ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಹೋಗುವ ಭಕ್ತಾದಿಗಳು ನಿಗಧಿತ ಸಮಯದಲ್ಲಿ ಸಂಚರಿಸಿ: ಭಾಸ್ಕರ್

ಸಂಜೆವಾಣಿ ವಾರ್ತೆ
ಹನೂರು.ಜ.24 :-
ಮಹಾಶಿವರಾತ್ರಿ ದೀಪಾವಳಿ ಯುಗಾದಿ. ಮಹಾಲಯ ಅಮಾವಾಸ್ಯೆಗಳಲ್ಲಿ ಕಾಡಿನ ಮಧ್ಯ ಭಾಗಗಳಲ್ಲಿ ಕಾಲ್ನಡಿಗೆಯಲ್ಲಿ ಮಹದೇಶ್ವರ ಬೆಟ್ಟಕ್ಕೆ ಹೋಗುವ ಸಾರ್ವಜನಿಕರು ಭಕ್ತಾದಿಗಳು ನಿಗಧಿತ ಸಮಯದಲ್ಲಿ ಸಂಚರಿಸುವ ಮೂಲಕ ಯಾತ್ರಿಗಳು ನಿಯಮಾನುಸಾರ ಪಾಲನೆ ಮಾಡುವ ಮೂಲಕ ಸಹಕಾರ ನೀಡಬೇಕು ಎಂದು
ಮಲೈ ಮಹದೇಶ್ವರ ಬೆಟ್ಟ ವಲಯ ಅರಣ್ಯ ಅಧಿಕಾರಿ ಭಾಸ್ಕರ್ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.


ಮಲೆ ಮಹದೇಶ್ವರ ಬೆಟ್ಟಕ್ಕೆ ಹಬ್ಬದ ವಿಶೇಷ ದಿನಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪಾದಯಾತ್ರಿಕರು ಕಾಲ್ನಡಿಗೆಯಲ್ಲಿ ಕಾಡಿನ ದಾರಿ ಮೆಟ್ಟಿಲುಗಳು ಮೂಲಕ ತೆರಳುವಾಗ ಭಕ್ತಾದಿಗಳು ಗುಂಪು ಗುಂಪಾಗಿ ಹೋಗಬೇಕು. ಕಾಡಿನಲ್ಲಿ ಹುಲಿ ಚಿರತೆ ಆನೆ ಕರಡಿ ಹಾಗೂ ಇನ್ನಿತರ ಕಾಡು ಪ್ರಾಣಿಗಳಿವೆ ಆದರಿಂದ ಅರಣ್ಯ ಇಲಾಖೆಯ ನಿಯಮಾನುಸಾರ ಭಕ್ತಾದಿಗಳು ಸಹಕರಿಸಬೇಕು.


ಮಲೆ ಮಹದೇಶ್ವರ ಬೆಟ್ಟಕ್ಕೆ ವಿಶೇಷ ದಿನಗಳಲ್ಲಿ ಹೋಗುವ ಭಕ್ತಾದಿಗಳು ಒಬ್ಬೊಬ್ಬರು ಯಾರು ಹೋಗಬಾರದು. ಭಕ್ತಾದಿಗಳು ದಯವಿಟ್ಟು ಪ್ಲಾಸ್ಟಿಕ್ ತಟ್ಟೆಗಳಲ್ಲಿ ಊಟ ಮಾಡಿ ಬಿಸಾಕಬಾರದು ಅದರ ಬದಲು ಅಡಿಕೆ ತಟ್ಟೆಯಲ್ಲಿ ಊಟ ಮಾಡಿ ಕಂಡ ಕಂಡ ಜಾಗಗಳೆಲ್ಲ ಹಾಕಬಾರದು ಅರಣ್ಯದೊಳಗೆ ಕರ್ಪೂರವನ್ನು ಹಚ್ಚಬಾರದು ಪ್ಲಾಸ್ಟಿಕ್ ಬಾಟ್ಲುಗಳನ್ನು ಎಸೆಯದೆ ಅರಣ್ಯ ಸಂರಕ್ಷಣೆಗೆ ಸಹಕಾರ ನೀಡಬೇಕು.
ಈಗಾಗಲೇ ಜಿಲ್ಲಾ ಅಪಾರ ಜಿಲ್ಲಾಧಿಕಾರಿ ಅವರು ಮಲೆ ಮಾದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಬರುವ ಭಕ್ತಾದಿಗಳಿಗೆ ಬೆಳಗ್ಗೆ 6-00 ರಿಂದ ಸಂಜೆ 6-00 ತನಕ ಹೋಗಬೇಕು ಎಂಬ ಆದೇಶ ಹೊರಡಿಸಿದ್ದಾರೆ. ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟವನ್ನು ಉಳಿಸುವುದು ಬೆಳೆಸುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಾಗಿದೆ. ಭಕ್ತಾದಿಗಳು ಮತ್ತು ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಜೊತೆಗೆ ಪರಿಸರ ಮತ್ತು ವನ್ಯಪ್ರಾಣಿಗಳ ಉಳಿಸುವುದು ಅಷ್ಟೇ ಮುಖ್ಯ ಆದರಿಂದ ಭಕ್ತಾದಿಗಳು ಮತ್ತು ಸಾರ್ವಜನಿಕರು ಸಹಕಾರ ನೀಡಬೇಕು ಎಂದು ತಿಳಿಸಿದರು.