ಬೆಟ್ಟದ ತಪ್ಪಲಿನಲ್ಲಿ ವಾಸಿಸುವ ಜನರಿಗೆ ಸೌಲಭ್ಯ ತಲುಪಿಸಲು ಪ್ರಯತ್ನ ಮಾಡುತ್ತೇನೆ ಮಂಜುನಾಥ್

ಸಂಜೆವಾಣಿ ವಾರ್ತೆ
ಹನೂರು ಜ 29:-
ಮಲೆ ಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿ ವಾಸಿಸುವ ನಿಮಗೆಲ್ಲಾ ಸರ್ಕಾರದಿಂದ ಸಿಗುವ ಅಗತ್ಯ ಮೂಲಭೂತ ಸೌಲಭ್ಯಗಳು ದೊರಕಿಸಿಕೊಡುವ ನಿಟ್ಟಿನಲ್ಲಿ ನಾನು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಎಂ.ಆರ್ ಮಂಜುನಾಥ್ ತಿಳಿಸಿದರು.


ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದ ಎಂ.ಪಿ ನಗರದಲ್ಲಿ ನಡೆದ ಶ್ರೀ ಜಡೆಮುನೇಶ್ವರ, ಹಾಗೂ ರಾಜ ಮುನೇಶ್ವರ ದೇವಸ್ಥಾನದ ಉದ್ಘಾಟನೆ ಕುಂಭಾಭಿಷೇಕ ಪೂಜಾ ಕಾರ್ಯಕ್ರಮ ಹಾಗೂ ಡಾII ಕೆ.ಶಿವರಾಮ್ ಅವರ ಭಾವಚಿತ್ರ ಶಿಲಾನ್ಯಾಸ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.


ಹನೂರು ವಿಧಾನ ಸಭಾ ಕ್ಷೇತ್ರವು ಭೌಗೋಳಿಕವಾಗಿ ವಿಸ್ತೀರ್ಣವಾಗಿದ್ದು ಮತದಾರರು ನನಗೆ ನೀಡಿರುವ ಈ ಅವಕಾಶವನ್ನು ಸದುಪಯೋಗ ಮಾಡಿಕೊಂಡು ಈ ಭಾಗದಲ್ಲಿ ಜನರ ಋಣ ತೀರಿಸಲು ಶ್ರಮಿಸುತ್ತಿದ್ದೇನೆ ಎಂದರಲ್ಲದೇ ಈ ದಿನ ಕೆ ಶಿವರಾಂ ಅವರನ್ನು ನೆನೆಯುತ್ತಿದ್ದು ಅವರು ಡಾ. ಬಿ.ಆರ್ ಅಂಬೇಡ್ಕರ್ ಅವರ ಆದರ್ಶಗಳನ್ನು ಮೈಗೊಡಿಸಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದರು.


ಪೆÇೀಷಕರ ಕೆ.ಶಿವರಾಂ ಅವರನ್ನು ನಿಮ್ಮ ಮಕ್ಕಳಲ್ಲಿ ಕಾಣುವ ಮೂಲಕ ಉತ್ತಮ ವಿದ್ಯಾಭ್ಯಾಸ ಕೊಡಿಸಿ ಉನ್ನತ ಹುದ್ದೆಗಳನ್ನು ಅಲಂಕಾರಿಸುವ ಮೂಲಕ ದೇಶದ ಸೇವೆ ಮಾಡಲು ಸ್ಪೂರ್ತಿ ನೀಡಬೇಕು ಎಂದರಲ್ಲದೇ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಷು ನಡೆಯಬೇಕು ಎಂದು ತಿಳಿಸಿದ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನನ್ನ ಪುಣ್ಯ ಎಂದು ಭಾವಿಸಿದರು.
ಮೈಸೂರು ಊರಿ ಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ್ ಸ್ವಾಮಿಯವರು ಮಾತನಾಡಿ ಸಂವಿಧಾನದ ಆಶಯಗಳನ್ನು ಜಾರಿ ಮಾಡುವ ಕೆಲಸವನ್ನು ಶ್ರೀ ಮಲೈ ಮಹದೇಶ್ವರರು ಹಿಂದೆಯೇ ಮಾಡಿದ್ದಾರೆ ಸರ್ವ ಜನಾಂಗದ ಶಾಂತಿಯ ತೋಟವೆಂದರೆ ಶ್ರೀ ಮಹದೇಶ್ವರರ ಕ್ಷೇತ್ರ ಜಾತಿ ವರ್ಣ ವರ್ಗವನ್ನು ಮೀರಿದಂತಹ ಕ್ಷೇತ್ರವಾಗಿದೆ.


ಭಕ್ತಿ ಶ್ರದ್ದೆ ಹಿಂದ ಇರುವ ತಾಣ ಧಾರ್ಮಿಕ ಸಾಮಾಜಿಕ ಆರ್ಥಿಕವಾಗಿ ಎಲ್ಲಾ ಸಮುದಾಯಗಳನ್ನು ಒಟ್ಟಿಗೆ ಸೇರಿಸುವ ಕ್ಷೇತ್ರವಾಗಿದೆ. ಪ್ರಜಾಪ್ರಭುತ್ವದ ಆಶಯಗಳನ್ನು ಜಾರಿ ಮಾಡುವ ಕ್ಷೇತ್ರ ಇದಾಗಿದೆ ಈಗಾಗಿ ಬೆಟ್ಟದಲ್ಲಿ ಜಡೆ ಮುನೇಶ್ವರ ದೇವಸ್ಥಾನವನ್ನು ನಿರ್ಮಾಣ ಮಾಡಿರುವುದು ಒಳ್ಳೆಯ ವಿಚಾರ ನೀವೆಲ್ಲರೂ ಪ್ರೀತಿ ಮಮತೆ ಸೋದರತೆ ಬಾವೈಕ್ಯತೆ ಯಿಂದ ಜೀವನ ನಡೆಸಿ ಎಲ್ಲರಿಗೂ ಒಳಿತಾಗಲಿ ಎಂದು ತಿಳಿಸಿದರು.


ಛಲವಾದಿ ಮಹಾಸಭಾ ರಾಜ್ಯಧಕ್ಷರು ವಾಣಿ ಶಿವರಾಮ್ ಅವರು ಮಾತನಾಡಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿ ಲಕ್ಷಾಂತರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ ಜೊತೆಗೆ ನಿವೇಶನ ಇಲ್ಲದ ಬಡ ಜನರಿಗೆ ಸರ್ಕಾರದಿಂದ ನಿವೇಶನ ಮಂಜೂರು ಮಾಡುವ ಕೆಲಸ ಮಾಡಿದ್ದಾರೆ.


ಮಲೆ ಮಹದೇಶ್ವರ ಬೆಟ್ಟದಲ್ಲೂ ಕೂಡ ನನ್ನ ಪತಿಯವರು ಸಹಕಾರದಿಂದ ಛಲವಾದಿ ಸಮುದಾಯದ ಜನರಿಗೆ ಮನೆ ನಿರ್ಮಾಣಕ್ಕಾಗಿ ಮೂರು ಎಕರೆ ಭೂಮಿಯನ್ನು ಸರ್ಕಾರದ ಮಟ್ಟದಲ್ಲಿ ಮಾತನಾಡಿ ಕೊಡಿಸಿದ್ದಾರೆ.ಎಂಬುದು ತುಂಬಾ ಎಮ್ಮೆಯ ವಿಚಾರ ಈ ದಿನ ಅವರ ಭಾವಚಿತ್ರವಿರುವ ಶೀಲಾನ್ಯಾಸ ಮಾಡಿರುವುದಕ್ಕೆ ನಿಮ್ಮೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಶಿವರಾಮ್ ಅವರ ಮೇಲೆ ಇರುವ ನಿಮ್ಮ ಅಭಿಮಾನಕ್ಕೆ ನಾನು ಸದಾ ಚಿರಋಣಿಯಾಗಿರುತ್ತೇನೆ ಎಂದು ತಿಳಿಸಿದರು.


ಸಾಲೂರು ಬೃಹನ್ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳು ಮಾತನಾಡಿದರು. ಸಂಸ್ಥಾನ ಮಠದ ಬಸವನಾಗಿ ದೇವಾ ಸ್ವಾಮಿಗಳು, ಪ್ರಾಧಿಕಾರದ ಕಾರ್ಯದರ್ಶಿ ರಘು, ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ, ದತ್ತೇಶ್ ಕುಮಾರ್, ನಿಶಾಂತ್, ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ದೀಪಕ್, ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಮಂಜೇಶ್ ಗೌಡ, ಅಣಗಳ್ಳಿ ಬಸವರಾಜು, ಮಲೆ ಮಹದೇಶ್ವರ ಬೆಟ್ಟದ ಗ್ರಾಮ ಪಂ ಅಧ್ಯಕ್ಷೆ ಅರ್ಚನಾ, ಶ್ರೀ ಜಡೆಮುನೇಶ್ವರ ಸ್ವಾಮಿ ದೇವಸ್ಥಾನದ ಪ್ರತಿಷ್ಠಾಪಕರು ಕೃಷ್ಣ, ವಿಜಯ್ ಕುಮಾರ್ ಸೇರಿದಂತೆ ಇನ್ನಿತರರು ಇದ್ದರು.