
ಸಂಜೆವಾಣಿ ವಾರ್ತೆ
ಕುರುಗೋಡು, ಮಾ.8. ತಾಲೂಕು ವ್ಯಾಪ್ತಿಯಲ್ಲಿ ಆರೋಗ್ಯ ಇಲಾಖೆ ಅಡಿ ಸೇವೆ ಸಲ್ಲಿಸುತ್ತಿರುವ, ಆರೋಗ್ಯ ಇಲಾಖೆ ಸಿಬ್ಬಂದಿಯವರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ, ಕಪ್ಪುಪಟ್ಟಿ ಧರಿಸಿ ಮುಷ್ಕರ ಕೈಗೊಳ್ಳುವ ಕುರಿತು, ಮಾ.7ರಂದು ಕುರುಗೋಡು ತಹಶೀಲ್ದಾರರಿಗೆ, ಆರೋಗ್ಯ ಇಲಾಖೆ ಸಿಬ್ಬಂದಿಯವರು ಮನವಿ ಪತ್ರ ಸಲ್ಲಿಸಿದರು. ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಮತ್ತು ಆರೋಗ್ಯ ಇಲಾಖೆಯ ಎಲ್ಲ ವೃಂದಗಳ ಸಂಘಗಳಿಂದ ಮಾ.11ರಿಂದ 15ರವರೆಗೆ ಕಪ್ಪು ಪಟ್ಟಿ ಧರಿಸಿ ಹೊರ ರೋಗಿಗಳಿಗೆ ಸೇವೆ ನೀಡದೆ, ಕೇವಲ ತುರ್ತು ಸೇವೆ ಮಾತ್ರ ಒದಗಿಸುವದು. ಮತ್ತು ಮಾ.16 ರಿಂದ ಅನಿರ್ದಿಷ್ಟಾವದಿವರೆಗೆ ಕರ್ತವ್ಯಕೆ ಗೈರು ಹಾಜರಾಗುವದರ ಮೂಲಕ ಮುಷ್ಕರ ಹಮ್ಮಿಕೊಂಡಿರುವ ಕುರಿತು, ಕರ್ನಾಟಕ ರಾಜ್ಯ ತಾಲೂಕು ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಕುರುಗೋಡು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕಿಯ ಶಿಕ್ಷಣ ಇಲಾಖೆ ಸಂಘ, ಹಾಗೂ ಎಲ್ಲ ಸಂಬಂಧಿತ ಸಂಘಗಳ ವತಿಯಿಂದ ಮನವಿಪತ್ರ ಸಲ್ಲಿಸಲಾಗಿದೆ. ಈವೇಳೆ ತಾಲೂಕು ಆರೋಗ್ಯ ಅಧಿಕಾರಿಗಳು, ವೈದ್ಯಾಧಿಕಾರಿಗಳು, ತಜ್ಞ ವೈದ್ಯರು, ಎಲ್ಲಾ ಸಂಘಗಳ ವೃಂದದ ಅಧ್ಯಕ್ಷರು, ಪದಾಧಿಕಾರಿಗಳು, ಹಾಗೂ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಇದ್ದರು.























