Home ಜಿಲ್ಲೆ ಮಂಗಳೂರು ಬೆಳ್ಳಾರೆ : ಎಂಡೋಸಲ್ಪಾನ್ ಸಂತ್ರಸ್ತರ ಪುನರ್ವಸತಿ ಪಾಲನಾ ಕೇಂದ್ರ ಉದ್ಘಾಟನೆ

ಬೆಳ್ಳಾರೆ : ಎಂಡೋಸಲ್ಪಾನ್ ಸಂತ್ರಸ್ತರ ಪುನರ್ವಸತಿ ಪಾಲನಾ ಕೇಂದ್ರ ಉದ್ಘಾಟನೆ

ಸುಳ್ಯ:ಬೆಳ್ಳಾರೆಯಲ್ಲಿ ನೂತನವಾಗಿ ಆರಂಭಗೊಂಡ ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಪಾಲನಾ ಕೇಂದ್ರದ ಉದ್ಘಾಟನೆ ನಡೆಯಿತು.
ಜಿಲ್ಲಾ ಆಡಳಿತ, ಜಿಲ್ಲಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೆಂಗಳೂರಿನ ಉದ್ಭವ್ ಶೈಕ್ಷಣಿಕ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಗೆ ನಿರ್ವಹಣೆಗಾಗಿ ಸರಕಾರ ನೀಡಿದ್ದು ಪಾಲನಾ ಕೇಂದ್ರವನ್ನು ಸ್ಥಳೀಯ ವೈದ್ಯ ಡಾ.ಕಿರಣ್ ಮತ್ತು ಸಂಪಾಜೆ ಉದ್ಭವ್ ಸಂಸ್ಥೆಯ ಆಡಳಿತಾಧಿಕಾರಿ ಪಿ.ಮಲ್ಲಿಕಾರ್ಜುನ ಉದ್ಘಾಟಿಸಿದರು.
ಮಕ್ಕಳು ಮತ್ತು ಪೋಷಕರ ಹಾಗೂ ವೈದ್ಯರು, ಜೊತೆಗೆ ದೀಪಬೆಳಗುವ ಮುಖಾಂತರ ಪ್ರಾರಂಭಿಸಲಾಯಿತು.
ಈ ಸಂದರ್ಭ ಪಾಲನಾ ಕೇಂದ್ರದ ಮ್ಯಾನೇಜರ್ ಶರ್ಮಿಳ, ವಿಶೇಷ ಪರಿಣಿತ ಶಿಕ್ಷಕರಾದ ಸವಿತಾ, ಮುಸ್ಕಾನ್, ಕ್ರಾಫ್ಟ್ ಟೀಚರ್ ಕಾವ್ಯ, ಹಾಗೂ ಸಹಾಯಕರು
ಮತ್ತು ಆಸ್ಪತ್ರೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.