ಬ್ಯಾಡ್ಮಿಂಟನ್‌ನಲ್ಲಿ ಚುತ್ಯಶ್ರೀ ಎಸ್.ಜಿ. ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಸುಳ್ಯ:ಪಾಂಡಿಚೇರಿಯಲ್ಲಿ ನಡೆದ ರಾಜ್ಯಮಟ್ಟದ ೧೧ ವರ್ಷದ ಕೆಳಗಿನ ವಯೋಮಾನದ ಹುಡುಗಿಯರ ವಿಭಾಗದ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಚ್ಯುತಶ್ರೀ ಎಸ್.ಜಿ. ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಡಿ.೮ರಿಂದ ೧೨ರವರೆಗೆ ಗುಜರಾತಿನ ಬರೋಡಾದಲ್ಲಿ ರಾಷ್ಟ್ರ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾಟ ನಡೆಯಲಿದೆ. ಸುಳ್ಯ ತಾಲೂಕು ಅಮರಮೂಡ್ನೂರು ಗ್ರಾಮದ ಗುಡ್ಡೆಮನೆಯ ನಿವಾಸಿ ಜವಾಹರಲಾಲ್ ನೆಹರು ಇನ್‌ಸ್ಟಿಟ್ಯೂಟ್ ಪಾರ್ ಮೆಡಿಕಲ್ ಎಜುಕೇಷನ್ ಎಂಡ್ ರಿಸರ್ಚ್ ಪಾಂಡಿಚೇರಿಯಲ್ಲಿ ಉದ್ಯೋಗದಲ್ಲಿರುವ ಡಾ. ಶ್ರೀವತ್ಸ ಪ್ರಸಾದ್ ಹಾಗೂ ಪದ್ಮಶ್ರೀ ಗುಡ್ಡೆಮನೆಯವರ ಪುತ್ರಿ. ಚ್ಯುತಶ್ರೀ ಎಸ್.ಜಿ. ಕೇಂದ್ರೀಯ ವಿದ್ಯಾಲಯ ಸಂಘಟನೆ ವಿದ್ಯಾಸಂಸ್ಥೆಯ ೫ ತರಗತಿ ವಿದ್ಯಾರ್ಥಿ.