
ಬೆಂಗಳೂರು, ನ.2:- ಸುಬ್ರಹ್ಮಣ್ಯನಗರದ ಮಿಲ್ಕ್ ಕಾಲೋನಿಯ ಪದವೀಧರೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.
ದಾವಣಗೆರೆ ಜಿಲ್ಲೆಯ ಮೂಲದ ಎಂಬಿಎ ಪದವೀಧರೆ ಸುಪ್ರಿಯಾ(25)ಮೃತಪಟ್ಟವರು.ಎಂಬಿಎ ಪದವಿ ಪಡೆದಿದ್ದ ಸುಪ್ರಿಯಾ, ಬೈಕ್ ರೈಡಿಂಗ್ ತರಬೇತಿ ಪಡೆಯುತ್ತಿದ್ದಳು ಸುಪ್ರಿಯಾ ಕಳೆದ ಎರಡು ವರ್ಷಗಳಿಂದ ಹೆಚ್ಚು ಕಾಲ ಸುಬ್ರಹ್ಮಣ್ಯನಗರದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದಳು.
ಕಳೆದ ಎರಡು ದಿನಗಳಿಂದ ಆಕೆಯ ಕೋಣೆಯ ಬಾಗಿಲು ಲಾಕ್ ಆಗಿತ್ತು. ಇದರಿಂದ ಅನುಮಾನಗೊಂಡ ಮನೆ ಮಾಲೀಕರು ಇಂದು ಬಾಗಿಲು ತೆರೆದಾಗ ದಾರುಣ ದೃಶ್ಯ ಕಂಡುಬಂದಿತು. ಫ್ಯಾನ್‍ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮೃತದೇಹ ತುಂಡಾಗಿ ಬಿದ್ದಿತ್ತು. ಪೆÇಲೀಸರು ಸ್ಥಳಕ್ಕೆ ಆಗಮಿಸಿದಾಗ ದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿತ್ತು.
ದಾವಣಗೆರೆಯಿಂದ ಬೆಂಗಳೂರಿಗೆ ಉದ್ಯೋಗಕ್ಕಾಗಿ ಬಂದಿದ್ದ ಸುಪ್ರಿಯಾ, ಕಳೆದ ಎರಡು ದಿನಗಳಿಂದ ತಮ್ಮ ಪೆÇೀಷಕರ ಕರೆಗಳಿಗೆ ಸ್ಪಂದಿಸಿಲ್ಲ. ಮೊದಲ ದಿನ ಸುಮ್ಮನಿದ್ದ ಪೆÇೀಷಕರು ಎರಡನೇ ದಿನ ಆತಂಕಕ್ಕೀಡಾದರು. ತಕ್ಷಣ ಮನೆ ಮಾಲೀಕರಿಗೆ ಕರೆ ಮಾಡಿ ವಿಷಯ ತಿಳಿಸಿದರು. ಮನೆ ಮಾಲೀಕರು ಸ್ಥಳಕ್ಕೆ ತೆರಳಿ ಬಾಗಿಲು ತೆರೆದಾಗಲೇ ಘಟನೆ ಬೆಳಕಿಗೆ ಬಂದಿದೆ. ಸುಬ್ರಹ್ಮಣ್ಯನಗರ ಪೆÇಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಆತ್ಮಹತ್ಯೆಯೇ ಕಾರಣವೆಂದು ಅನುಮಾನಿಸಲಾಗಿದ್ದು, ಯುಡಿಆರ್ (ಅನುಮಾನಾಸ್ಪದ ಸಾವು) ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.



























