ಭಕ್ತಿಭಾವದ ಅಲ್ಲಿಪುರ ಮಹಾದೇವತಾತಾನ ರಥೋತ್ಸವ

(ಸಂಜೆವಾಣಿ ವಾರ್ತೆ)

ಬಳ್ಳಾರಿ, ಡಿ.30: ನಗರದ ಹೊರ ವಲಯದಲ್ಲಿರುವ ಅಲ್ಲಿಪುರದ ಸದ್ಗುರು ಮಹಾದೇವ ತಾತಾನವರ ಮಠದಿಂದ ಇಂದು ಬೆಳಗಿನ ಜಾವ ಈ ವರ್ಷದ ರಥೋತ್ಸವದ ಮಡಿ ತೇರನ್ನು ನೂರಾರು ಭಕ್ತರ ಸಮ್ಮುಖದಲ್ಲಿ ಎಳೆಯಲಾಯ್ತು

ಇಂದು ಸಂಜೆ ಸಂಜೆ 4-40 ಕ್ಕೆ ಜಾನಪದ ನೃತ್ಯ ಮತ್ತು ಮಂಗಲ ವಾದ್ಯಗಳೊಂದಿಗೆ  ತಾತನವರ ಮಹಾರಥೋತ್ಸವ ನಡೆಯಲಿದೆ.

ಬೆಳಗಿನ ಜಾವ ಕಲಶ ಹಾಗೂ ವೀರಗಾಸೆ ನೃತ್ಯದೊಂದಿಗೆ ಗಂಗೆಯನ್ನು ತರಲಾಯ್ತು. ನಿನ್ನೆ ರಾತ್ರಿಯಿಂದ ವಿವಿಧ ಗ್ರಾಮಗಳ ತಂಡಗಳಿಂದ ಭಜನೆ ನಡೆಯಿತು

ರಥೋತ್ಸವದ ಅಂಗವಾಗಿ ಮಠವನ್ನು ವಿವಿಧ ವರ್ಣದ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದೆ. ಇಂದು ಇಡೀ ದಿನಬಂದ ಭಕ್ತ ಸಮೂಹಕ್ಕೆ ಪ್ರಸಾದ ವಿತರಣೆ ನಡೆಯುತ್ತಿದೆ.

ನಾಳೆ ಸಂಜೆ 4 ಘಂಟೆಗೆ ಕಡುಬಿನ ಕಾಳಗ ನಡೆಯಲಿದೆಂದು ಮಠದ ಟ್ರಸ್ಟ್ ನ ಪದಾಧಿಕಾರಿಗಳು ತಿಳಿಸಿದ್ದಾರೆ.