Home ಜಿಲ್ಲೆ ಮೈಸೂರು ಬೈಕ್ ಸವಾರರ ಮೇಲೆರೆಗಿದ ಚಿರತೆ ಸವಾರರು ಪಾರು

ಬೈಕ್ ಸವಾರರ ಮೇಲೆರೆಗಿದ ಚಿರತೆ ಸವಾರರು ಪಾರು

ಸಂಜೆವಾಣಿ ವಾರ್ತೆ
ಹನೂರು ಫೆ 10 :
– ಬೈಕ್ ಸವಾರರ ಮೇಲೆ ಚಿರತೆ ಎಗರಿದ ಆಘಾತಕಾರಿ ಘಟನೆ ಹನೂರು ತಾಲೂಕಿನ ಆಂಡಿಪಾಳ್ಯ ಸಮೀಪ ಭಾನುವಾರ ರಾತ್ರಿ ನಡೆದಿದೆ.
ಕೊಳ್ಳೇಗಾಲ ತಾಲೂಕಿನ ಉಗನೀಯ ಗ್ರಾಮದ ಅಬುಜರ್ ಹಾಗೂ ರಾಮನಗರ ಜಿಲ್ಲೆಯ ಮಹಮ್ಮದ್ ಹನೀಫ್ ಗಾಯಗೊಂಡು ಚಿರತೆ ದಾಳಿಯಿಂದ ತಪ್ಪಿಸಿಕೊಂಡು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.


ಒಡೆಯರಪಾಳ್ಯ ಕಡೆಯಿಂದ ಕೊಳ್ಳೇಗಾಲದತ್ತ ಬರುತ್ತಿದ್ದಾಗ ಚಿರತೆ ಎಗರಿದ ಪರಿಣಾಮ ಬೈಕ್ ನಿಂದ ಬಿದ್ದು ತರಚಿದ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹನೂರು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದಿದ್ದಾರೆ.
ಈ ಬಗ್ಗೆ ರೈತ ಮುಖಂಡರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದಾರೆ.