ಬ್ಲ್ಯಾಕ್ ಬಾಕ್ಸ್ ಡೇಟಾ ಮರುಸ್ಥಾಪನೆಗೆ ಅಮೆರಿಕಾಕ್ಕೆ ರವಾನೆ

ಅಹಮದಾಬದ್, ಜೂ. 19- ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾದ ಸಂಬಂಧಿಸಿದಂತೆ ಬೋಯಿಂಗ್-787 ವಿಮಾನದ ಬ್ಲ್ಯಾಕ್ ಬಾಕ್ಸ್‍ನ ಡೇಟಾ ಮರುಸ್ಥಾಪಿಸಲು ಅಮೆರಿಕಾಕ್ಕೆ ಕಳುಹಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.


ವಿಮಾನದ ಡಿಜಿಟಲ್ ಫ್ಲೈಟ್ ಡೇಟಾ ರೆಕಾರ್ಡರ್ (ಡಿಎಫ್‍ಡಿಆರ್)ಗೆ ಬೆಂಕಿ ಬಿದ್ದು ಬಾಹ್ಯಾವಾಗಿ ಹಾನಿಯಾಗಿರುವ ಹಿನ್ನೆಲೆಯಲ್ಲಿ ಅಮೇರಿಕಾಕ್ಕೆ ಕಳುಹಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಜೂನ್ 13 ರಂದು ಬಿಜೆ ವೈದ್ಯಕೀಯ ಹಾಸ್ಟೆಲ್‍ನ ಮೇಲ್ಛಾವಣಿಯಲ್ಲಿದ್ದ ಏರ್ ಇಂಡಿಯಾ ವಿಮಾನದ ಬ್ಲ್ಯಾಕ್ ಬಾಕ್ಸ್ ಅನ್ನು ತನಿಖಾ ತಂಡ ವಶಪಡಿಸಿಕೊಂಡಿತು. ಆದರೆ ಬ್ಲ್ಯಾಕ್ ಬಾಕ್ಸ್‍ಗೆ ಬೆಂಕಿಯತ್ತ ಹಾನಿ ಉಂಟಾಗಿದೆ. ಹೀಗಾಗಿ ಆದ್ದರಿಂದ ಮಾಹಿತಿ ಹೊರತೆಗೆಯಲು ತನಿಖಾ ತಂಡಕ್ಕೆ ಅಸಾಧ್ಯವಾಗಿಲ್ಲ. ಆದ್ದರಿಂದ ಡೇಟಾ ಮರುಸ್ಥಾಪಿಸಲು ಬ್ಲ್ಯಾಕ್ ಬಾಕ್ಸ್ ಅನ್ನು ಅಮೆರಿಕಾಕ್ಕೆ ರವಾನೆ ಮಾಡಲಾಗಿದೆ ಎಂದು ಹೇಳಲಾಗಿದೆ.


ವಿಮಾನದಲ್ಲಿ ಧ್ವನಿ ಗ್ರಹಣಕ್ಕೆ ಬಳಸಲಾಗುವ ಸಾಧನಗಳನ್ನು ಬ್ಲ್ಯಾಕ್ ಬಾಕ್ಸ್ ಎಂದು ಕರೆಯಲಾಗುತ್ತದೆ. ಬ್ಲ್ಯಾಕ್ ಬಾಕ್ಸ್ ಹಾರಾಟದ ಸಮಯದಲ್ಲಿ ವಿಮಾನದ ಎಲ್ಲಾ ಚಟುವಟಿಕೆಗಳನ್ನು ದಾಖಲಿಸುತ್ತದೆ. ಎಲ್ಲಾ ವಿಮಾನಗಳನ್ನು ಬ್ಲ್ಯಾಕ್ ಬಾಕ್ಸ್ ಗಟ್ಟಿಂiÀiವಾಗಿ ಅಳವಡಿಸಲಾಗುತ್ತದೆ.
ವಿಮಾನ ಅಪಘಾತವಾದಾಗ ಅದಕ್ಕೆ ಅದರ ಕಾರಣ ಪತ್ತೆಗಾಗಿ 5 ಕೆಜಿ ತೂಕದ ರೆಕಾರ್ಡರಿಂಗ್ ಸಾಧನ ಅಳವಡಿಸಲಾಗುತ್ತದೆ. ಭದ್ರತೆ ದೃಷ್ಟಿಯಿಂದ ಬ್ಲ್ಯಾಕ್ ಬಾಕ್ಸ್ ಅನ್ನು ವಿಮಾನ ಹಿಂಬದಿಯಲ್ಲಿ ಇಡಲಾಗಿತ್ತು. ಟೈಟಾನಿಯಂ ಲೋಹದಿಂದ ಪಟ್ಟಿಯನ್ನು ತಯಾರಿಸಲಾಗುತ್ತದೆ. ಇದು ಸಮುದ್ರದಲ್ಲೂ ಬಿದ್ದರೆ ಸುತ್ತಲೂ ಬೆಂಕಿಯಿದ್ದರೂ ಅಥವಾ ಎತ್ತರದಿಂದ ಬಿದ್ದರೂ ಯಾವುದೇ ಅಪಘಾತವನ್ನು ತಡೆಯುವ ಶಕ್ತಿ ಹೊಂದಿದೆ.