ಭಗತ್ ಸಿಂಗ್ ಜನ್ಮದಿನಾಚರಣೆ


ಸಂಜೆವಾಣಿ ವಾರ್ತೆ
ಬಳ್ಳಾರಿ, ಅ.29:
ಇಂದು ಕುರುಗೋಡು ತಾಲೂಕಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಯಲ್ಲಿ ಎಐಡಿವೈಓ ಯುವಜನ ಸಂಘಟನೆ ವತಿಯಿಂದ ಭಗತ್ ಸಿಂಗ್ ಅವರ 119 ನೆಯ ಜನ್ಮದಿನಾಚರಣೆ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಭಗತ್ ಸಿಂಗ್ ಅವರ ರಾಜಿ ರಹಿತ ಹೋರಾಟ ಮತ್ತು ಅವರ ಜೀವನ ಬಗ್ಗೆ ಚರ್ಚೆ ಮಾಡಲಾಯಿತು. ಅವರು ಅಂದೇ ಹೇಳಿದ್ದರು ನಮ್ಮ ದೇಶಕ್ಕೆ ಬರೀ ಸ್ವತಂತ್ರ ಬ್ರಿಟಿಷರಿಂದ ವರ್ಗಾವಣೆ ಆಗಿ ನಮ್ಮ ದೇಶದ ಶೋಷಕ ವರ್ಗಕ್ಕೆ ಸಿಕ್ಕರೆ ನಿಜವಾದ ಸ್ವತಂತ್ರ ಅಲ್ಲ. ದೇಶದ ರೈತರು, ಯುವಕರು, ಮಹಿಳೆಯರು, ಮಕ್ಕಳು ಎಲ್ಲರೂ ಘನತೆಯಿಂದ, ಸಮಾನತೆಯಿಂದ ಬದುಕುವ ಸಮಾಜವಾದ ರಾಷ್ಟ್ರ ನಮ್ಮದಾಗಬೇಕು ಎಂಬುದು. ಅವರ ಕನಸಿನ ಭಾರತ ಕಟ್ಟಲು ಇಂದಿನ ದೇಶದ ಪಿಡುಗುಗಳಾದ ನಿರುದ್ಯೋಗ, ಭ್ರಷ್ಟಾಚಾರ, ಕೋಮುವಾದ, ಜೂಜಾಟ, ಮಧ್ಯ ಮಾದಕ ವಸ್ತುಗಳ ವ್ಯಸನ ಗಳಿಂದ ಯುವಕರನ್ನು ಉನ್ನತ ಆದರ್ಶಗಳ ಕಡೆಗೆ ಆಕರ್ಷಿಸುವ ಕೆಲಸ ಅಗತ್ಯವಾಗಿದೆ  ಎಂದು ಚರ್ಚೆ ಮಾಡಲಾಯಿತು.
 ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ಎ.ಪಂಪಾಪತಿ ಕೋಳೂರು, ಜಿಲ್ಲಾ ಕಾರ್ಯದರ್ಶಿ ಜಗದೀಶ್ ನೇಮಕಲ್, ಸದಸ್ಯರಾದ ಪ್ರಮೋದ್, ಕಾಲೇಜಿನ ಉಪನ್ಯಾಸಕರಾದ ಪ್ರಸಾದ್, ಉಮೇಶ್ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.