
ಸಂಜೆವಾಣಿ ನ್ಯೂಸ್
ಮೈಸೂರು: ಜೂ.02:- ಬೌದ್ಧ ಧರ್ಮ ಅನುಸರಿಸಿದರೆ ಸ್ವಸ್ಥ ಸಮಾಜವನ್ನು ನಿರ್ಮಾಣ ಮಾಡಬಹುದು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಮೂಡ್ನಕೂಡು ಚಿನ್ನಸ್ವಾಮಿ ಅಭಿಪ್ರಾಯಪಟ್ಟರು.
ನಗರದ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಭಾನುವಾರ ನಡೆದ ಧÀಮ್ಮ ಪಯಣದ ಹಾದಿಯಲ್ಲಿ ಬುದ್ಧಂ ನಮಾಮಿ ಭೋಧಿಯ ಮಡಿಲಲ್ಲಿ ಮಕ್ಕಳ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾರತದಲ್ಲಿರುವ ದಲಿತರು, ಹಿಂದುಳಿದ ವರ್ಗದವರು ಬದಲಾವಣೆಯಾದರೂ ಸಹ ಬೌದ್ಧ ಭಾರತ ಎನಿಸಿಕೊಳ್ಳಲಿದೆ. ಕನಿಷ್ಠ ಇನ್ನು 10 ವರ್ಷದಲ್ಲಿ ಶೇ.25 ರಷ್ಟು ಬದಲಾವಣೆಯಾಗುವ ನಂಬಿಕೆಯಿದೆ. ಆಗ ಮಾತ್ರ ಭಾರತ ನಿಜವಾಗಿಯೂ ಬೌದ್ಧ ಭಾರತವಾಗಲಿದೆ. ಸಂಸ್ಕಾರದ ಕೊರತೆಯಿಂದ ದೇಶದಲ್ಲಿ ಇಂದು ಹೆಚ್ಚು ಅಪರಾಧÀಗಳು ನಡೆಯುತ್ತಿದೆ ಎಂದು ತಿಳಿಸಿದರು.
ಇತ್ತೀಚೆಗೆ ಮುಸಲ್ಮಾನ ಹಡುಗನೊಬ್ಬನ ಕೊಲೆಯನ್ನು ಮೂರು ಯುವಕರು ಮಾಡಿದ್ದಾರೆ. ಇವರಿಗೆ ಕೊಲೆ ಮಾಡುವ ಧೈರ್ಯ ಹೇಗೆ ಬಂತು ಎಂದು ಯೋಚಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅವರು ಪಾಲಿಸುವ ಧÀರ್ಮದಲ್ಲಿ ಯಾವ ನೈತಿಕತೆಯೂ ಇಲ್ಲವೇ? ಅಥವಾ ಅವರ ಶಾಲೆಯಲ್ಲಿ ಏನನ್ನೂ ಹೇಳಿಕೊಟ್ಟಿಲ್ಲವೇ ಎಂಬ ಪ್ರಶ್ನೆಗಳು ಮೂಡುತ್ತವೆ ಎಂದು ಹೇಳಿದರು.
ಚಾತುರ್ವರ್ಣದಲ್ಲಿ ಮೊದಲನೆಯವರಿಗೆ ಧÀರ್ಮವಿದೆ. ಇವರು ಮಾತ್ರ ಶೆ.100ರಷ್ಟು ಧÀರ್ಮವನ್ನು ಹಿಂಬಾಲಿಸುತ್ತಿರುವುದರ ಜತೆಗೆ ಜೀವನದಲ್ಲಿ ಉನ್ನತಿಯನ್ನು ಸಾಧಿಸುತ್ತಿದ್ದಾರೆ. ದೊಡ್ಡ ದೊಡ್ಡ ಹುದ್ದೆಗಳಿಗೆ ಹೋಗುತ್ತಿದ್ದಾರೆ. ಇವರ ಕೆಳಗಿನವರೂ ಸಹ ಮೇಲೆ ಬರುತ್ತಿದ್ದಾರೆ. ಆದರೆ, ಶೂದ್ರರು ಉನ್ನತ ಮಟ್ಟದಲ್ಲಿ ಯಾಕೆ ಇಲ್ಲ ಎಂದು ಆಲೋಚಿಸಿದರೆ ಅವರಿಗೆ ಧÀರ್ಮವಿಲ್ಲ ಎಂದು ತಿಳಿಸಿದರು.
