(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಸೆ,14- ಮಗು ಕಿಡ್ನಾಪ್ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಸಿನಿಮೀಯ ರೀತಿಯಲ್ಲಿ ಒಂದೇ ದಿನದಲ್ಲಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೊನ್ನೆ ಶುಕ್ರವಾರ ಜನನ ಪ್ರಮಾಣ ಪತ್ರ ಕೊಡಿಸುವುದಾಗಿ ಒಂದುವರೆ ತಿಂಗಳ ಮಗು ವನ್ನು ಕಿಡ್ನಾಪ್ ಮಾಡಲಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಬ್ರೂಸ್ ಪೇಟ್ ಪೊಲೀಸರು
ಶನಿವಾರ ರಾತ್ರಿಯೊಳಗೆ ಪತ್ತೆ ಹಚ್ಚಿದ್ದಾರೆ.
ಘಟನೆಯ ವಿವರ :
ಬೆಣಕಲ್ಲು ಗ್ರಾಮದ ಶ್ರೀದೇವಿ ಮಗುವಿನೊಂದಿಗೆ ಜನನ ಪ್ರಮಾಣ ಪಾತ್ರಕ್ಕಾಗಿ ನಗರದ ಜಿಲ್ಲಾಸ್ಪತ್ರೆಗೆ ಬಂದಿದ್ದರು. ಆಗ ಆಕೆಗೆ ಬಂಧಿತ ಶಮೀಮ್ ಜನನ ಪ್ರಮಾಣ ಪತ್ರ ಪಾಲಿಕೆಯಲ್ಲಿ ಸಿಕ್ತದೆ ಎಂದು ಪುಸಲಾಯಿಸಿ ಕರೆದು ಕೊಂಡು ಹೋಗಿದ್ದಳು. ಶ್ರೀದೇವಿ ಶೌಚಾಲಯಕ್ಕೆ ಹೋಗಿದ್ದಾಗ ಮಗು ಕಿಡ್ನಾಪ್ ಮಾಡಿಕೊಂಡು ಹೋಗಿದ್ದಳು ಶಮೀಮ್.
ಮಗುವನ್ನು ಕದ್ದ ಮಹಿಳೆ ಶಮೀಮ್ ತನ್ನ ಗಂಡ ಇಸ್ಮಯಿಲ್ ಮೂಲಕ ಬಾಷ ಅವರೊಂದಿಗೆ ಸೇರಿ ತೋರಣಗಲ್ಲಿನ ಬಸವರಾಜ್ ಅವರಿಗೆ ಮಕ್ಕಳಾಗಿಲ್ಲವೆಂದು ಮಾರಾಟ ಮಾಡಿದ್ದರು.
ಈಗ ಮಗುವನ್ನು ರಕ್ಷಣೆ ಮಾಡಿ, ಶಮೀಮ್, ಇಸ್ಮಯಿಲ್, ಬಾಷಾ ಹಾಗು ಬಸವರಾಜ್ ಅವರನ್ನು ಬಂಧಿಸಲಾಗಿದೆ ಎಂದು ಎಸ್ಪಿ ಡಾ.ಶೋಭಾರಾಣಿ ತಿಳಿಸಿದ್ದಾರೆ.























