ಬ್ರಹ್ಮಾವರ ಪೊಲೀಸರಿಂದ ಟಿಪ್ಪರ್ ಚಾಲಕ, ಮಾಲಕರ ಸಭೆ

ಬ್ರಹ್ಮಾವರ: ಬ್ರಹ್ಮಾವರ ಪೊಲೀಸ್ ಠಾಣಾ ವತಿಯಿಂದ ಬ್ರಹ್ಮಾವರ ತಾಲೂಕಿನ ಟಿಪ್ಪರ್ ಚಾಲಕರು ಮತ್ತು ಮಾಲಕರ ಸಭೆಯನ್ನು ಶುಕ್ರವಾರ ಬ್ರಹ್ಮಾವರ ನಾರಾಯಣ ಗುರು ಕಲಾ ಮಂದಿರದಲ್ಲಿ ಆಯೋಜಿಸಲಾಗಿತ್ತು.
ಸಭೆಯಲ್ಲಿ ಬಹ್ಮಾವರ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಅಶೋಕ ಮಾಳಾಬಾಗಿ, ಮಾಲಕರು ಮತ್ತು ಚಾಲಕರಿಗೆ ತಮ್ಮ ಟಿಪ್ಪರ್ ವಾಹನದಲ್ಲಿ ಕಡ್ಡಾಯವಾಗಿ ಸ್ಪೀಡ್ ಗವರ್ನರ್ ಅಳವಡಿಸಬೇಕೆಂದು ಸೂಚಿಸಿದರು.
ಅಲ್ಲದೆ ಎಲ್ಲ ವಾಹನಗಳ ಪೀಟ್ನೆಸ್ ಸರ್ಟಿಫಿಕೇಟ್, ವಾಹನ ವಿಮೆಯನ್ನು ಕಡ್ಡಾಯವಾಗಿ ಹೊಂದಿರುವಂತೆ ಹಾಗೂ ವಾಹನವನ್ನು ಅಕ್ರಮ ಚಟುವಟಿಕೆಗೆ ಉಪಯೋಗಿಸದ್ದಂತೆ ತಿಳುವಳಿಕೆಯನ್ನು ನೀಡಿದರು.
ಸಭೆಯಲ್ಲಿ ಟಿಪ್ಪರ್ ಮಾಲಕ ಮತ್ತು ಚಾಲಕರ ಸಂಘದ ಅಧ್ಯಕ್ಷ ಮಹೇಶ ಮೊಯಿಲಿ, ಕಾರ್ಯದರ್ಶಿ ನಯನ ಶೆಟ್ಟಿ ಮೊದಲಾದವರು ಹಾಜರಿದ್ದರು.