ಶೂದ್ರರು ಓದುವುದರಿಂದ, ಶಾಲೆಯಿಂದ ಹಾಗೂ ಶಾಸನಗಳನ್ನು ಕಲಿಯಲು ಸಾವಿರಾರು ವರ್ಷಗಳಿಂದ ನಿಷಿದ್ಧರಾಗಿದ್ದವರು. ಕೇವಲ ಉದ್ಯೋಗಕ್ಕಾಗಿ ಡಿಗ್ರಿ ಪಡೆಯುವ ಅವರು ಉದ್ಯೋಗ ಸಿಕ್ಕ ನಂತರ ಏನು ಮಾಡಬೇಕೆಂದು ತಿಳಿಯುವುದಿಲ್ಲ. ನಂತರ ಅವರ ಮನೆಗಳನ್ನು ನೋಡಿದರೆ ಹಲವಾರು ದೇವರ ಫೋಟೊಗಳನ್ನು ಇಟ್ಟು ಪೂಜೆ ಮಾಡುತ್ತಾರೆ. ಆದರೆ ನಿಜವಾದ ಭÀಕ್ತಿಯ ಬಗ್ಗೆ ಅರಿವಿರಲ್ಲ ಹಾಗೂ ಆ ಶಾಸ್ತ್ರಗಳೂ ಸಹ ಹೇಳುವುದಿಲ್ಲ ಎಂದರು.
ಬ್ರಾಹ್ಮಣರಿಗೆ ಸಂಸ್ಕೃತ ಹೇಗೆ ಶ್ರೇಷ್ಠವೋ ಹಾಗೆಯೇ ನಾವು ಪಾಲಿಯ ಮಂತ್ರ ಪಠಿಸಬೇಕು. ಪಾಲಿಯ ಮಂತ್ರ ಪಠಿಸುವುದರಿಂದ ಭಾಷೆಯಲ್ಲಿ ಶುದ್ಧತೆ ಕಾಣಬಹುದು. ಹಿಂದೂ ಧÀರ್ಮ ಹಿಂದೂ ದೇವತೆಗಳ ಮೂಲಕ ಒಳ್ಳೆಯದನ್ನು ಮಾಡಿಸಬೇಕೆಂಬ ಭÀಯವನ್ನು ಹುಟ್ಟಿಸುತ್ತದೆ ಅದರ ಜತೆಯಲ್ಲಿಯೇ ಕೆಟ್ಟದನ್ನು ಮಾಡಿ ಕ್ಷಮಾಪಣೆ ಕೇಳುವ ಸ್ಥಿತಿಯನ್ನು ಹುಟ್ಟಿಸಿದೆ ಎಂದರು.
ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ಗ್ರಾಮೀಣ ಭಾಗಕ್ಕೆ ಧಮ್ಮ ಪಯಣದ ಮೂಲಕ ಧÀಮ್ಮ ದೀಪವನ್ನು ಹಚ್ಚುವ ಪ್ರಯತ್ನವಾಗುತ್ತಿದೆ. ಇದು ನಮ್ಮೆಲ್ಲರ ಕರ್ತವ್ಯ. ಈ ಧÀಮ್ಮ ಪ್ರಸ್ತುತ ಕಾಲಘಟದಲ್ಲಿ ಭಾರತ ದೇಶಕ್ಕೆ ಅತ್ಯವಶ್ಯಕವಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಈ ಕಾರ್ಯಕ್ರಮದ ಮೂಲಕ ಬುದ್ಧರ ಹಾಗೂ ಬುದ್ಧರ ಚಿಂತನೆಗಳು ಈ ನಾಡಿನಲ್ಲಿ ಇತ್ತು ಎಂಬ ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸುಗತಪಾಲ ಭಂತೇಜಿ, ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧÀಕರ ಸಂಘದ ಅಧ್ಯಕ್ಷ ಶಿವಶಂಕರ್, ದಸಂಸ ಮುಖಂಡ ಬೆಟ್ಟಯ್ಯ ಕೋಟೆ ಸೇರಿದಂತೆ ಇತರರು ಹಾಜರಿದ್ದರು.