
ಸಂಜೆವಾಣಿ ವಾರ್ತೆ
ಹನೂರು ಮೇ 25 :- ತಾಲೂಕಿನ ಕಾಡಂಚಿನ ಗ್ರಾಮಗಳಿಗೆ 5 ಕೋಟಿ ವೆಚ್ಚದಲ್ಲಿ ಬೆಳಕು ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳನ್ನು ಶಾಸಕ ಎಂ.ಆರ್ ಮಂಜುನಾಥ್ ಅವರು ಪರಿಶೀಲನೆ ನಡೆಸಿ ಬೆಳಕು ಯೋಜನೆಯನ್ನು ಸಮರ್ಪಕ ರೀತಿಯಲ್ಲಿ ಬಳಸಲು ಗುತ್ತಿಗೆದಾರರಿಗೆ ಸೂಚಿಸಿದರು.
ಮಾವತ್ತುರು ಗ್ರಾಮದಲ್ಲಿ ನಡೆದ ಸ್ಥಳ ವೀಕ್ಷಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು ಸೋಲಿಗ ಜನರು ವಾಸಿಸುವ ಕಾಡಂಚಿನ ಗ್ರಾಮಗಳಾದ ಗೊಂಬೆಗಲ್ಲು, ನೆಲ್ಲಿಕತ್ರಿ. ಕೆರೆದಿಂಬಗಳಲ್ಲಿ 21 ಕಿಲೋಮೀಟರ್ ದೂರದ ವರೆಗೆ ಬೆಳಕು ಯೋಜನೆಯನ್ನು ಮಾಡಲು ಅಂದಾಜು ವೆಚ್ಚ 5 ಕೋಟಿ ರೂಗಳಷ್ಟು ವಿನಿಯೋಗಿಸಲಿಗಿದೆ, ಈ ಯೋಜನೆಯನ್ನು ಸಮರ್ಪಕವಾಗಿ ಮಾಡಲು ಗುತ್ತಿಗೆದಾರರಿಗೆ ಸೂಚಿಸಿದರು.
ಆನೆ ಕಂದಕಗಳನ್ನು ನಿರ್ಮಿಸಲು ನೂರ ಎಂಬತ್ತು ಕೋಟಿ ಹಣ ಬಿಡುಗಡೆಯಾಗಿದೆ ಅದರಲ್ಲಿ ನಮ್ಮ ಕ್ಷೇತ್ರದಲ್ಲಿ ಸದ್ಬಳಕೆ ಮಾಡಲು ತಿರ್ಮಾನ ಮಾಡಲು ಸೂಚಿಸಿದರು. ಕುಡಿಯುವ ನೀರಿನ ಸರಬರಾಜು ಮಾಡಲು ಪಂಚಾಯಿತಿಯಿಂದ ಅವಕಾಶ ಮಾಡಿಕೊಡಬೇಕು, ಉತ್ತಮವಾಗಿ ಚರಂಡಿ ಹೂಳೆತ್ತಲು ವ್ಯವಸ್ಥೆಯನ್ನು ಮಾಡಬೇಕು ಎಂದು ಸೂಚನೆ ನೀಡಿದರು.
ಪಿ.ಜಿ ಪಾಳ್ಯದಲ್ಲಿನ ದೊಡ್ಡಕೆರೆ ಒತ್ತುವರಿ ಸ್ಥಳದಲ್ಲೆ ಹುಕುಂ ನೀಡಿದವರಿಗೆ ನೋಟಿಸ್ ಜಾರಿ ಮಾಡಲು ಸೂಚಿಸಿದರು. ಹಾಗೂ ಗ್ರಾಮ ಪಂಚಾಯತಿಗಳಲ್ಲಿ ಹದಿನೈದನೆಯಾ ಹಣಕಾಸು ಯೋಜನೆಯ ಖರ್ಚುವೆಚ್ಚದ ಬಗ್ಗೆ ಮಾಹಿತಿ ಪಡೆದು ಅಭಿವೃದ್ಧಿ ಮಾಡುವಂತೆ ತಿಳಿಸಿದರು.
ಇದೆ ಸಂದರ್ಭದಲ್ಲಿ ಸಹಾಯಕ ಅಭಿಯಂತರರು ರಂಗಸ್ವಾಮಿ, ಕೆ.ಆರ್ ಐ.ಡಿ.ಎಲ್ ಅಭಿಯಂತ ಕಾರ್ತಿಕ್, ಪರಿಶಿಷ್ಟ ವರ್ಗಗಳ ತಾಲ್ಲೂಕು ಅಧಿಕಾರಿ ರಾಜೇಶ್ ಸೇರಿದಂತೆ ಇನ್ನಿತರರು ಇದ್ದರು.