧ ನೀಡಿ ಸಾಮಾಜಿಕವಾಗಿ ಸ್ಪಂದಿಸುವ ಕೆಲಸ ಮಾಡುತ್ತಿದೆ, ಜನರು ಇವುಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.


ನೇತ್ರ ತಜ್ಞೆ ಡಾ|| ಅನುμÁ ಸಹಕರಿಸಿದರು. ಶಿಬಿರದಲ್ಲಿ ಸುಮಾರು 50 ಮಂದಿಗೆ ಔಷಧ, ಕನ್ನಡಕವನ್ನು ವಿತರಿಸುವುದರ ಜೊತೆಗೆ ಶಸ್ತ್ರಚಿಕಿತ್ಸೆಗೆ ಆಯ್ಕೆಯಾದವರನ್ನು ನೊಂದಣಿ ಮಾಡಿಕೊಳ್ಳಲಾಯಿತು.
ಚಾಮರಾಜನಗರ ವೈಧ್ಯಕೀಯ ಸಂಸ್ಥೆಯ ವೈದ್ಯರಾದ ಡಾ ಶ್ವೇತ, ಡಾ ವಿದ್ಯಶ್ರೀ, ಡಾ ವ್ಯೂಮಿಕ, ಡಾ ರುಮಾನ, ಕು. ಲೇಖನ ಸಹಕರಿಸಿದರು. ಇನ್ಫಿನಿಟಿ ಆಂಗ್ಲ ಮಾಧ್ಯಮ ಶಾಲೆಯ ಸಿಬ್ಬಂದಿಗಳಾದ ಬೆಳ್ಳಪ್ಪ, ಮಣಿಕಂಠ, ಶಾಂತಕುಮಾರ, ಮಹದೇವಮ್ಮ, ವಸಂತ, ನೀಲಮ್ಮ ಮುಂತಾದವರಿದ್ದರು.